ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವು | Shivamogga drowned dead Accident death Accident News


ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವು

ಪ್ರಾತಿನಿಧಿಕ ಚಿತ್ರ

ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆಯ ಕೆರೆಯಲ್ಲಿ ನಡೆದಿದೆ. ಕೆರೆಯಲ್ಲಿ ಮುಳುಗಿ ಯುವಕ ಮಹಾದೇವ (20) ಸಾವನ್ನಪ್ಪಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗೋಕರ್ಣ: ಮಣ್ಣು ಕುಸಿದು ವ್ಯಕ್ತಿ ಸಾವು
ಮಣ್ಣು ತೆಗೆಯುತ್ತಿದ್ದ ವೇಳೆ ಗುಡ್ಡ ಕುಸಿದು ವ್ಯಕ್ತಿ ದುರ್ಮರಣವಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ. ಗೋಕರ್ಣದ ಚೌಡಗೇರಿಯಲ್ಲಿ ಮಣ್ಣು ತೆಗೆಯುವಾಗ ಘಟನೆ ಸಂಭವಿಸಿದೆ. ಶಿಳ್ಯಾದ ಮೋಹನದಾಸ್ ಹಮ್ಮಣ್ಣ ನಾಯಕ (56) ಎಂಬವರು ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿಳ್ಯಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಖಾಸಗಿ ಜಾಗದಲ್ಲಿ ಗುತ್ತಿಗೆದಾರ ಗುಡ್ಡದ ಮಣ್ಣು ತೆಗೆಸುತ್ತಿದ್ದ. ಮಣ್ಣು ತೆಗೆಯುವ ಸ್ಥಳದಲ್ಲಿ ಸೂಪರ್​ವೈಸಿಂಗ್​ ಮಾಡುತ್ತಿದ್ದರು. ಎಡಭಾಗದಿಂದ ಮಣ್ಣು ತೆಗೆವಾಗ ಬಲದಿಂದ ಮಣ್ಣು ಕುಸಿತ ಉಂಟಾಗಿದೆ. ದಿಢೀರ್​ ಮಣ್ಣು ಕುಸಿದು ಸೂಪರ್​ವೈಸರ್​ ನಾಯಕ ಸಾವನ್ನಪ್ಪಿದ್ದಾರೆ. ಖಾಸಗಿ ಜಾಗದ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ: ಬೈಕ್ ಅಪಘಾತ, ಸವಾರ ಸ್ಥಳದಲ್ಲೇ ಸಾವು
ಮಲೆ ಮಹದೇಶ್ವರ ಬೆಟ್ಟದ 11ನೇ ತಿರುವಿನಲ್ಲಿ ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೆಟ್ಟದಲ್ಲಿ ಘಟನೆ ನಡೆದಿದೆ. ಮೈಸೂರಿನ ತಲಕಾಡು ನಿವಾಸಿ ಮುತ್ತುರಾಜ್(28) ಸಾವನ್ನಪ್ಪಿದ್ದಾರೆ. ತಲಕಾಡಿನಿಂದ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ನಡೆದ ಅಪಘಾತ ನಡೆದಿದೆ. ಮಲೆ ಮಹದೇಶ್ವರ ಬೆಟ್ಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹಾಸನ: ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ, ಬೈಕ್ ಸವಾರ ಸಾವು
ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗ್ರಾಮ ಉದ್ದೂರು ಹೊಸಳ್ಳಿ ಬಳಿ ನಡೆದಿದೆ. ಇಲ್ಲಿನ ನಂಜುಂಡ ಆರಾಧ್ಯ (32) ಎಂಬವರು ಸಾವನ್ನಪ್ಪಿದ್ದಾರೆ. ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು: ಕಾಫಿ ಎಸ್ಟೇಟ್​ನಲ್ಲಿ ನವಜಾತು ಶಿಶುವಿನ ಶವ ಪತ್ತೆ
ಕಾಫಿ ಎಸ್ಟೇಟ್​ನಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾದ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಾರಗದ್ದೆ ಬಳಿ ನಡೆದಿದೆ. ಇಲ್ಲಿನ ಬಾಳೆ ತೋಟದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. 2 ದಿನಗಳ ಹಿಂದೆ ಜನಿಸಿದ್ದ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಬೈಕ್- ಕೆಎಸ್​ಆರ್​ಟಿಸಿ ನಡುವೆ ಅಪಘಾತ; ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

ಇದನ್ನೂ ಓದಿ: ಚಿತ್ರದುರ್ಗ: ವಾಕಿಂಗ್ ಮುಗಿಸಿ ಮನೆಗೆ ತೆರಳಿದ್ದ ವೇಳೆ ಹೃದಯಾಘಾತದಿಂದ ಡಿವೈಎಸ್​ಪಿ ಸಾವು

TV9 Kannada


Leave a Reply

Your email address will not be published.