ಶಿವಮೊಗ್ಗ, ಕೋಲಾರ ಜಿಲ್ಲಾಧಿಕಾರಿ ಬದಲಾವಣೆ: ಸ್ಥಳ ನಿಯೋಜನೆಗೆ ಕಾಯುತ್ತಿದ್ದ ಐಎಎಸ್ ಅಧಿಕಾರಿಗಳಿಗೆ ಪೋಸ್ಟಿಂಗ್ | Kolar Shivamogga DC Transfer IAS Officers Waiting for Posting got New Responsibilities


ಶಿವಮೊಗ್ಗ, ಕೋಲಾರ ಜಿಲ್ಲಾಧಿಕಾರಿ ಬದಲಾವಣೆ: ಸ್ಥಳ ನಿಯೋಜನೆಗೆ ಕಾಯುತ್ತಿದ್ದ ಐಎಎಸ್ ಅಧಿಕಾರಿಗಳಿಗೆ ಪೋಸ್ಟಿಂಗ್

ವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ ಡಾ.ಸೆಲ್ವಮಣಿ ಬುಧವಾರ ಅಧಿಕಾರ ಸ್ವೀಕರಿಸಿದರು.

ಬೆಂಗಳೂರು: ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ ಡಾ.ಸೆಲ್ವಮಣಿ ಬುಧವಾರ ಅಧಿಕಾರ ಸ್ವೀಕರಿಸಿದರು. 2019ರ ಆಗಸ್ಟ್​ನಿಂದ ಕೆ.ಬಿ.ಶಿವಕುಮಾರ್ ಅವರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಾ.ಸೆಲ್ವಮಣಿ ಶಿವಮೊಗ್ಗದ ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡರು. ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಡಾ.ಆರ್.ಸೆಲ್ವಮಣಿ ಅವರನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ. ದಿಢೀರ್ ವರ್ಗಾವಣೆಗೆ ಕೋಲಾರ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದಲ್ಲಿ ಇಬ್ಬರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರ್ಕಾರದ ಕ್ರಮದ ಬಗ್ಗೆ ಜನರಲ್ಲಿ ಅತೃಪ್ತಿ ವ್ಯಕ್ತವಾಗಿದೆ. ಕೇವಲ ಎರಡು ದಿನಗಳ ಹಿಂದಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಕೋಲಾರಕ್ಕೆ ಬಂದು ಒಂದು ವರ್ಷ ಪೂರೈಸುವ ಮೊದಲೇ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಜಿಲ್ಲೆಯ ನಾಗರಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆರು ತಿಂಗಳಿಗೊಮ್ಮೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಜಿಲ್ಲೆಯು ಅಭಿವೃದ್ಧಿಯಾಗುವುದು ಹೇಗೆ ಎಂದು ಜನರು ಪ್ರಶ್ನಿಸಿದ್ದಾರೆ. ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳ ನಿಯೋಜನೆಗೆ ಕಾಯುತ್ತಿದ್ದ ಕೆಲ ಐಎಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರವು ಬುಧವಾರ ಸ್ಥಾನ ತೋರಿಸಿದೆ. ಬಿ.ಶರತ್ ಅವರನ್ನು ಬಿಬಿಎಂಪಿ ವಿಶೇಷ ಆಯುಕ್ತರಾಗಿ, ಡಾ.ಎಂ.ಆರ್.ರವಿ ಅವರನ್ನು ಕೆಎಸ್​​ಐಐಡಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ನಗರ ನೀರುಸರಬರಾಜು ಮತ್ತು ನೈರ್ಮಲ್ಯ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ಕೆ.ಪಿ.ಮೋಹನ್ ರಾಜ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಬಿ.ಶರತ್, ಚಾಮರಾಜನಗರ ಜಿಲ್ಲಾಧಿಕಾರಿ ಆಗಿದ್ದ ಡಾ.ಎಂ.ಆರ್.ರವಿ ಅವರನ್ನೂ ವರ್ಗಾವಣೆ ಮಾಡಲಾಗಿದೆ.

ಹಲವು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ, ವಿವಿಧ ಸ್ಥಾನಗಳಿಗೆ ನಿಯುಕ್ತಿ
ಐಪಿಎಸ್ ಬಡ್ತಿ ಪಡೆದಿದ್ದ ಪೊಲೀಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಎಂ.ವಿ.ಚಂದ್ರಕಾಂತ್ (ಎಸ್​ಪಿ, ಅರಣ್ಯ ವಿಭಾಗ, ಕೊಡಗು), ಮಧುರವೀಣಾ (ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ), ಚೆನ್ನಬಸವಣ್ಣ ಲಂಗೋಟಿ (ಎಸ್​ಪಿ, ಗುಪ್ತದಳ, ಬೆಳಗಾವಿ), ಜಯಪ್ರಕಾಶ್ (ಎಸ್​ಪಿ, ಭ್ರಷ್ಟಾಚಾರ ನಿಗ್ರಹ ದಳ, ದಾವಣಗೆರೆ), ಕೆ.ಪಿ.ಅಂಜಲಿ (ಎಸ್​ಪಿ, ಕರ್ನಾಟಕ ಲೋಕಾಯುಕ್ತ), ಎಂ.ನಾರಾಯಣ (ಎಸ್​ಪಿ, ಗುಪ್ತದಳ, ಬೆಂಗಳೂರು), ಎಂ.ಮುತ್ತುರಾಜ್ (ಎಸ್​ಪಿ, ಗುಪ್ತದಳ, ಮೈಸೂರು), ಶೇಖರ್ ಎಚ್.ಟೆಕ್ಕಣ್ಣನವರ್ (ಎಸ್​ಪಿ, ಐಎಸ್​ಡಿ), ರವೀಂದ್ರ ಕಾಶಿನಾಥ್ ಗಡಾಡಿ, ಎಸ್​ಪಿ (ಹೆಸ್ಕಾಂ, ಹುಬ್ಬಳ್ಳಿ), ಅನಿತಾ ಹದ್ದಣ್ಣವರ್ (ಎಸ್​ಪಿ, ಲೋಕಾಯುಕ್ತ, ವಿಜಯಪುರ), ಎ.ಕುಮಾರಸ್ವಾಮಿ (ಎಸ್​ಪಿ, ಲೋಕಾಯುಕ್ತ, ಮಂಗಳೂರು), ಸಾರಾ ಫಾತೀಮಾ (ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ), ರಶ್ಮಿ ಪರದ್ದಿ (ಎಸ್​ಪಿ, ಚೆಸ್ಕಾಂ, ಮೈಸೂರು), ಎಂ.ಎ.ಅಯ್ಯಪ್ಪ (ಎಸ್​ಪಿ, ಕೆಪಿಸಿಎಲ್ ವಿಜಿಲೆನ್ಸ್​), ಡಾ.ಶಿವಕುಮಾರ್ (ಎಸ್​ಪಿ, ಗುಪ್ತದಳ, ಬೆಂಗಳೂರು), ಮಲ್ಲಿಕಾರ್ಜುನ ಬಾಲದಂಡಿ (ಎಸ್​ಪಿ, ಗುಪ್ತದಳ, ಬೆಂಗಳೂರು), ಅಮರನಾಥ ರೆಡ್ಡಿ (ಎಸ್​ಪಿ, ಭ್ರಷ್ಟಾಚಾರ ನಿಗ್ರಹ ದಳ).

11 ಐಪಿಎಸ್​ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಮುರುಗನ್ (ಎಡಿಜಿಪಿ, ಲಾಜಿಸ್ಟಿಕ್ ಮತ್ತು ಮಾಡರ್ನೈಸೇಷನ್), ಕೆ.ವಿ.ಶರತ್​ ಚಂದ್ರ (ಎಡಿಜಿಪಿ, ಅಪರಾಧ ವಿಭಾಗ), ಎಂ.ನಂಜುಂಡಸ್ವಾಮಿ (ಎಡಿಜಿಪಿ, ಗೃಹರಕ್ಷಕ ದಳ), ಸೌಮೇಂದು ಮುಖರ್ಜಿ (ಐಜಿಪಿ, ಗುಪ್ತದಳ), ಎಸ್.ರವಿ (ಐಜಿಪಿ, ಕೆಎಸ್​ಆರ್​ಪಿ, ಬೆಂಗಳೂರು), ವಿಪುಲ್ ಕುಮಾರ್, (ಐಜಿಪಿ, ಆಂತರಿಕ ಭದ್ರತಾ ವಿಭಾಗ), ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ (ಐಜಿಪಿ, ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ), ಲಾಬೂರಾಮ್ (ಐಜಿಪಿ, ಹು-ಧಾ ನಗರ ಪೊಲೀಸ್ ಆಯುಕ್ತ, ಬಡ್ತಿ ನೀಡಿ ಪೊಲೀಸ್ ಆಯುಕ್ತರ ಹುದ್ದೆಯಲ್ಲೇ ಮುಂದುವರಿಕೆ), ಸಂದೀಪ್ ಪಾಟೀಲ್ (ಐಜಿಪಿ, ಹೆಚ್ಚುವತಿ ಪೊಲೀಸ್ ಆಯುಕ್ತ, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ), ಡಾ.ಪಿ.ಎಸ್.ಹರ್ಷ (ಐಜಿಪಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ), ವಿಕಾಸ್ ಕುಮಾರ್ (ಐಜಿಪಿ, ವ್ಯವಸ್ಥಾಪಕ ನಿರ್ದೇಶಕರು, ಎಂಎಸ್​ಐಎಲ್).

ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ರಮಣ್ ಗುಪ್ತಾ (ಡಿಐಜಿಪಿ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ), ಡಾ.ತ್ಯಾಗರಾಜನ್ (ಡಿಐಜಿಪಿ, ನೇಮಕಾತಿ ವಿಭಾಗ, ಬೆಂಗಳೂರು), ಡಾ.ಬೋರಲಿಂಗಯ್ಯ (ಡಿಐಜಿಪಿ, ಬೆಳಗಾವಿ ಪೊಲೀಸ್​ ಆಯುಕ್ತ), ರಾಮ್ ನಿವಾಸ್ ಸೆಪಟ್ ಮತ್ತು ಡಾ.ರೋಹಿಣಿ ಕಟೋಚ್ (ಸಹಾಯಕ ನಿರ್ದೇಶಕರು, ಹೈದರಾಬಾದ್​ನಲ್ಲಿರುವ ನ್ಯಾಷನಲ್ ಪೊಲೀಸ್ ಅಕಾಡೆಮಿ).

TV9 Kannada


Leave a Reply

Your email address will not be published. Required fields are marked *