Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 89

Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 90

ಶಿವಮೊಗ್ಗ: ಹಳ್ಳಿಯಲ್ಲಿದ್ದರೂ ಯಾವುದಕ್ಕೂ ಕಡಿಮೆ ಇಲ್ಲದಂತೆ ಜೀವನ ನಡೆಸಿದ್ಳು. ಆ ಸುಂದರಿಗೆ ಮದುವೆಯಾಗಿ ಮಗುವಿತ್ತು. ಆತನೂ ವಿವಾಹಿತನಾಗಿದ್ದ. ಆದ್ರೆ ಮಲೆನಾಡ ತಪ್ಪಲಿನಲ್ಲಿ ಇಬ್ಬರ ನಡುವೆ ಪ್ರೀತಿ ಅರಳಿತ್ತು. ಜೀವನದುದ್ದಕ್ಕೂ ನಿಗೂಢವಾಗಿ ಬದುಕಿದ್ದ ಅವರು ಕಡೆಗೆ ನಿಗೂಢವಾಗಿಯೇ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಆ ಎರಡು ಸಾವಿನ ಹಿಂದಿರುವ ಅಸಲಿಯತ್ತೇನು ಎಂಬುದನ್ನ ಹೇಳ್ತೀವಿ ನೋಡಿ.

ಆ ಘಟನೆಯಿಂದ ಇಡೀ ಮಲೆನಾಡು ಶಿವಮೊಗ್ಗ ತಲ್ಲಣಗೊಂಡಿತ್ತು. ಅಂದಗಾತಿಯೊಬ್ಬಳು ನಿಗೂಢವಾಗಿಯೇ ಬದುಕಿ, ಕಡೆಗೆ ಸಾವನ್ನಪ್ಪುವ ಮೂಲಕ ಮತ್ತಷ್ಟು ನಿಗೂಢತೆಗಳು ಜನ್ಮ ಪಡೆಯುವಂತೆ ಮಾಡಿದ ಘಟನೆ ಅದು. ಆ ಮಲೆನಾಡ ತಪ್ಪಲಿನಲ್ಲಿ 12 ದಿನಗಳ ಅಂತರದಲ್ಲಿ ಇಬ್ಬರು ಸಾವಿನ ಮನೆ ಸೇರಿದ್ರು. ಆ ಇಬ್ಬರ ಸಾವು ಮುಗಿಯದ ಅಧ್ಯಾಯವಾಗಿ ಪರಿಣಮಿಸಿದೆ.

ಮಾಡ್ಬಾರ್ದು ಮಾಡಿದ್ರೆ ಆಗ್ಬಾರ್ದು ಆಗುತ್ತೆ ಅಂತ್ತಾರಲ್ವಾ..? ಅಂಗಾಯ್ತು ನೋಡಿ. ದುಡ್ಡಿದೆ ಎಂದ ಮಾತ್ರಕ್ಕೆ ಹೇಗೋಗೋ ಬದುಕಿದ್ರೆ ಕಡೆಗೆ ಅದ್ರ ಫಲಿತಾಂಶ ಕೂಡ ತುಂಬಾ ಭೀಕರವಾಗಿರುತ್ತಲ್ವಾ..? ಇಂತಹದ್ದೇ ಒಂದು ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಆನೆಗದ್ದೆ ಗ್ರಾಮದಲ್ಲಿ ಕಳೆದ ಜೂನ್ 3 ರಂದು ನಡೆದಿತ್ತು. 12 ದಿನಗಳ ಅಂತರದಲ್ಲಿ ನಡೆದ ಇಬ್ಬರ ಆತ್ಮಹತ್ಯೆ ಪ್ರಕರಣದ ಒಂದೊಂದೇ ರಹಸ್ಯಗಳು ಗರಿ ಬಿಚ್ಚಿಕೊಳ್ಳುತ್ತಿವೆ.

ಬಾರ್ ಗರ್ಲ್ ಆಗಿದ್ದ ಸುಂದರಿಯ ಬಾಳಲ್ಲಿ ನಡೆದಿದ್ದೇನು?
ಬೆಂಗಳೂರು ಟು ಮುಂಬೈ- ಮುಂಬೈ ಟು ಮಲೇಷ್ಯಾ
ಅಂದಗಾತಿಯ ಅಂತ್ಯಕ್ಕೆ ಹೈ-ಫೈ ಜೀವನ ಕಾರಣವಾಯ್ತಾ?

ಮೊದಲ ನೋಟದಲ್ಲೇ ಎಂತಹವರ ಕಣ್ ಸೆಳೆಯುವ ಸೌಂದರ್ಯ ಹೊಂದಿದ್ದ ಮಂಜುಳಾ ಆರಂಭದ ಶಿಕ್ಷಣ ಸ್ಥಳೀಯವಾಗಿ ಪಡೆದ ನಂತರ ಹೋಗಿದ್ದು ಬೆಂಗಳೂರಿಗೆ. ಕೆಲ ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ ಮಂಜುಳಾ ಮುಂದೇ ಮುಂಬೈ ಕಡೆ ಪ್ರಯಾಣಿ ಬೆಳೆಸಿದ್ಳು. ಮುಂಬೈ ನಬಾರ್ ವೊಂದರಲ್ಲಿ ಬಾರ್ ಗರ್ಲ್ ಆಗಿ ಕೆಲಸ ಮಾಡ್ತಿದ್ಳು. ಇದು ವೇಳೆ ಮಂಜುಳಾಗೆ ಚೆನ್ನೈ ಮೂಲದ ಮಲೇಷಿಯಾ ಉದ್ಯಮಿ ರುದ್ರಬಾಬುನ ಪರಿಚಯವಾಗಿತ್ತು. ಪರಿಚಯ ಪ್ರೀತಿ ಎಂಬ ಪ್ರಪಂಚವನ್ನು ಪರಿಚಯಿಸಿತ್ತು.

ಮುಂದೆ ಇಬ್ಬರೂ ಮದುವೆ ಎಂಬ ನೌಕೆ ಏರಿ ಮಲೇಷ್ಯಾದ ಕಡೆ ಪ್ರಯಾಣಿಸಿದ್ರು. ಆರಂಭದಲ್ಲಿ ಎಲ್ಲವು ಚೆನ್ನಾಗಿಯೇ ಇತ್ತು. ಗೆಳೆತನದೊಂದಿಗೆ ಆರಂಭವಾದ ಸಂಬಂಧ ನಂತರ ಪ್ರೀತಿಗೆ ತಿರುಗಿ ವಿವಾಹದೊಂದಿಗೆ ಅಂತ್ಯ ಕಂಡಿತು. ಕೆಲ ಸಮಯ ಪತಿಯೊಂದಿಗೆ ಮಂಜುಳಾ ಮಲೇಷಿಯಾದಲ್ಲಿ ನೆಲೆಸಿದ್ದರು. ಸುಂದರ ಸಂಸಾರಕ್ಕೆ ಮಗು ಕೂಡ ಜೊತೆಯಾಗಿತ್ತು. ನಂತರ ಸಂಸಾರದಲ್ಲಿ ವಿರಸ ಮೂಡಿ ಮಂಜುಳಾ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ರು. ಹೀಗಿದ್ದ ಮಂಜುಳಾ ಮೊನ್ನೆ ನಿಗೂಢವಾಗಿ ಸಾವನಪ್ಪಿದ್ರು.

ಸುಂದರಿಯ ಸಾವಿನ ಹಿಂದೆ ಅಕ್ರಮ ಸಂಬಂಧದ ವಾಸನೆ?
ಪತ್ನಿ ಬೋರು ಮಂಜುಳಾ ಜೊತೆ ಚಾಟಿಂಗ್ ಬಲು ಜೋರು
ಮಂಜುಳಾ ಜೊತೆ ಮೋಹ.. ಪತ್ನಿಗೆ ಮಾಡಿದ್ನಾ ದ್ರೋಹ?

ಹೌದು.. ಕೇವಲ 12 ದಿನದ ಅಂತರದಲ್ಲಿ ಶಿವಮೊಗ್ಗದಲ್ಲಿ ನಡೆದ ಯುವಕ ಉದಯ ಕುಮಾರ ಹಾಗೂ ಯುವತಿ ಮಂಜುಳಾರ ಆತ್ಮಹತ್ಯೆಯ ಹಿಂದೆ ಅಕ್ರಮ ಸಂಬಂಧದ ಆರೋಪ ಕೇಳಿ ಬರುತ್ತಿದೆ. ಮಲೇಷ್ಯಾದಲ್ಲಿ ದೊಡ್ಡ ಉದ್ಯಮ ಹೊಂದಿರುವ ಕೋಟ್ಯಾಧಿಪತಿ ಪತಿಯಿಂದ ದೂರವಾದ ನಂತರ ಮಂಜುಳಾ ತವರು ಮನೆ ಸೇರ್ಕೊಂಡಿದ್ಳು. ಇದೇ ವೇಳೆ ಮಂಜುಳಾಗೆ ಉದಯ್ ಕುಮಾರ್ ಪರಿಚಯವಾಗಿದ್ದ. ಮಂಜುಳಾನ್ನು ನೋಡುತ್ತಿದ್ದಂತೆಯೇ ಉದಯ್ ಕುಮಾರ್ ಮನದದಲ್ಲಿ ಪ್ರೀತಿಯ ಕಾರಂಜಿ ಚಿಮ್ಮುತ್ತಿತ್ತು. ಮಿಂಚಾಗಿ ಮಂಜುಳಾ ಬರಲು ಉದಯ್ ನಿಗೆ ನಿಂತಲ್ಲಿಯೇ ಮಳೆಗಾಲ, ಚಳಿಗಾಲ ಎಲ್ಲವೂ ಶುರುವಾಗ್ತಿತ್ತು. ಇಬ್ಬರ ನಡುವೆ ಕದ್ದು ಮುಚ್ಚಿ ಪಿಸು ಪಿಸು ಗುಸು ಗುಸು ಮಾತುಗಳು ಶುರುವಾಗಿತ್ತು. ಚಾಟಿಂಗ್, ಟಾಕಿಂಗ್, ಕಾಲಿಂಗ್, ಮೀಟಿಂಗ್ ಎಲ್ಲವು ನಡೆಯುತ್ತಿತ್ತು. ಮಲೆನಾಡ ತಪ್ಪಲಿನಲ್ಲಿ ಅರಳಿದ ಈ ಪ್ರೀತಿ ಎಂಬ ಜಗದಲ್ಲಿ ಇಬ್ಬರು ಸ್ವಚ್ಛಂದ ಹಕ್ಕಿಯಂತೆ ಹಾರಾಡೋಕೆ ಶುರು ಮಾಡಿದ್ರು.

ಇಬ್ಬರೂ ಮುಂದೆ ನೀನೆಲ್ಲೋ ನಾನಲ್ಲೇ ಎನ್ನುವ ರೀತಿಯಲ್ಲಿ ಹತ್ರವಾಗಿದ್ರು. ಉದಯ್ ಗೆ ತನಗೊಬ್ಬಳು ಹೆಂಡ್ತಿ ಇದ್ದಾಳೆ ಎನ್ನುವುದೇ ಮರೆತು ಹೋಗಿತ್ತು. ಅದರಂತೆ ಮಂಜುಳ ಕೂಡ ತನ್ನ ಮಗುವನ್ನು ಕೂಡ ಮರೆತಿದ್ಳು. ಇಬ್ಬರೂ ಅವರದ್ದೇ ಪ್ರಪಂಚದಲ್ಲಿ ಮುಳುಗಿದ್ರು. ಆದ್ರೆ ತಾಳಿ ಕಟ್ಟಿದ ಬದುಕಿನಲ್ಲಿ ಅನುರಾಗ ಅರಳಲಿಲ್ಲ. ಉದಯ್ ಕುಮಾರ್ ಹಾಗು ಮಂಜುಳಾ ನಡುವೆ ಮತ್ತೆ ಕಿರಿಕ್ ಶುರುವಾಗಿತ್ತು. ಕಳೆದ ಮೇ 21 ರಂದು ಆನೆಗದ್ದೆಯ ಮಂಜುಳಾರ ಮನೆಯಲ್ಲೇ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದ್ರಿಂದ ಕುಗ್ಗಿ ಹೋದ ಮಂಜುಳಾ ಕುಡಿತದ ಚಟಕ್ಕೆ ಬಿದ್ದಿದ್ಳು. ಇದಾದ ನಂತರ ಮಂಜುಳಾ ಮಾನಸಿಕವಾಗಿ ಮತ್ತಷ್ಟು ಕುಗ್ಗಿ ಹೋಗಿದ್ದಳಲ್ಲದೆ ವಿಪರೀತ ಕುಡಿಯುತ್ತಿದ್ದಳು ಎಂಬ ಅಂಶ ಮಂಜುಳಾರ ತಂಗಿ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ. ಕಡೆಗೆ ಮಂಜುಳಾ ಕೂಡ ಜೂನ್.3 ರಂದು ಆತ್ಮಹತ್ಯೆ ಶರಣಾಗಿದ್ಳು.

ಇನ್ನು ದುರಂತವಾಗಿ ಅಂತ್ಯ ಕಂಡು ಮಂಜುಳಾರ ಜೀವನ ಹೈ ಫೈ ಆಗಿತ್ತು ಎಂದು ಮೂಲಗಳು ಹೇಳುತ್ತವೆ. ಯೌವನದ ದಿನಗಳಲ್ಲೇ ಬೆಂಗಳೂರು, ಮುಂಬಯಿ, ಮಲೇಷ್ಯಾದ ಹೈ ಟೆಕ್ ಜೀವನ ನಡೆಸಿದ್ದ ಮಂಜುಳಾ ಸಾಮಾಜಿಕ ತಾಣದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆದಿದ್ದಳು. ಈ ಮೂಲಕ ವಿವಿಧ ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಹಲವು ಪ್ರತಿಷ್ಠಿತ ವ್ಯಕ್ತಿಗಳ ಸಂಪರ್ಕ ಹೊಂದಿದ್ದ ಮಂಜುಳಾ ತಾಯಿ ಮನೆ ಆನೆಗದ್ದೆಯಲ್ಲೂ ಹೈ ಟೆಕ್ ಜೀವನ ನಡೆಸುತ್ತಿದ್ದಳು. ಮನೆಯ ಹೆಚ್ಚಿನ ಭಾಗವನ್ನು ಎಸಿಯಾಗಿ ಪರಿವರ್ತಿಸಿದ್ದ ಮಂಜುಳಾ ಹಳ್ಳಿಯಲ್ಲಿದ್ದರೂ ಯಾವುದಕ್ಕೂ ಕಡಿಮೆ ಇಲ್ಲದಂತೆ ಜೀವನ ಮಾಡುತ್ತಿದ್ದಳು. ಇದೀಗ ಅದೇ ಆಕೆಯ ಜೀವನಕ್ಕೆ ಮುಳ್ತಾಯ್ತಾ ಎಂಬ ಅನುಮಾನ ಎದ್ದು ಕಾಣುತ್ತಿದೆ.

ಅಂತ್ಯ ಸಂಸ್ಕಾರಕ್ಕೂ ನೆರವಾಗದ ನೆರೆಹೊರೆಯವರು

ಮೃತ ಮಂಜುಳಾ ಹಾಗೂ ಆಕೆಯ ಕುಟುಂಬದವರು ಹಳ್ಳಿಯಲ್ಲಿದ್ದರೂ ಸ್ಥಳೀಯವಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಇವರ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಥಳೀಯರು ಅವರ ಸಹವಾಸ ನಮಗೇಕೆ ಎಂದು ದೂರವೇ ಇರುತ್ತಿದ್ದರು. ಅಲ್ಲದೆ ಹೆಚ್ಚಿನ ವಸ್ತುಗಳನ್ನು ಆನ್​​​ಲೈನ್​​ನಲ್ಲೇ ತರಿಸಿಕೊಳ್ಳುತ್ತಿದ್ದ ಮಂಜುಳಾ ಮನೆಯನ್ನು ಬಿಟ್ಟು ಹೊರ ಬಂದಿದ್ದೇ ಕಡಿಮೆ ಎನ್ನಲಾಗಿದೆ. ಮಂಜುಳಾ ಆತ್ಮಹತ್ಯೆ ಮಾಡಿಕೊಂಡ ನಂತರ ಮಂಜುಳಾರ ಅಂತ್ಯ ಸಂಸ್ಕಾರವನ್ನು ಆನೆಗದ್ದೆ ಗ್ರಾಮದಲ್ಲಿ ನಡೆಸಲು ಯಾರೂ ಮುಂದೆ ಬರಲಿಲ್ಲ. ಹಾಗಾಗಿ ರಿಪ್ಪನ್ ಪೇಟೆಯಲ್ಲಿ ಪೋಸ್ಟ್ ಮಾರ್ಟಂ ಆದ ನಂತರ ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಕುಟುಂಬದವರು ಅಂತ್ಯ ಸಂಸ್ಕಾರ ನಡೆಸಿದರು.

ಇನ್ನು ಬದುಕಿದ್ದಷ್ಟು ದಿನ ನಿಗೂಢವಾಗಿಯೇ ಜೀವನ ನಡೆಸಿ ಮಂಜುಳಾ ಹಾಗೂ ಉದಯ ಕುಮಾರ್ ಅವರಿಬ್ಬರ ಆತ್ಮಹತ್ಯೆಯೂ ನಿಗೂಢವಾಗಿಯೇ ಇದೆ. ಆಕೆಯ ಹೈಫೈ ಜೀವನವೇ ಆಕೆಯ ಜೀವಕ್ಕೆ ಕುತ್ತು ತಂದಿತ್ತಾ ಎಂಬ ಪ್ರಶ್ನೆ ಉದ್ಘವಾಗಿದ್ದು, ಪೊಲೀಸರ ಸಮರ್ಪಕ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ.

The post ಶಿವಮೊಗ್ಗ ಡಬಲ್ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಒಂದೇ ಮನೆ, 12 ದಿನ.. 2 ಸಾವು appeared first on News First Kannada.

Source: newsfirstlive.com

Source link

Leave a Reply

You missed