ಹಾಸನ: ಏರ್​​ಪೋರ್ಟ್​ ವಿಚಾರದಲ್ಲೂ ರಾಜಕೀಯ ನಡೆಯುತ್ತಿದೆ ಎಂದು ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರೇವಣ್ಣ.. ಇನ್ನೂ 219 ಎಕರೆ ಭೂಮಿ ವಿಮಾನ ನಿಲ್ದಾಣಕ್ಕೆ ಬೇಕು. ಶಿವಮೊಗ್ಗ ಮತ್ತು ಬಿಜಾಪುರದ ಮಾದರಿಯಲ್ಲಿಯೇ ಹಾಸನದ ವಿಮಾನ ನಿಲ್ದಾಣ ಆಗಬೇಕು. ಇಲ್ಲವಾದ್ರೆ ನಾನು ಕಾಮಗಾರಿ ಮಾಡಲು ಬಿಡಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಈಗಿನ ಸಿಎಂ ‘ಡಿನೋಟಿಫಿಕೇಶನ್​ ಮುಖ್ಯಮಂತ್ರಿ’ ಅಂತ ವಾಗ್ದಾಳಿ ನಡೆಸಿದ್ದಾರೆ. ಸುಳ್ಳು ಹೇಳುವ ಮತ್ತು ರಾಜಕೀಯ ದ್ವೇಷ ಮಾಡುವ ಸಿಎಂ ಯಡಿಯೂರಪ್ಪರಿಗೆ ಒಂದಲ್ಲ ಒಂದು ದಿನ, ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದು ಗುಡುಗಿದ್ದಾರೆ.

The post ‘ಶಿವಮೊಗ್ಗ ಮಾದರಿಯಲ್ಲೇ ಹಾಸನದ ಏರ್​ಪೋರ್ಟ್​ ಆಗ್ಬೇಕು, ಇಲ್ಲದಿದ್ರೆ ಕಾಮಗಾರಿಗೆ ಬಿಡಲ್ಲ’ appeared first on News First Kannada.

Source: newsfirstlive.com

Source link