ಶಿವರಾಂ ಜೊತೆಗಿನ 55 ವರ್ಷಗಳ ಒಡನಾಟ ಸ್ಮರಿಸಿದ ಭಾರತಿ ವಿಷ್ಣುವರ್ಧನ್


ಬೆಂಗಳೂರು: ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕಂಬನಿ ಮಿಡಿದಿದ್ದಾರೆ.

ಶಿವರಾಮಣ್ಣ ಇಲ್ಲ ಅಂದ್ಮೇಲೆ ಏನ್​ ಮಾತನಾಡ್ಬೇಕು ಅಂತ ಗೊತ್ತಿಲ್ಲ. ಸುಮಾರು 55 ವರ್ಷಗಳ ಒಡನಾಟ ನಮ್ಮದು. ಅವರಿಲ್ಲದೇ ನಮ್ಮ ಮನೆಯಲ್ಲಿ ಯಾವ ಪೂಜೆ ಪುನಸ್ಕಾರಗಳು ನಡೆಯುತ್ತಿರಲಿಲ್ಲ. ನಮ್ಮ ಯಜಮಾನರ ಜೊತೆ ಕೂಡ ಸಾಕಷ್ಟು ಆತ್ಮೀಯತೆ ಹೊಂದಿದ್ದರು. ಅವರನ್ನ ಕಳೆದುಕೊಂಡಿದ್ದು ತುಂಬಾ ನೋವಾಗುತ್ತಿದೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಭಾವುಕರಾಗಿದ್ದಾರೆ.

ನಾನು ಅವರನ್ನ ಮೊದಲು ನೋಡಿದ್ದು ಚೆನ್ನೈನಲ್ಲಿ. ಆಗ ನಾನಿನ್ನು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದ ಕಾಲವದು, ಮುಂದೆ ಶಿವರಾಮಣ್ಣ ನನ್ನ ತಂದೆಯ ಸ್ಥಾನದಲ್ಲಿದ್ದುಕೊಂಡು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಆ ಭಾವನೆಗಳನ್ನು ಹೇಳಿಕೊಳ್ಳಲು ಪದಗಳೇ ಇಲ್ಲ. ಅಯ್ಯಪ್ಪನ ಭಕ್ತರಾಗಿದ್ದ ಅವರು ಯಾರಿಗೂ ಕೆಟ್ಟದ್ದನ್ನ  ಬಯಸುತ್ತಿರಲಿಲ್ಲ. ಅವರನ್ನ ಕಳೆದುಕೊಂಡು ಸದ್ಯ ಕನ್ನಡ ಚಿತ್ರರಂಗ ಬಡವಾಗಿದೆ ಅವರೊಂದಿಗೆ ನಾವು ಕೆಲಸ ಮಾಡಿದ್ದೀವಿ. ಸಮಯ ಕಳೆದಿದ್ದೀವಿ ಎನ್ನುವುದು ನಮಗೆ ಖುಷಿ ನೀಡುತ್ತಿದೆ. ಶಿವರಾಮಣ್ಣ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಕೊಡಲಿ ಎಂದು ಭಾವುಕರಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *