ಚಂದನವನದ ಮತ್ತೊಂದು ಕೊಂಡಿ ಇಂದು ಕಳಚಿದೆ. ಇಂದು ಹಿರಿಯ ನಟ ಶಿವರಾಂ ನಿಧನರಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಶಿವರಾಂ ಮನೆಯಲ್ಲಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ತಲೆಯಲ್ಲಿ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಚಿಕಿತ್ಸೆ ಫಲಿಕಾರಿಯಾಗದೇ ಕೊನೆಯುಸಿರೆಳಿದಿದ್ದಾರೆ.
ಇನ್ನು ಹಿರಿಯ ನಟನ ಅಗಲಿಕೆಗೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿ ಕಂಬನಿ ಮಿಡಿಯುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಶಿವರಾಂ ನಿಧನಕ್ಕೆ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ. ಕಲಾವಿದರಾಗಿ ಮರೆಯಲಾಗದ ಹೆಜ್ಜೆಗುರುತು ಬಿಟ್ಟುಹೋಗಿರುವ ಶಿವರಾಂ ಅಪಾರ ದೈವ ಭಕ್ತರು . ಈ ಕರಾಳ ದಿನದಂದು ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ ಮತ್ತು ಅವರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಹಿರಿಯ ಕಲಾವಿದ ಶ್ರೀ ಎಸ್. ಶಿವರಾಂ ಅವರು ಅಪಘಾತಕ್ಕೆ ಈಡಾಗಿ ಜೀವನ್ಮರಣದ ಹೋರಾಟದಲ್ಲಿ ಸೋತಿರುವುದು ಮನಸ್ಸಿಗೆ ಅತೀವ ದುಃಖವನ್ನುಂಟು ಮಾಡಿದೆ. ಸತತ ಆರು ದಶಕಗಳ ಕಾಲ ಪೋಷಕ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕನ್ನಡಿಗರನ್ನು ಮನರಂಜಿಸಿದ ಅವರ ಅಕಾಲಿಕ ಮರಣ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ನಷ್ಟ ಉಂಟುಮಾಡಿದೆ. (1/2) pic.twitter.com/SxIV51TWtL
— H D Devegowda (@H_D_Devegowda) December 4, 2021