ಶಿವರಾತ್ರಿ ಹಿಂದೂ ಸಂಸ್ಕೃತಿಯ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ಮಾಘ ,ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಮಹಾ ಶಿವರಾತ್ರಿ ಹಬ್ಬ ಬರುತ್ತದೆ. ಉಪವಾಸ ಹಾಗೂ ಜಾಗರಣೆ ಶಿವರಾತ್ರಿಯ ವಿಶೇಷ.

ಬಹಳ ಪ್ರಮುಖವಾಗಿ ಈ ಶಿವರಾತ್ರಿಯ ದಿನದಂದು ಮಹಿಳೆಯರು ಸಿಹಿ ತಿನಿಸುಗಳನ್ನು ತಯಾರಿಸುವುದರಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ. ತಂಬಿಟ್ಟನ್ನು ಶಿವರಾತ್ರಿಯ ದಿನದಂದು ವಿಶೆಷವಾಗಿ ಮಾಡುತ್ತಾರೆ. ಇನ್ನು ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಯಲ್ಲಿ ಭಿನ್ನತೆಯನ್ನು ಕಾಣುತ್ತೇವೆ.

ಓದಿ : ಕೋವಿಡ್: ಥಾಣೆಯ 11 ಸ್ಥಳಗಳಲ್ಲಿ ಮಾ.13ರಿಂದ 31ರವರೆಗೆ ಮತ್ತೆ ಲಾಕ್ ಡೌನ್

ಶಿವರಾತ್ರಿಯ ದಿನ ದೇಶದ ಮೂಲೆ ಮೂಲೆಗಳಲ್ಲಿ ಶಿವನನ್ನು ಅತ್ಯಂತ ಭಕ್ತಿಯೀಂದ ಭಜಿಸುತ್ತಾ, ಜಾಗರಣೆ ಮಾಡುತ್ತಾ, ಉಪವಾಸ ಕೂರುವುದು ವಾಡಿಕೆ. ಶಿವರಾತ್ರಿಯ ಉಪವಾಸದ ಸಂದರ್ಭದಲ್ಲಿ ಕೆಲವು ಉಪಹಾರಗಳಿಗೆ ನಿಷೇಧವಿಲ್ಲ. ತಂಬಿಟ್ಟು ಉಪ್ಪಿಟ್ಟಿನ ಬದಲಾಗಿ ಈ ಬಾರಿಯ ಶಿವರಾತ್ರಿಯ ಉಪವಾಸ ಸ್ವಲ್ಪ ಹೊಸ ರುಚಿಯೊಂದಿಗೆ ಕೂಡಿರಲಿ. ಈ ಬಾರಿಯ ಶಿವರಾತ್ರಿಗೆ ಎರಡು ವಿಶೇಷ ತಿನಿಸು ನಿಮಗಾಗಿ.

ಸಾಬಕ್ಕಿ ಆಲೂ ಉಪ್ಪಿಟ್ಟು :

ಬೇಕಾಗುವ ಸಾಮಾಗ್ರಿಗಳು : ಸಾಬಕ್ಕಿ 1 ಕಪ್( ನಾಲಕ್ಉ ಗಂಟೆಗಳ ಕಾಲ ನೆನೆಸಿದ್ದು,) ಹುರಿದು ಸಿಪ್ಪೆ ತೆಗೆದ ಕಡ್ಲೆಕಾಯಿ ಬೀಜದ ಪುಡಿ 1 ಕಪ್, ಹೆಚ್ಚಿದ ಆಲೂಗಡ್ಡೆ 2, ಎಣ್ಣೆ ಒಗ್ಗರಣೆ ಸಾಮಾಗ್ರಿಗಳು.

ತಯಾರಿಸುವ ವಿಧಾನ : ಸಾಸಿವೆ ಜೀರಿಗೆ ಒಗ್ಗರಣೆ ಮಾಡಿಕೊಳ್ಳಿ. ಆಲುಗಡ್ಡೆ , ಒಣಮೆಣಸಕಾಯಿ , ಸ್ವಲ್ಪ ಹಸಿಮೆಣಸಿನ ಕಾಯಿ ಹಾಖಿ ಹುರಿದು ನೆನಸಿರು ಸಾಬಕ್ಕಿ, ತೆಗೆದಿಟ್ಟ ಕಡ್ಲೆಕಾಯಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಸಕ್ಕರೆ ಬೆರೆಸಿ ಕಲಿಸಿ ಸಬ್ಬಕ್ಕಿ ಬೇಯುವ ತನಕವೂ ನೋಡಿಕೊಳ್ಳಿ, ಕೊತ್ತಂಬರಿ ಸೊಪ್ಪು ನಿಂಬು ರಸ ಸೇರಿಸಿ ಬಿಸಿ ಬಿಸಿಯಾಗಿ ಸಾಬಕ್ಕಿ ಆಲೂ ಉಪ್ಪಿಟ್ಟನ್ನು ಸವಿಯಿರಿ.

ದಪ್ಪ ಸಾಬಕ್ಕಿ ಹಾಗೂ ಗೆಣಸಿನ ಹಲ್ವ :

ಬೇಕಾಗುವ ಸಾಮಾಗ್ರಿಗಳು : ದಪ್ಪ ಸಾಬಕ್ಕಿ ಮೂರು ಗಂಟೆ ನೆನೆಸಿದ್ದು, ಬಿಳಿ ಉಂಡೆ ಬೆಲ್ಲದ ಪುಡಿ, ಹಾಲು ಅರ್ಧ ಕಪ್, ಏಲಕ್ಕಿ ಪುಡಿ, ಗೋಡಂಬಿ ದ್ರಾಕ್ಷಿ, ಸಿಪ್ಪೆ ತೆಗೆದ ಗೆಣಸಿನ ಹೋಳುಗಳು ಹದವಾಗಿ ಬೇಯಿಸಿದ್ದು, ಸ್ವಲ್ಪ ತುಪ್ಪ.

ತಯಾರಿಸುವ ವಿಧಾನ : ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಬಾಡಿಸಿ ತೆಗೆದಿಟ್ಟುಕೊಳ್ಳಿ, ಬಾಣಲಿಗೆ ಹಾಲು, ಸ್ವಲ್ಪ ನೀರು ಸೇರಿಸಿಕೊಂಡು ನೆನೆಸಿದ ಸಾಬಕ್ಕಿಯನ್ನು ಸೇರಿಸಿಕೊಳ್ಳಿ ಸಣ್ಣ ಉರಿಯಲ್ಲಿ ಮೆತ್ತಗಾಗುವ ತನಕ ಬೇಯಿಸಿಕೊಳ್ಳಿ, ಬೆಲ್ಲದ ಪುಡಿ ಹಾಕಿ ಕಲಕಿಸಿ, ಹಲ್ವದ ಹದ ಬಂದಾಗ ಏಲಕ್ಕಿ ಪುಡಿ ಹಾಕಿ ಬೆರೆಸಿಕೊಳ್ಳಿ, ಕಪ್ ವೊಂದಕ್ಕೆ ಹಾಕಿಕೊಂಡು.. ಕರಿದಿಟ್ಟ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಿ ಸವಿಯಿರಿ.

ಓದಿ : ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ | ಸುದ್ದಿ ಸಮಾಚಾರ

ಆರೋಗ್ಯ – Udayavani – ಉದಯವಾಣಿ
Read More