ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ 7 ಮಂದಿ ಜೆಡಿಎಸ್ ನಗರಸಭೆ​ ಸದಸ್ಯರು ಸಿಡಿದೆದ್ದಿದ್ದಾರೆ. 7 ಜೆಡಿಎಸ್ ನಗರಸಭೆ ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಇಂದು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.

ಪುಟ್ಟಸ್ವಾಮಿ (ಪಕ್ಷೇತರ), ಮೇಲ್ಗಿರಿಗೌಡ (ಪಕ್ಷೇತರ), ಜೆಡಿಎಸ್ ನ ಆಯೇಷಾ ಸಿಕಂದರ್, ವಿದ್ಯಾದರ್, ದರ್ಶನ್ ದಾಸ್, ಚಂದ್ರಣ್ಣ, ಕವಿತಾರಘು, ಕಲೈರಸಿ, ಹರ್ಷ‌ರಿಂದ ಬಿಜೆಪಿಗೆ ಬೆಂಬಲ ಘೋಷಿಸಿದವರು.

ಬಿಜೆಪಿಯ ಗಿರೀಶ್ ನಗರಸಭೆ ಅಧ್ಯಕ್ಷ, ಜೆಡಿಎಸ್ ನ ಉಪಾಧ್ಯಕ್ಷ ಕಾಂತೇಶ್ ಸೇರಿ ಅರಸೀಕೆರೆ ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದಾರೆ. ಜೆಡಿಎಸ್-21, ಬಿಜೆಪಿ-6, ಪಕ್ಷೇತರರು-3, ಕಾಂಗ್ರೆಸ್-1 ಸದಸ್ಯರಿದ್ದರು. ಮೂರು ವರ್ಷದಿಂದ ಯಾವುದೇ ಗೌರವ, ಅಧಿಕಾರ, ಸವಲತ್ತುಗಳು ಸಿಕ್ಕಿಲ್ಲವೆಂದು ಆರೋಪಿಸಿದ್ದಾರೆ ಎನ್ನಲಾಗಿದೆ.

The post ಶಿವಲಿಂಗೇಗೌಡ ವಿರುದ್ಧ ಸಿಡಿದೆದ್ದ ಜೆಡಿಎಸ್​ ನಗರಸಭೆ ಸದಸ್ಯರು.. ಬಿಜೆಪಿಗೆ ಬೆಂಬಲ ಘೋಷಣೆ appeared first on News First Kannada.

Source: newsfirstlive.com

Source link