ಬೆಂಗಳೂರು: ನಗರದಲ್ಲಿ ವೀಕೆಂಡ್ ಕಫ್ರ್ಯೂ ಇದ್ದರೂ ಕೂಡ ಕ್ಯಾರೆ ಇಲ್ಲದೆ ಶಿವಾಜಿನಗರದ ಫಿಶ್ ಮಾರ್ಕೆಟ್ ನಲ್ಲಿ ಜನ ಮೈ ಮರೆತು ಮಾಂಸ ಖರೀದಿಯಲ್ಲಿ ತೊಡಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಸಾರ್ವಜನಿಕರು ಕೊರೊನಾ ನಿಯಮವನ್ನು ಮರೆತಂತಿದೆ.

ವೀಕೆಂಡ್ ಕಫ್ರ್ಯೂ ಹಾಗೂ ಭಾನುವಾರ ಇರುವುದರಿಂದ ಜನ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವ ಜನ ಸಾಮಾಜಿಕ ಅಂತರವಿಲ್ಲದೆ, ನೂರಾರು ಜನ ಮಾಂಸ ಖರೀದಿ ಭರಾಟೆಯಲ್ಲಿ ಕೊರೊನಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್‍ಲಾಕ್- ನಿಯಮಗಳೇನು?

ಸಾರ್ವಜನಿಕರು ಸರಿಯಾಗಿ ಮಾಸ್ಕ್ ಗಳನ್ನು ಧರಿಸದೇ ಒಬ್ಬರಿಗೊಬ್ಬರು ಅಂಟಿಕೊಂಡು, ಗ್ರಾಹಕರು ವ್ಯಾಪಾರ ಮಾಡುತ್ತಿದ್ದಾರೆ. ಜನರ ಗುಂಪು ನಿಯಂತ್ರಿಸಲು, ಪೊಲೀಸರು, ಮಾರ್ಷಲ್ ಗಳು ಕೂಡ ಸ್ಥಳದಲ್ಲಿ ಇಲ್ಲ. ಸೋಂಕು ಇಳಿಕೆಯಾಗುತ್ತಿರುವ ಹೊತ್ತಲ್ಲೇ, ಜನ ಮತ್ತೆ ನಿರ್ಲಕ್ಷ್ಯ ತೋರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜನರ ಬೇಜವಾಬ್ದಾರಿ ಹೀಗೆ ಮುಂದುವರೆದರೆ ಮುಂದಿನ ದಿನಗಳು ಆಪಾಯಕ್ಕೆ ದಾರಿಮಾಡಿಕೊಟ್ಟಂತಾಗಲಿದೆ.

The post ಶಿವಾಜಿನಗರದಲ್ಲಿ ಮಾಂಸ ಖರೀದಿಗೆ ಮುಗಿಬಿದ್ದ ಜನ appeared first on Public TV.

Source: publictv.in

Source link