ಶಿವ, ಚಿಟ್ಟೆ ಮತ್ತು ಡಾಲಿ: ಮತ್ತೆ ಒಂದಾದ ‘ಟಗರು’ ಕಾಂಬಿನೇಷನ್ | Tagaru Actor Shivarajkumar Dhananjay and Vasishta N Simha join Hands for Bairagi Kannada Movie Bairagi


ಶಿವ, ಚಿಟ್ಟೆ ಮತ್ತು ಡಾಲಿ: ಮತ್ತೆ ಒಂದಾದ ‘ಟಗರು’ ಕಾಂಬಿನೇಷನ್

ಶಿವ, ಚಿಟ್ಟೆ ಮತ್ತು ಡಾಲಿ: ಮತ್ತೆ ಒಂದಾದ ‘ಟಗರು’ ಕಾಂಬಿನೇಷನ್

ಧನಂಜಯ ಹಾಗೂ ವಸಿಷ್ಠ ಸಿಂಹ ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ಗೆಳೆಯರು. ಇವರಿಬ್ಬರಿಗೂ ಶಿವಣ್ಣ ನೆಚ್ಚಿನ ಹೀರೋ. ಈಗ ಇವರು ಮತ್ತೆ ಒಂದಾಗಲು ಸಮಯ ಕೂಡಿ ಬಂದಿದೆ.

ಶಿವರಾಜ್​ಕುಮಾರ್ (Shivarajkumar) ನಟನೆಯ ‘ಟಗರು’ ಸಿನಿಮಾ (Tagaru Movie) ಸ್ಯಾಂಡಲ್​ವುಡ್​ನಲ್ಲಿ ಮಾಡಿದ ಮೋಡಿ ತುಂಬಾನೇ ದೊಡ್ಡದು. ಶಿವರಾಜ್​ಕುಮಾರ್ ಅವರು ಶಿವ ಹೆಸರಿನ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡರೆ, ಧನಂಜಯ ಹಾಗೂ ವಸಿಷ್ಠ ಸಿಂಹ ವಿಲನ್ ಪಾತ್ರಗಳಲ್ಲಿ ಮಿಂಚಿದರು. ಈ ಚಿತ್ರದ ಮೂಲಕ ಡಾಲಿ ಎಂದು ಫೇಮಸ್ ಆದರು ಧನಂಜಯ (Dhananjay). ವಸಿಷ್ಠ ಸಿಂಹ ಚಿಟ್ಟೆ ಎಂದು ಗುರುತಿಸಿಕೊಂಡರು. ಈಗ ಈ ಮೂವರು ಮತ್ತೆ ಒಂದಾಗಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಧನಂಜಯ ಹಾಗೂ ವಸಿಷ್ಠ ಸಿಂಹ ತೆರೆಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ಗೆಳೆಯರು. ಇವರಿಬ್ಬರಿಗೂ ಶಿವಣ್ಣ ನೆಚ್ಚಿನ ಹೀರೋ. ಈಗ ಇವರು ಮತ್ತೆ ಒಂದಾಗಲು ಸಮಯ ಕೂಡಿ ಬಂದಿದೆ. ಹಾಗಂತ ಈ ಮೂವರು ಒಟ್ಟಾಗಿ ನಟಿಸುತ್ತಿಲ್ಲ. ಬದಲಿಗೆ ಶಿವರಾಜ್​ಕುಮಾರ್​-ಧನಂಜಯ ನಟನೆಯ ‘ಬೈರಾಗಿ’ ಸಿನಿಮಾಗೆ ವಸಿಷ್ಠ ಸಿಂಹ ಹಾಡೊಂದನ್ನು ಹಾಡಿದ್ದಾರೆ. ಈ ಬಗ್ಗೆ ಚಿತ್ರತಂಡ ಅಪ್​ಡೇಟ್ ನೀಡಿದೆ.

ಶಿವರಾಜ್​ಕುಮಾರ್ ಅವರು ಜುಲೈ 12ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. 11 ದಿನ ಮೊದಲು ಅಂದರೆ ಜುಲೈ 1ರಂದು ಸಿನಿಮಾ ತೆರೆಗೆ ಬರುತ್ತಿದೆ. ಶಿವಣ್ಣ ಫ್ಯಾನ್ಸ್​ಗೆ ಇದು ಅಡ್ವಾನ್ಸ್​ ಬರ್ತ್​ಡೇ ಗಿಫ್ಟ್​ ಎಂದರೂ ತಪ್ಪಾಗಲಾರದು.

‘ಬೈರಾಗಿ’ ಚಿತ್ರದ ಟಿವಿ ಹಕ್ಕು ಈಗಾಗಲೇ ಮಾರಾಟವಾಗಿದೆ. ಸಿನಿಮಾ ರಿಲೀಸ್​ಗೂ ಮೊದಲೇ ನಿರ್ಮಾಪಕರು ಸೇಫ್ ಆಗಿದ್ದಾರೆ. ಈ ಬಗ್ಗೆ ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದರು. ಟಿವಿ ಹಕ್ಕು 10‌ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಿರುವ ಬಗ್ಗೆ ಮಾಹಿತಿ ನೀಡಿದ್ದರು.

ಇದು ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ. ಇದರಲ್ಲಿ ಅವರು ಡಿಫರೆಂಟ್​ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಲಿ ವೇಷದಲ್ಲಿ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡಲಿದ್ದಾರೆ. ಅಂಜಲಿ, ಯಶ ಶಿವಕುಮಾರ್​, ಶಶಿ ಕುಮಾರ್​ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಕೃಷ್ಣ ಸಾರ್ಥಕ್​ ಅವರು ಬಂಡವಾಳ ಹೂಡಿದ್ದಾರೆ. ಅನೂಪ್​ ಸೀಳಿನ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.