ಶೀಘ್ರದಲ್ಲೇ IPL​ ಮೆಗಾ ಹರಾಜು.. ಫ್ರಾಂಚೈಸಿಗಳ ಕಣ್ಣು ಯಾರತ್ತ? ಯಾರಿಗೆಲ್ಲಾ ಡಿಮ್ಯಾಂಡ್?


T20 ವಿಶ್ವಕಪ್​​​ ನಡುವೆಯೇ ಐಪಿಎಲ್ ಮೆಗಾ ಹರಾಜಿಗೆ ಬಿಸಿಸಿಐ, ರೆಡಿಯಾಗ್ತಿದೆ. ಫ್ರಾಂಚೈಸಿಗಳು ಕೂಡ ಯಾವೆಲ್ಲಾ ಆಟಗಾರರನ್ನ ತಮ್ಮ ಬುಟ್ಟಿಗೆ ಹಾಕಿಕೊಳ್ಳಬೇಕು ಅನ್ನೋ ಲೆಕ್ಕಾಚಾರ ನಡೆಸ್ತಿವೆ. ಅದರಲ್ಲೂ ಈ ಯಂಗ್​ಸ್ಟರ್​​ಗಳ ಮೇಲಿನ ನಿರೀಕ್ಷೆಗಳು, ಈ ಬಾರಿ ಸ್ವಲ್ಪ ಜಾಸ್ತಿನೇ ಇದೆ.

ಐಪಿಎಲ್ ಸೀಸನ್-14​ ಮುಕ್ತಾಯದ ಬೆನ್ನಲ್ಲೇ ಮುಂದಿನ ಐಪಿಎಲ್​​ಗಾಗಿ ಬಿಸಿಸಿಐ, ತೀವ್ರ ಸಿದ್ಧತೆ ಮಾಡಿಕೊಳ್ತಿದೆ. ನೂತನ ಫ್ರಾಂಚೈಸಿಗಳು ಕೂಡ ಸೇರ್ಪಡೆಗೊಂಡಿದ್ದು, ಆಟಗಾರರಿಗೆ ಡಿಮ್ಯಾಂಡ್​​ ಹೆಚ್ಚಾಗಿದೆ. ಈಗಾಗಲೇ ದೇಶಿ ಕ್ರಿಕೆಟ್​ ಚಟುವಟಿಕೆಗಳು ಆರಂಭವಾಗಿವೆ. ಆಟಗಾರರು ಅದ್ಭುತ ಪರ್ಫಾಮೆನ್ಸ್​ ನೀಡೋಕೆ ಮುಂದಾಗಿದ್ದಾರೆ. ಹೀಗಾಗಿ ಫ್ರಾಂಚೈಸಿಗಳಿಗೆ ಸೈಯದ್​​ ಮುಷ್ತಾಕ್​ ಅಲಿ T20 ಟೂರ್ನಿ ಮೇಲೆ, ಕಣ್ಣು ಬಿದ್ದಿದೆ.
ಸಯ್ಯದ್ ಮುಷ್ತಾಕ್ ಅಲಿ T20 ಟೂರ್ನಿ ಮೇಲೆ ಫ್ರಾಂಚೈಸಿಗಳ ಕಣ್ಣು..!

ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಮುಂಬೈ ಪರ ಪೃಥ್ವಿ, ಮಹಾರಾಷ್ಟ್ರದ ಋತುರಾಜ್, ಕೇರಳದ ಪರ ಸ್ಯಾಮ್ಸನ್​, ಮಧ್ಯಪ್ರದೇಶ ತಂಡದಲ್ಲಿ ವೆಂಕಟೇಶ್​​ ಅಯ್ಯರ್, ಹರ್ಯಾಣ ತಂಡದಲ್ಲಿ ಹರ್ಷಲ್​ ಪಟೇಲ್​ ಕಣಕ್ಕಿಳಿಯಲಿದ್ದಾರೆ. ಟೂರ್ನಿಯಲ್ಲಿ ಈ ಪಂಚ ಪಾಂಡವರು, IPL​ನಲ್ಲಿ ಅಬ್ಬರಿಸಿದಂತೆ ಅಬ್ಬರಿಸಿದ್ರೆ, ಐಪಿಎಲ್​ ಮೆಗಾ ಹರಾಜಿನಲ್ಲಿ ಡಬಲ್​ ಅಮೌಂಟ್​​ಗೆ ಸೇಲಾಗೋದು ಗ್ಯಾರಂಟಿ. ಹಾಗಾಗಿ ಈ ಯುವ ಆಟಗಾರರು, ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ.

ಯುವ ಆಟಗಾರರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!
IPLನಲ್ಲಿ ಋತುರಾಜ್​ ಅದ್ಭುತ ಪ್ರದರ್ಶನದೊಂದಿಗೆ ಹೆಚ್ಚು ರನ್​ ಗಳಿಸಿ ಆರೆಂಜ್​ ಕ್ಯಾಪ್​​​ ಸ್ವಂತ ಮಾಡಿಕೊಂಡಿದ್ರು. ಹಾಗೇ ಹರ್ಷಲ್ ಪಟೇಲ್​​ ಅತಿ ಹೆಚ್ಚು ವಿಕೆಟ್​ ಪಡೆದು ಪರ್ಪಲ್​ ಕ್ಯಾಪ್​ ತಮ್ಮದಾಗಿಸಿಕೊಂಡಿದ್ರು. ಹೀಗಾಗಿ ಈ ಇಬ್ಬರ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸಂಜು ಸ್ಯಾಮ್ಸನ್,​ ರಾಜಸ್ಥಾನ್​​ ರಾಯಲ್ಸ್​ ತಂಡದ ನಾಯಕತ್ವದ ವಹಿಸಿಕೊಂಡಿ ದಲ್ಲದೆ ಬ್ಯಾಟಿಂಗ್​​ನಲ್ಲೂ ಅದ್ಭುತ ಕೊಡುಗೆ ನೀಡಿದ್ರು. ಇದೀಗ ಕೇರಳ ತಂಡಕ್ಕೂ ಅವರೇ ನಾಯಕರಾಗಿರೋದು ಮತ್ತೊಂದು ವಿಶೇಷ.

ಕ್ವಾಲಿಫೈಯರ್​​ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್​​​​​ ತಂಡದಲ್ಲಿ ಪೃಥ್ವಿ ಶಾ ಓಪನಿಂಗ್​​​ನಲ್ಲಿ ಅಬ್ಬರಿಸಿ ಗಮನ ಸೆಳೆದಿದ್ರು. ಅತ್ತ ಕೆಕೆಆರ್​​​ ತಂಡದಲ್ಲಿ ವೆಂಕಟೇಶ್​ ಅಯ್ಯರ್​ ಆಡಿದ್ದು 9 ಪಂದ್ಯಗಳಾದ್ರೂ, ತಂಡವನ್ನ ಫೈನಲ್​​ವರೆಗೂ ಕೊಂಡೊಯ್ಯುವಲ್ಲಿ ಸಕ್ಸಸ್​ ಕಂಡಿದ್ರು. ಈ ಐವರು ಆಟಗಾರರು ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಮತ್ತೆ ಅಬ್ಬರಿಸಿದ್ರೆ, ಮೆಗಾ ಹರಾಜಿನಲ್ಲಿ ಬೇಡಿಕೆ ಡಬಲ್​​ ಆಗೋದ್ರಲ್ಲಿ ಅನುಮಾನವೇ ಇಲ್ಲ.

14ನೇ ಆವೃತ್ತಿಯಲ್ಲಿ ಋತುರಾಜ್​

  • ಪಂದ್ಯ 16
  • ರನ್​ 635
  • 50/100 04/01
  • ಸರಾಸರಿ 45.35

14ನೇ ಆವೃತ್ತಿಯಲ್ಲಿ ವೆಂಕಟೇಶ್​​

  • ಪಂದ್ಯ 10
  • ರನ್​ 370
  • 50/100 04/00
  • ಸರಾಸರಿ 41.11

14ನೇ ಆವೃತ್ತಿಯಲ್ಲಿ ಪೃಥ್ವಿ ಶಾ​​

  • ಪಂದ್ಯ 15
  • ರನ್​ 479
  • 50/100 04/00
  • ಸರಾಸರಿ 31.93

14ನೇ ಆವೃತ್ತಿಯಲ್ಲಿ ಸ್ಯಾಮ್ಸನ್​

  • ಪಂದ್ಯ 14
  • ರನ್​ 484
  • 50/100 02/01
  • ಸರಾಸರಿ 40.33

14ನೇ ಆವೃತ್ತಿಯಲ್ಲಿ ಸ್ಯಾಮ್ಸನ್​

  • ಪಂದ್ಯ 15
  • ವಿಕೆಟ್ 32
  • ಬೆಸ್ಟ್​ 5/27
  • ಎಕಾನಮಿ 8.14

News First Live Kannada


Leave a Reply

Your email address will not be published. Required fields are marked *