ಮೊಬೈಲ್ ಮಾರುಕಟ್ಟೆಯಲ್ಲಿ ಒನ್‍ ಪ್ಲಸ್ ತನ್ನದೆಯಾದ ಗ್ರಾಹಕ ವರ್ಗ ಸೃಷ್ಟಿಸಿಕೊಂಡಿದೆ. ಆಕರ್ಷಕ ಹಾಗೂ ನೂತನ ತಂತ್ರಜ್ಞಾನ ಹೊಂದಿರುವ ಒನ್‍ ಪ್ಲಸ್ ಸ್ಮಾರ್ಟ್ ಫೋನ್‍ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿವೆ. ಆ್ಯಕ್ಸೆಸರೀಸ್ ಮಾರುಕಟ್ಟೆಗೆ ಇದೀಗ ಒನ್‍ ಪ್ಲಸ್ ಹೊಸ ಸ್ಮಾರ್ಟ್ ವಾಚ್ ಪರಿಚಯಿಸುತ್ತಿದೆ.

ಒನ್‍ ಪ್ಲಸ್ ಸ್ಮಾರ್ಟ್ ವಾಚ್

ವಾಚ್ ಪ್ರಿಯರನ್ನು ಗುರಿಯಾಗಿಸಿಕೊಂಡಿರುವ ಒನ್ ಪ್ಲಸ್ ನೂತನ ‘ಸ್ಮಾರ್ಟ್ ವಾಚ್’ ಅಭಿವೃದ್ಧಿ ಪಡಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಬೇರೆ ಕಂಪನಿಗಳ ಸ್ಮಾರ್ಟ್ ವಾಚ್‍ಗಳಿಗಿಂತ ಇದು ವಿಭಿನ್ನವಾಗಿರಲಿದೆ ಎಂದು ಒನ್‍ ಪ್ಲಸ್ ಹೇಳಿಕೊಂಡಿದೆ.

ಒನ್‍ ಪ್ಲಸ್ ವಾಚ್ ಸ್ನಾಪ್‌ಡ್ರಾಗನ್ ವೇರ್ ಸಿಸ್ಟಮ್ ಜತೆಗೆ ಚಿಪ್ ವ್ಯವಸ್ಥೆ ಹೊಂದಿದೆ. ಹೊಸ ಆವತರಣಿಕೆಯ ‘ಸ್ನಾಪಡ್ರಾಗನ್ ವೇರ್ 4100’ ತಂತ್ರಾಂಶ ಈ ವಾಚ್‍ನಲ್ಲಿರಲಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಸ್ಮಾರ್ಟ್ ವಾಚ್‍ಗಳು ಸಮಯದ ಜತೆಗೆ ಹೃದಯ ಬಡಿತ ಅಂಕಿಸಂಖ್ಯೆ ತೋರಿಸುತ್ತವೆ. ಆದರೆ, ಒನ್‍ಪ್ಲಸ್ ಸ್ಮಾರ್ಟ್ ವಾಚ್  ಅದಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಇದು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಇದು ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿದೆ. ವಾಚ್ ಧರಿಸಿದವರ ಹೃದಯ ಬಡಿತದ ಸಂಖ್ಯೆ ತೋರಿಸುವುದರ ಜತೆಗೆ ರಕ್ತದಲ್ಲಿ ಆಮ್ಲಜನಕದ ಮಾನಿಟರ್ ಹಾಗೂ ಸ್ಲೀಪ್ ಮಾದರಿಯ ವಿಶ್ಲೇಷಣೆ, ಗುರಿ-ಆಧಾರಿತ ವ್ಯಾಯಾಮ ಟ್ರ್ಯಾಕಿಂಗ್ ಸಾಫ್ಟ್ ವೇರ್ ಆಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಒನ್‍ ಪ್ಲಸ್ ಸ್ಮಾರ್ಟ್ ವಾಚ್ OLED ಡಿಸ್‍ಪ್ಲೇ ಹೊಂದಿದ್ದು, ದೀರ್ಘಕಾಲಿಕ ಬ್ಯಾಟರಿ ಬಳಕೆಗೆ ಸಹಕಾರಿಯಾಗಲಿದೆ.

ಮಾರ್ಚ್ 23 ರಂದು ಮಾರುಕಟ್ಟೆಗೆ :

ವಿನೂತನ ಶೈಲಿ, ಹೊಸ ತಂತ್ರಜ್ಞಾನ ಹೊಂದಿರುವ ಒನ್‍ ಪ್ಲಸ್ ಸ್ಮಾರ್ಟ್ ವಾಚ್ ಮಾರ್ಚ್ 23 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಒನ್‍ ಪ್ಲಸ್ ಸಂಸ್ಥೆಯ ಸಿಇಒ ಪೆಟೆ ಲಾ ಹೇಳಿದ್ದಾರೆ. ಇದು ಒನ್‍ ಪ್ಲಸ್ 9 ಸೀರಿಸ್ ಮೊಬೈಲ್ ಜತೆಗೆ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More