ಬೆಂಗಳೂರು: ಕೆ.ಆರ್​ ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಯ ವ್ಯಾಪಾರಿಗಳಿಗೆ ಬಿಬಿಎಂಪಿ ಗುಡ್ ನ್ಯೂಸ್ ಕೊಟ್ಟಿದ್ದು, ಮತ್ತೆ ಮಾರ್ಕೆಟ್ ಆರಂಭಕ್ಕೆ ಅನುಮತಿ ನೀಡಲಾಗಿದೆ. ಕೊರೊನಾ ಎರಡನೇ ಅಲೆಯ ತೀವ್ರತೆಗೆ ಬ್ರೇಕ್​ ಹಾಕಲು ಲಾಕ್​​ಡೌನ್​ ಜಾರಿಯಾದ ಬಳಿಕ ನಗರದ ಕೆ.ಆರ್‌‌.ಮಾರ್ಕೆಟ್, ಕಲಾಸಿಪಾಳ್ಯದಲ್ಲಿ ಮಾರುಕಟ್ಟೆಯನ್ನು ಕ್ಲೋಸ್​ ಮಾಡಲಾಗಿತ್ತು.

ಲಾಕ್​ಡೌನ್ ಸಡಿಲಿಕೆ ಆದ ಬಳಿಕವೂ ಕೋವಿಡ್ ಹಿನ್ನೆಲೆ ಮಾರ್ಕೆಟ್‌ನಲ್ಲಿ ವ್ಯಾಪಾರಕ್ಕೆ ನಿರ್ಬಂಧ ಮಾಡಲಾಗಿತ್ತು. ಸದ್ಯ ನಗರದಲ್ಲಿ ಕೊರೊನಾ ಕೇಸ್ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಮತ್ತೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಪಾಲಿಕೆಯಿಂದ ಅನುಮತಿ ನೀಡಲಾಗಿದೆ. ಕೊರೊನಾ ನಿಯಮಗಳ ಅನ್ವಯ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ವ್ಯಾಪಾರಿಗಳು ಹಾಗೂ ಗ್ರಾಹಕರು ಮಾರ್ಗಸೂಚಿ ತಪ್ಪದೆ ಪಾಲಿಸಲು ಸೂಚನೆ ನೀಡಲಾಗಿದೆ.

ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಅಂಗಡಿ ಎದುರು ಸಾಮಾಜಿಕ ಅಂತರ ಕಾಪಾಡಲು ಬಾಕ್ಸ್ ಮಾಡಬೇಕು. ವ್ಯಾಪಾರಿಗಳು ಹಾಗೂ ಜನರು ಕೋವಿಡ್ ಟೆಸ್ಟ್ ಹಾಗೂ ವ್ಯಾಕ್ಸಿನ್ ಪಡೆದುಕೊಳ್ಳಬೇಕು. ವ್ಯಾಪಾರಿಗಳು ಹಾಗೂ ಗ್ರಾಹಕರು ಸಾಮಾಜಿಕ ಅಂತರ ಕಾಪಾಡಬೇಕು. ಅಂಗಡಿಯಲ್ಲಿ ಶುಚಿತ್ವ ಕಾಪಾಡುವುದು ಹಾಗೂ ಗ್ರಾಹಕರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡಬೇಕು ಎಂದು ಸೂಚನೆ ನೀಡಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದ್ರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

The post ಶೀಘ್ರವೇ ಕಲಾಸಿಪಾಳ್ಯ, ಕೆ.ಆರ್‌. ಮಾರ್ಕೆಟ್ ಓಪನ್; ವ್ಯಾಪಾರಿಗಳಿಗೆ ಗುಡ್ ನ್ಯೂಸ್ ಕೊಟ್ಟ ಬಿಬಿಎಂಪಿ appeared first on News First Kannada.

Source: newsfirstlive.com

Source link