ಶೀಘ್ರವೇ ಚೆಂದುಳ್ಳಿ ಚೆಲುವೆ ಕತ್ರಿನಾಗೆ ಮದುವೆ.. ಬಾಲಿವುಡ್​ನ ಈ ಫೇಮಸ್ ನಟನೇ ವರ..

ಶೀಘ್ರವೇ ಚೆಂದುಳ್ಳಿ ಚೆಲುವೆ ಕತ್ರಿನಾಗೆ ಮದುವೆ.. ಬಾಲಿವುಡ್​ನ ಈ ಫೇಮಸ್ ನಟನೇ ವರ..

ಬಾಲಿವುಡ್ ಬೆಳ್ಳಿ ಬೊಂಬೆ ಕತ್ರಿನಾ ಕೈಫ್​​​ಗೆ ಜಸ್ಟ್ ಮೊನ್ನೆ 16ನೇ ತಾರೀಖು 38 ವರ್ಷ ಆಯ್ತು.. ಕ್ಯೂಟ್​​​ ಕ್ಯಾಟ್​​​ಗೆ ಮೂವತ್ತೆಂಟಾ ಇಲ್ಲಾ ಹದಿನೆಂಟ ಅಂತ ಫ್ಯಾನ್ಸ್ ಕನ್​​ಫ್ಯೂಸನ್​ನಲ್ಲಿ ಇದ್ದಾರೆ.. ಈ ಟೈಮ್​​ನಲ್ಲೇ ಕತ್ರಿನಾ ಕಡೆಯಿಂದ ಪಡ್ಡೆ ಫ್ಯಾನ್ಸ್​ಗೆ ಹಾರ್ಟ್ ಬ್ರೇಕ್ ಸುದ್ದಿಯೊಂದು ಹೊರಬಂದಿದೆ.. ಕತ್ರಿನಾಗೆ ಶೀಘ್ರಮೇವ ಕಲ್ಯಾಣ ಪ್ರಾಪ್ತಿಯಾಗಲಿದೆಯಂತೆ..

ಬಿಟೌನ್ ಬ್ಯುಟಿ ಕತ್ರಿನಾ ಕೈಫ್​​​.. ಚೆಂದದ ಚೆಲುವಿನ ಜೊತೆಗೆ ಅಂದದ ಅಭಿನಯವನ್ನ ಮಾಡುತ್ತಾ ಬಹುಭಾಷೆಗಳಲ್ಲಿ ಮಿಂಚುತ್ತಿರೋ ನಟಿ ಮಣಿ ಕತ್ರಿನಾ ಕೈಫ್​​..

ಒಬ್ಬ ಬ್ಯುಟಿಫುಲ್ ನಟಿ ಮಣಿ ಬ್ಯುಟಿಫುಲ್​ ಆಗಿ ಅಭಿನಯಿಸೋ ಜೊತೆಗೆ ರಿಸ್ಕಿ ಸಾಹಸಗಳನ್ನ ಪಾತ್ರಕ್ಕೆ ಬೇಕಾಗೋ ತಯಾರಿಯನ್ನ ಹೇಗೆ ಮಾಡಿಕೊಳ್ಳಬೇಕು ಅನ್ನೋದಕ್ಕೆ ಕತ್ರಿನಾ ದಿ ಬೆಸ್ಟ್ ಬ್ಯೂಟಿಫುಲ್ ಎಗ್ಸಾಂಪಲ್.. ತನ್ನೊಬ್ಬ ಸ್ಟಾರ್ ನಟಿಯಾಗಿದ್ದರು, ತಾನು ಏನೇ ಮಾಡಿದ್ರು ನಡಿಯುತ್ತೆ ಎಂದಾಗಿದ್ದರು, ತನ್ನಗೆ ಸಿಕ್ಕ ಪಾತ್ರಕ್ಕಾಗಿ ದೊಡ್ಡ ಮಟ್ಟದ ತಯಾರಿ ಮಾಡಿಕೊಳ್ಳೋ ಪರಿಶ್ರಮದ ಪ್ರತಿಭಾವಂತೆ ಕತ್ರಿನಾ ಕೈಫ್​​​..

ಈಗ ಈ ಧೂಮ್ ಸುಂದರಿ ಧಾಮ್ ಧೂಮ್ ಧಮಾಕ ಸಮಾಚಾರ ಏನ್ ಗೊತ್ತಾ.. ಮೊನ್ನೆ 16ನೇ ತಾರೀಖ್ ಬರ್ತ್​ಡೇಯನ್ನ ಆಚರಿಸಿಕೊಂಡ ಸುಂದ್ರಿ ಮದುವೆ ಮಂಟಪಕ್ಕೆ ಇನ್ನು ಮೂರೇ ಹೆಜ್ಜೆ ಅನ್ನೋ ಸಮಾಚಾರವನ್ನ ಸಾರಿದ್ದಾರೆ..

ರಣ್​ಬೀರ್ ಕಪೂರ್ ಜೊತೆಗೆ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆಗೆ ಪ್ರೀತಿ ಪ್ರೇಮ ಎಂದು ಸದ್ದು ಮಾಡಿದ್ದ ಕತ್ರಿನಾ ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ತಣ್ಣಗಾಗಿ ಬಿಟ್ಟಿದ್ದರು.. ಆದ್ರೆ ಈಗ ಕತ್ರಿನಾ ಬಾಳಿಗೆ ಮತ್ತೊಮ್ಮೆ ಪ್ರೇಮಿ ಎಂಟ್ರಿ ಕೊಟ್ಟಿದ್ದಾನೆ.. ಆ ಪ್ರೇಮಿಯೇ ಉರಿ ಸಿನಿಮಾ ಖ್ಯಾತಿಯ ವಿಕ್ಕಿ ಕೌಶಲ್

ಬಾಲಿವುಡ್​ನ ಉದಯೋನ್ಮುಖ ನಟ ವಿಕ್ಕಿ ಕೌಶಲ್ ಜೊತೆ ಕತ್ರಿನಾ ಪ್ರೇಮ ಲೋಕದಲ್ಲಿದ್ದಾರೆ ಇಬ್ಬರು ಮಧು ಮಕ್ಕಳಾಗಿ ಮದುವೆಯಾಗ್ತಾರೆ ಒಟ್ಟಿಗೆ ಸಂಸಾರ ಸಾಗರದಲ್ಲಿ ಈಜುತ್ತಾರೆ ಅನ್ನೋ ಮಾತುಗಳು ಈಗ ಕೇಳಿ ಬರುತ್ತಿದೆ..

ಇನ್ನು ತಡ ಮಾಡೋದು ಬೇಡ.. ಆದಷ್ಟು ಬೇಗ ಪಿಪಿ ಡುಂ ಡುಂ ವಾಲ್ಗಾ ಊದಿಸಿ ಬಿಡೋಣ ಸದ್ದಿಲ್ಲದೆ ಮದುವೆಯಾಗಿ ಬಿಡೋಣ ಅನ್ನೋ ನಿರ್ಧಾರಕ್ಕೆ ಕತ್ರಿನಾ ಮತ್ತು ವಿಕ್ಕಿ ಬಂದಿದ್ದಾರಂತೆ.. ಕತ್ರಿನಾ ಅವರನ್ನ ವಿಕ್ಕಿ ಪ್ರೀತಿಸುತ್ತಿರೋ ವಿಚಾರ ವಿಕ್ಕಿ ಫ್ಯಾಮಿಲಿಗೆ ಇಷ್ಟವಿಲ್ಲ ಅನ್ನೋ ಸುದ್ದಿ ಇದೆ.. ಈಗ ಈ ಇಬ್ಬರು ಮದುವೆ ಆಗುತ್ತಾರಾ? ಆದ್ರೆ ಯಾವಾಗ ಆಗ್ತಾರೆ ಅನ್ನೋ ಇಂಟರಸ್ಟಿಂಗ್ ಹಾಟ್ ಕೇಕ್​​​..

The post ಶೀಘ್ರವೇ ಚೆಂದುಳ್ಳಿ ಚೆಲುವೆ ಕತ್ರಿನಾಗೆ ಮದುವೆ.. ಬಾಲಿವುಡ್​ನ ಈ ಫೇಮಸ್ ನಟನೇ ವರ.. appeared first on News First Kannada.

Source: newsfirstlive.com

Source link