ಬೆಂಗಳೂರು: ಸುಮಾರು ಎರಡು ವರ್ಷಗಳ ನಂತರ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದ್ದು ಅವರ ಎಂಟ್ರಿಯಿಂದ ಕೈಪಾಳಯದ ಬೇಗುದಿ ತಣಿಯಲಿದೆಯಾ ಎಂಬ ಚರ್ಚೆ ಶುರುವಾಗಿದೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು ರೈತ ಪರ ಕಾರ್ಯಕ್ರಮ ಆಯೋಜಿಸಿ ಆಹ್ವಾನಿಸಿ, ಬರುತ್ತೇನೆ ಎಂದು ರಾಹುಲ್ ಗಾಂಧೀ ಹೇಳಿದ್ದಾರೆ ಎನ್ನಲಾಗಿದೆ.

ಶೀಘ್ರದಲ್ಲೇ ಕೆಪಿಸಿಸಿಯ ಕಿಸಾನ್ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮ ಆಯೋಜಿಸಿ ರಾಹುಲ್ ಗಾಂಧಿಗೆ ಆಹ್ವಾನ ನೀಡಲು ಸಿದ್ಧತೆ ನಡೆದಿದೆಯಂತೆ. ಅಲ್ಲದೇ ಈಗಾಗಲೇ ಪಕ್ಷದ ಪ್ರಮುಖ ನಾಯಕರಿಗೆ ರಾಹುಲ್ ಗಾಂಧಿ ಅಗಮನದ ಬಗ್ಗೆ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ ಎನ್ನಲಾಗಿದೆ.

ಸದ್ಯದ ರಾಜ್ಯ ಕಾಂಗ್ರೆಸ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಹುಲ್ ಭೇಟಿ ಮಹತ್ವ ಪಡೆದುಕೊಂಡಿದೆ. ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ ಖಚಿತವಾಗ್ತಿದ್ದಂತೆ ಕಾಂಗ್ರೆಸ್ ಪಡಸಾಲೆಯಲ್ಲಿ ಆಂತರಿಕ ಕಲಹದ ಚರ್ಚೆ ಚುರುಕು ಪಡೆದುಕೊಂಡಿದ್ದು ಡಿ.ಕೆ. ಶಿವಕುಮಾರ್ ಬಣ, ಸಿದ್ದರಾಮಯ್ಯ ಬಣ ಹಾಗೂ ಹಿರಿಯ ನಾಯಕರ ಬಣದ ನಡುವಣ ಸಂಘರ್ಷಕ್ಕೆ ಇನ್ನಾದರೂ ಬ್ರೇಕ್ ಬೀಳುತ್ತಾ ಎಂಬ ಚರ್ಚೆ ಶುರುವಾಗಿದೆ. ಕರ್ನಾಟಕಕ್ಕೆ ಭೇಟಿ ನೀಡಿದ ವೇಳೆಯೇ ಪ್ರಮುಖ ನಾಯಕರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದು ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಒಗ್ಗಟ್ಟಿನ ಪಾಠ ಭೋದಿಸುವ ಸಾಧ್ಯತೆ ಇದೆ.

The post ಶೀಘ್ರವೇ ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ: ತಣಿಯುತ್ತಾ ಕೈಪಾಳಯದ ಬೇಗುದಿ..? appeared first on News First Kannada.

Source: newsfirstlive.com

Source link