ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್​ ಸೇರಲಿದೆ ‘ಅಣ್ಣಾಥೆ’; ಬಾಕ್ಸ್​ ಆಫೀಸ್​ ಉಡೀಸ್​ ಮಾಡಿದ ರಜನಿ ಸಿನಿಮಾ | Annaatthe Movie Full Collection Rajinikanth Movie to Join 200 crore Club


ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್​ ಸೇರಲಿದೆ ‘ಅಣ್ಣಾಥೆ’; ಬಾಕ್ಸ್​ ಆಫೀಸ್​ ಉಡೀಸ್​ ಮಾಡಿದ ರಜನಿ ಸಿನಿಮಾ

ರಜನಿಕಾಂತ್​

ರಜನಿಕಾಂತ್​ ನಟನೆಯ ‘ಅಣ್ಣಾಥೆ’ ದೀಪಾವಳಿ ನಿಮಿತ್ತ ನವೆಂಬರ್​ 4ರಂದು ರಿಲೀಸ್​ ಆಗಿತ್ತು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುತ್ತಿದೆ. ಮೊದಲ ದಿನವೇ ಅದ್ಭುತ ಗಳಿಕೆ ಮಾಡಿದ್ದ ಈ ಚಿತ್ರದ ಗಳಿಕೆ ಮೂರು ದಿನಗಳಲ್ಲಿ 150 ಕೋಟಿ ರೂಪಾಯಿ ಸಮೀಪಿಸಿದೆ. ಇದನ್ನು ಕೇಳಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ 200 ಕೋಟಿ ಕ್ಲಬ್​ ಸೇರುವ ಸಾಧ್ಯತೆ ಇದೆ.

‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿದೆ. ಕರ್ನಾಟಕ ಹಾಗೂ ಆಂಧ್ರ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್​ ಆಗಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್​​ 5ರಂದು ಸಿನಿಮಾ 42.6 ಕೋಟಿ ರೂಪಾಯಿ, ನವೆಂಬರ್​ 6ರಂದು ಚಿತ್ರ 33.71 ಕೋಟಿ ಗಳಿಸಿದೆ. ಈ ಮೂಲಕ ಸಿನಿಮಾದ ಒಟ್ಟೂ ಗಳಿಕೆ 146.53 ಆಗಿದೆ.

ಇಂದು (ನವೆಂಬರ್​ 7) ಸಿನಿಮಾ ಕಲೆಕ್ಷನ್​ ಹೆಚ್ಚುವ ಸಾಧ್ಯತೆ ಇದೆ. ಇಂದು ಭಾನುವಾರ. ಅಲ್ಲದೆ, ಹಬ್ಬದ ಸಮಯ. ವೀಕೆಂಡ್​ ಆದ್ದರಿಂದ ಜನರು ಚಿತ್ರಮಂದಿರದತ್ತ ಹೆಚ್ಚು ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇಂದಿನ ಕಲೆಕ್ಷನ್​ ಸೇರಿದರೆ ಸಿನಿಮಾದ ಗಳಿಕೆ 150 ಕೋಟಿ ರೂಪಾಯಿ ದಾಟಲಿದೆ. ಶೀಘ್ರವೇ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್​ ಸೇರಲಿದೆ.

‘ಅಣ್ಣಾಥೆ’ ಸಿನಿಮಾವನ್ನು ಸನ್​ ಪಿಕ್ಚರ್ಸ್​ ನಿರ್ಮಾಣ ಮಾಡಿದೆ. ರಜನಿಕಾಂತ್​, ಕೀರ್ತಿ ಸುರೇಶ್​, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್​ 4ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: Tamilrockersನಲ್ಲಿ ಅಕ್ಷಯ್​ ಕುಮಾರ್​ ನಟನೆಯ ‘ಸೂರ್ಯವಂಶಿ’ ಸಿನಿಮಾ ಲೀಕ್

ಕಲೆಕ್ಷನ್​ ವಿಚಾರದಲ್ಲಿ ಎಲ್ಲಾ ದಾಖಲೆ ಪುಡಿ ಮಾಡಿದ ‘ಅಣ್ಣಾಥೆ’; ಇಲ್ಲಿದೆ ರಜನಿ ಚಿತ್ರದ ಮೊದಲ ದಿನದ ಗಳಿಕೆ

TV9 Kannada


Leave a Reply

Your email address will not be published.