ಬಿಗ್‍ಬಾಸ್ ಮನೆಯಲ್ಲಿ ಫಿನಾಲೆಗೆ ದಿನಗಳ ಲೆಕ್ಕಾಚಾರವನ್ನು ಶುಭಾ ಹಾಕುತ್ತಿದ್ದಾರೆ. ಓ ನಾನು ಬೆಳಗ್ಗೆ ಸಾಂಗ್ ಹಾಕಿದಾಗ ನಾನು ಕನಸು ಕಾಣುತ್ತಾ ಇದ್ದೇ ಕಣ್ಣುಬಿಟ್ಟು ನೋಡಿದಾಗ ಇನ್ನು ಬಿಗ್‍ಬಾಸ್ ಮನೆಯಲ್ಲೇ ಇದ್ದೀನಾ ಎಂದು ಅನ್ನಸಿತ್ತು ಎಂದು ಮಂಜು ಬಳಿ ಶುಭಾ ಹೇಳಿಕೊಂಡಿದ್ದಾರೆ.

ಎಷ್ಟುದೂರ ಬಂದಿದ್ದೇವೆ. ಈಗ ನನಗೆ ನಾನು ಪೈನಲ್‍ವರೆಗೂ ಇರಬೇಕು ಅನ್ನಿಸುತ್ತಿದೆ. ಒಂದು ಮೆಸೇಜ್, ಫೋನ್ ಇಲ್ಲದೆ ಇರುವುದು ತುಂಬಾ ಕಷ್ಟವಾಗಿದೆ ಎಂದು ಶುಭಾ ಹೇಳಿದ್ದಾರೆ. ಆಗ ಮಂಜು ನಾವು ಎಷ್ಟು ದೂರದವರೆಗೂ ಬಂದಿದ್ದೇವೆ. ಆದರೆ ಫೈನಲ್ವರೆಗೂ ಇದ್ದೂ ಇನ್ನು ಒಂದು ವಾರ ಇರುವಾಗ ಹೋದರೆ ತುಂಬಾ ಬೇಜಾರ್ ಆಗುತ್ತದೆ ಎಂದು ಮಂಜು ಹೇಳಿದ್ದಾನೆ.

ಆಗ ಅಲ್ಲಿ ಬಂದ ನಿಧಿ ಕೂಡಾ ಫೈನಲ್ ಇರುವುದರ ಕುರುತಾಗಿ ಮಾತನಾಡಿದ್ದಾರೆ. ಮನೆಮಂದಿಗೆ ಬಿಗ್‍ಬಾಸ್ ಫೈನಲ್ ಕುರಿತಾಗಿ ಚಿಂತೆ ಶುರುವಾಗಿದೆ. ಇಷ್ಟು ದೂರ ಬಂದಿದ್ದೇವೆ ನಾವೆಲ್ಲ ಅಂತುಮ ಹಂತದ ವರೆಗೂ ಇರಬೇಕು ಎಂದು ಮಾತನಾಡಲು ಶುರು ಮಾಡಿದ್ದಾರೆ. ಸ್ಪರ್ಧಿಗಳಿಗೆ ಮನೆ ನೆನಪು ಕಾಡುತ್ತಿದೆ. ಆದರೆ ನಾವು ಫೈನಲ್ ವರೆಗೂ ಇರಬೇಕು ಎನ್ನುವ ಹಂಬಲ ಕೂಡಾ ಪ್ರತಿಯೊಬ್ಬರಲ್ಲಿಯೂ ಇದೆ.

ಬಿಗ್‍ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ನಾನು ಗೆಲ್ಲಬೇಕು ಎಂದು ಸ್ಪರ್ಧಿಗಳು ಆಡಲು ಪ್ರಾರಂಭಿಸಿದ್ದಾರೆ. ಎಷ್ಟೇ ಸ್ನೇಹ, ಪ್ರೀತಿಯಿಂದ ಇದ್ದೇವೆ ಎಂದರೂ ಒಳಗೊಳಗೆ ನಾನು ಗೆಲ್ಲಬೇಕು ಎನ್ನುವ ಹಟ ಪ್ರತಿಯೊಬ್ಬರಲ್ಲಿಯೂ ಇದೆ. ಯಾರು ಬಿಗ್‍ಬಾಸ್ ಪಟ್ಟವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

The post ಶುಭಾಗೆ ಕಾಡುತ್ತಿದೆ ಮನೆ ನೆನಪು appeared first on Public TV.

Source: publictv.in

Source link