ಕಿರುತರೆಯ ಧಾರವಾಹಿಯಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದ ವೈಷ್ಣವಿ, ಬಿಗ್‍ಬಾಸ್ ಮನೆಯಲ್ಲಿಯೂ ತಮ್ಮ ಮುಗ್ಧತನದಿಂದ ವೀಕ್ಷಕರ ಮನಗೆಲ್ಲುತ್ತಿದ್ದಾರೆ. ದೊಡ್ಮನೆ ಸದಸ್ಯರ ಮಧ್ಯೆ ಬಹಳ ಸೈಲೆಂಟ್ ಆಗಿ ಆಟ ಆಡಿಕೊಂಡು ಹೋಗುತ್ತಿರುವ ವೈಷ್ಣವಿ ಒಂದು ರೀತಿ ಸೆಂಟರ್ ಆಫ್ ದಿ ಆಟ್ರಕ್ಷನ್ ಎಂದೇ ಹೇಳಬಹುದು. ಮನೆಯ ಎಲ್ಲಾ ಸದಸ್ಯರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ವೈಷ್ಣವಿ, ರಘು ಜೊತೆಗೆ ಸ್ವಲ್ಪ ಹೆಚ್ಚಾಗಿ ಬೆರೆಯುತ್ತಾರೆ ಹಾಗೂ ಒಳ್ಳೆಯ ಸ್ನೇಹವನ್ನು ಹೊಂದಿದ್ದಾರೆ.

ಇಷ್ಟು ದಿನ ಏನೇ ಬಂದರೂ ಕೊಂಚವು ಸಿರಿಯಸ್ ಆಗಿ ತೆಗೆದುಕೊಳ್ಳದೇ ವೈಷ್ಣವಿ ಕಾಮ್ ಆಗಿ ಹೋಗುತ್ತಿದ್ದರು. ಆದರೆ ರಘು ಹಾಗೂ ವೈಷ್ಣವಿ ಬಗ್ಗೆ ಹಗುರವಾಗಿ ಮಾತನಾಡಿದ ಶುಭಾ ಪೂಂಜಾಗೆ ವೈಷ್ಣವಿ ಖಡಕ್ ಆಗಿ ಉತ್ತರ ನೀಡಿದ್ದಾರೆ. ಕಿಚನ್ ಏರಿಯಾದಲ್ಲಿ ವೈಷ್ಣವಿ ಹಾಗೂ ನಿಧಿ ಅಡುಗೆ ಮಾಡುವ ವೇಳೆ ರಘು ವೈಷ್ಣವಿ ಹಿಂದೆ ನಿಂತಿರುತ್ತಾರೆ. ಈ ವೇಳೆ ಶುಭಾ ಪೂಂಜಾ, ಅಡುಗೆ ಮಾಡುವಾಗ ಕೂಡ ಅವಳ ಹಿಂದೆನೇ ನಿಂತು ಕೊಂಡಿರಬೇಕಾ ಎಂದು ಪ್ರಶ್ನಿಸುತ್ತಾರೆ.

ಆಗ ರಘು ಹು.. ಯಾಕ್ ಅಂದರೆ ನನಗೆ ವೈಷ್ಣವಿ ಕಂಡರೆ ಅಷ್ಟು ಇಷ್ಟ ಎಂದಾಗ ಶುಭಾ, ಅದು ನಮಗೂ ಗೊತ್ತಿದೆ. ನೀವು ಯಾಕ್ ಇಬ್ಬರು ಹೋಗಿ ಸಪರೇಟ್ ಆಗಿ ಬಿಗ್‍ಬಾಸ್ ಮಾಡಿಕೊಳ್ಳಬಾರದು ಎನ್ನುತ್ತಾರೆ.

ಬಳಿಕ ಈ ಮಾತಿಗೆ ವೈಷ್ಣವಿ, ಓ ಗಾಡ್, ಪ್ಲೀಸ್.. ಒಂದೇ ಒಂದು ರಿಕ್ವೆಸ್ಟ್ ಮಾಡುತ್ತೇನೆ. ಅದರ ಬಗ್ಗೆ ಮಾತನಾಡುವುದು ಬೇಡ. ಅವರಿಗೆ ಮದುವೆಯಾಗಿದೆ. ಒಂದು ಮಗು ಇದೆ ಎಂದು ಶುಭಾಗೆ ಟಾಂಗ್ ನೀಡಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಗಪ್‍ಚುಪ್ ಆಗುತ್ತಾರೆ.

The post ಶುಭಾ ಪೂಂಜಾಗೆ ಖಡಕ್ ಆಗಿ ಉತ್ತರ ಕೊಟ್ಟ ವೈಷ್ಣವಿ! appeared first on Public TV.

Source: publictv.in

Source link