ನಾರೋಗ್ಯದ ಕಾರಣ ದಿವ್ಯಾ ಉರುಡುಗ ಮನೆಯಿಂದ ಹೊರ ನಡೆದಿರುವುದಕ್ಕೆ ಮನೆಯಲ್ಲಿ ನೀರವ ಮೌನ ಆವರಿಸಿದೆ. ಪ್ರತಿಯೊಬ್ಬ ಸ್ಫರ್ಧಿಯೂ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲದ ಮಧ್ಯೆ ದಿವ್ಯಾ ಉರುಡುಗ ದೂರವಾಗಿದ್ದಕ್ಕೆ ಶುಭಾ ಪೂಂಜಾ ಗಳಗಳನೆ ಅತ್ತಿದ್ದಾರೆ.

ಹೌದು ದಿವ್ಯಾ ಉರುಡುಗ ಅವರಿಗೆ ಅನಾರೋಗ್ಯದ ಕಾರಣ ಮನೆಯಿಂದ ಹೊರ ಹೋಗಿದ್ದು, ಅವರಿಗೆ ಯೂರಿನ್ ಇನ್ಫೆಕ್ಷನ್ ಆಗಿದೆ, ಸ್ಕ್ಯಾನ್ ಮಾಡಿಸಲು ಹೋಗಿದ್ದಾರೆ, ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ನಿನ್ನೆಯೇ ಬಿಗ್ ಬಾಸ್ ತಿಳಿಸಿದ್ದರು. ಇಂದು ಅವರ ಬಟ್ಟೆಯನ್ನು ಸಹ ಸ್ಟೋರ್ ರೂಮ್ ಗೆ ಕಳುಹಿಸುವಂತೆ ಸೂಚಿಸಿದ ಬಳಿಕ ಮನೆ ಮಂದಿಯೆಲ್ಲ ಶಾಕ್ ಆಗಿದ್ದು, ದಿವ್ಯಾ ಉರುಡುಗ ಹೋಗಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಹಿಳಾ ಸ್ಪರ್ಧಿಗಳ ಪೈಕಿ ಶುಭಾ ಬಹಳ ಬೇಸರ ಪಟ್ಟು ಗಳಗಳನೆ ಅತ್ತಿದ್ದಾರೆ.

ಅರವಿಂದ್ ಹಾಗೂ ಶುಭ ಪೂಂಜಾ ಮಾತನಾಡಿದ್ದು, ಅರವಿಂದ್ ಬೇಸರದಲ್ಲಿದ್ದಿದ್ದಕ್ಕೆ ಸ್ಟೇ ಸ್ಟ್ರಾಂಗ್ ಎಂದು ಹೇಳಿದ್ದಾರೆ. ಅಲ್ಲದೆ ನನಗೂ ಡೇ ಒನ್ ಇಂದ ಅಕ್ಕ ಎಂದು ಕರೆದಿದ್ದು ಅವಳೊಬ್ಬಳೆ ಎಂದು ಹೇಳಿದ್ದಾರೆ. ಈ ಮೂಲಕ ತಾವು ಅಷ್ಟು ಅತ್ತಿದ್ದೇಕೆ, ದಿವ್ಯಾ ಉರುಡುಗ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಹೊರ ಹಾಕಿದ್ದಾರೆ.

ಅವಳು ಯಾವಾಗಲೂ ಅಕ್ಕ ಎಂದು ಕರೆಯುತ್ತಿದ್ದಳು, ನಾನು ಯಾವಾಗಲೂ ಬೈತಿದ್ದೆ. ಕ್ಲೋಸ್‍ನೆಸ್ ಬೇರೆ, ಸಡನ್ ಆಗಿ ಅವಳು ಕನ್ಫೆಶನ್ ರೂಂಗೆ ಹೋದಳು ಅದೇ ಲಾಸ್ಟ್ ನಾನು ನೋಡಿದ್ದು. ಗುಡ್ ಬೈ ಹೇಳಲಿಲ್ಲ ಏನೂ ಇಲ್ಲ, 65 ದಿನ ಜೊತೆಗಿದ್ದಾಗ ಬಾಂಡಿಂಗ್ ಇದ್ದೇ ಇರುತ್ತದೆ. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಹೋಗುತ್ತಾರೆ ಎಂದರೆ ದುಃಖ ಆಗೇ ಆಗುತ್ತೆ ಎಂದು ನಿಧಿ ಸುಬ್ಬಯ್ಯ ಬಳಿ ಶುಭಾ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಶುಭ ಜೊತೆ ಅರವಿಂದ್ ಸಹ ಗಳಗಳನೆ ಅತ್ತಿದ್ದಾರೆ. ಆಗ ನಿಧಿ ಸುಬ್ಬಯ್ಯ ಆಗಮಿಸಿ, ದುಃಖ ಆಗಿದೆ ಸೂಪರ್ ಮ್ಯಾನ್ ರೀತಿ ಪೋಸ್ ಕೊಡಬೇಡ ಎಂದು ಸಮಾಧಾನ ಮಾಡಿದ್ದಾರೆ. ಬೇಡ ಎಂದರೂ ನೆನಪಾಗುತ್ತೆ ಅದು. ತುಂಬಾ ಹೊತ್ತು ಟೈಮ್ ಸ್ಪೆಂಡ್ ಮಾಡುತ್ತಿದ್ದೆವು, ಬೆಳಗ್ಗೆಯಿಂದ ರಾತ್ರಿ ವರೆಗೆ ಜೊತೆಗೇ ಇರುತ್ತಿದ್ದೆವು. ಗಲಾಟೆ ಆದ್ರು ನಿನ್ನ ಜೊತೆಗೆ, ಖುಷಿಯಾದ್ರೂ ನಿನ್ನ ಜೊತೆನೆ ಅಂದುಕೊಂಡಿದ್ದೆವು. ಅವಳಿಗೂ ತುಂಬಾ ಬೇಸರವಾಗಿದೆ ಎಂದಿದ್ದಾರೆ. ಎಷ್ಟೇ ತಡೆದುಕೊಂಡರೂ ಕಂಟ್ರೋಲ್ ಆಗುವುದಿಲ್ಲ ಎಂದು ಅರವಿಂದ್ ದುಃಖಿತರಾಗಿದ್ದಾರೆ. ಬಳಿಕ ಮನೆಯವರೆಲ್ಲ ಅರವಿಂದ್ ಅವರನ್ನು ಸಮಾಧಾನ ಮಾಡಿದ್ದಾರೆ.

The post ಶುಭಾ ಪೂಂಜಾ ಕಣ್ಣೀರು ಹಾಕಿದ್ಯಾಕೆ? ದಿವ್ಯಾ ಜೊತೆ ಏನ್ ಸಂಬಂಧ? appeared first on Public TV.

Source: publictv.in

Source link