ಶುಭಾ ಪೂಂಜಾ ಮದುವೆ ವಿಡಿಯೋ ರಿಲೀಸ್​; ಮಿಂಚಿದ ಮಂಜು ಪಾವಗಡ   | Shubha Poonja and Sumanth Marriage video goes viral


ಸ್ಯಾಂಡಲ್​ವುಡ್ ನಟಿ, ಕನ್ನಡ ಬಿಗ್​ ಬಾಸ್​ 8ರ ಸ್ಪರ್ಧಿ ಶುಭಾ ಪೂಂಜ ಅವರು ಈ ತಿಂಗಳ ಆರಂಭದಲ್ಲಿ ಮದುವೆ ಆಗಿದ್ದರು. ದೀರ್ಘಕಾಲದ ಗೆಳೆಯ ಸುಮಂತ್ ಜತೆ ಅವರು ಸಪ್ತಪದಿ ತುಳಿದಿದ್ದರು. ಸುಮಂತ್ ಹಾಗೂ ಶುಭಾ ವಿವಾಹ ಸಮಾರಂಭ ಮಂಗಳೂರಿನಲ್ಲಿ ನಡೆದಿತ್ತು. ಸಿಂಪಲ್ ಆಗಿ ಈ ಮದುವೆ ನೆರವೇರಿತ್ತು. ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆದಿತ್ತು. ಈ ಮದುವೆಯ ವಿಡಿಯೋ ಈಗ ಲಭ್ಯವಾಗಿದೆ. ಶುಭಾ ಮದುವೆಯಲ್ಲಿ ಬಿಗ್ ಬಾಸ್ ವಿನ್ನರ್​ ಮಂಜು ಪಾವಗಡ ಸಖತ್​ ಆಗಿ ಮಿಂಚಿದ್ದಾರೆ. ಹಾಗಾದರೆ, ಶುಭಾ ಮದುವೆ ಹೇಗಿತ್ತು? ಆ ಪ್ರಶ್ನೆಗೆ ವಿಡಿಯೋದಲ್ಲಿದೆ ಉತ್ತರ. ಶುಭಾ ಹಾಗೂ ಸುಮಂತ್ ದೀರ್ಘಕಾಲದ ಸ್ನೇಹಿತರು.  ಬಿಗ್​ ಬಾಸ್​ಗೆ ತೆರಳಿದ ಹಿನ್ನೆಲೆಯಲ್ಲಿ ಇವರ ವಿವಾಹ ವಿಳಂಬವಾಗಿತ್ತು.

TV9 Kannada


Leave a Reply

Your email address will not be published. Required fields are marked *