ಟೀಮ್​ ಇಂಡಿಯಾದ ಭರವಸೆಯ ಆರಂಭಿಕ ಆಟಗಾರ ಶುಭ್​ಮನ್​ ಗಿಲ್​, ಹೊಸ ಲುಕ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಗಿಲ್ ಹೇರ್​ಸ್ಟೈಲ್ ಇದೀಗ, ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗ್ತಿದೆ. ಡಿಫ್ರೆಂಟ್ ಆಗಿ ಹೇರ್​ಕಟ್ ಮಾಡಿಸಿಕೊಂಡಿರುವ ಗಿಲ್​​ ಫ್ರೆಶ್​ಲುಕ್ಗೆ, ಕ್ರಿಕೆಟ್​​ ಫ್ಯಾನ್ಸ್​ ಫುಲ್​ ಫಿದಾ ಆಗಿದ್ದಾರೆ. ಒಂದಲ್ಲ, ಒಂದು ಹೊಸ ಲುಕ್​​ನಲ್ಲಿ ಸ್ಟೈಲಿಷ್​​ ಆಗಿ ಕಾಣಿಸಿಕೊಳ್ಳುವ ಗಿಲ್​, ಈ ಬಾರಿ ಡಿಫರೆಂಟ್​​ ಸ್ಟೈಲ್​​ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಫುಲ್​​ ಶಾರ್ಟ್​​ ಹೇರ್​, ಐಬ್ರೋ ಬಳಿ ಗೆರೆ, ಇದು ಕ್ರಿಕೆಟ್​​ ಫ್ಯಾನ್ಸ್​​ಗೆ ತುಂಬಾ ಇಷ್ಟವಾಗಿದೆಯಂತೆ. ಗಿಲ್​ರಂತ ತಾವು ಕೂಡ ಅದೇ ಹೇರ್​ ಕಟ್​ ಮಾಡಿಸಿಕೊಳ್ಳೋದಾಗಿ, ಕ್ರಿಕೆಟ್ ಫ್ಯಾನ್ಸ್​ ಸೋಶಿಯಲ್ ಮೀಡಿಯಾದಲ್ಲಿ ಹೇಳ್ತಿದ್ದಾರೆ. ಗಾಯದ ಕಾರಣ ಸದ್ಯ ಇಂಗ್ಲೆಂಡ್​ ಟೆಸ್ಟ್​​​ ಸರಣಿಯಿಂದ ಹೊರಗುಳಿದಿರುವ ಶುಭ್​ಮನ್​ ಗಿಲ್​, ತಂಡದ ಜೊತೆಯೇ ಉಳಿದುಕೊಂಡಿದ್ದಾರೆ. ಆದರೆ ಗಿಲ್​​ ಜಾಗಕ್ಕೆ ಯಾರನ್ನ ಕಣಕ್ಕಿಳಿಸಬೇಕೆಂಬ ಗೊಂದಲಕ್ಕೆ ಟೀಮ್​ ಮ್ಯಾನೇಜ್​ಮೆಂಟ್ ಸಿಲುಕಿದೆ. ಸದ್ಯ ರೋಹಿತ್​ ಶರ್ಮಾ ಜೊತೆಗೆ ಮಯಾಂಕ್​ ಅಗರ್​ವಾಲ್​ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

The post ಶುಭ್​ಮನ್ ಗಿಲ್ ಹೊಸ ಲುಕ್​ಗೆ, ಫ್ಯಾನ್ಸ್​ ಫುಲ್​ ಫಿದಾ..! appeared first on News First Kannada.

Source: newsfirstlive.com

Source link