ಮೀರತ್​​: ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೂಟರ್​ ದಾದಿ ಎಂದೇ ಖ್ಯಾತಿ ಪಡೆದಿದ್ದ ಚಂದ್ರೋ ತೋಮರ್​ ಅವರು ಇಂದು ಮೃತಪಟ್ಟಿದ್ದಾರೆ. ಏಪ್ರಿಲ್​​ 26ರಂದು ಚಂದ್ರೋ ತೋಮರ್​ ಅವರ ವರದಿ ಕೊರೊನಾ ಪಾಸಿಟಿವ್ ಬಂದಿದ್ದು, ಆ ಬಳಿಕ ಅವರು ಚಿಕಿತ್ಸೆಗಾಗಿ ಮೀರತ್​​​ನ ಆಸ್ಪತ್ರೆಗೆ ದಾಖಲಾಗಿದ್ದರು.

ವಿಮಾನಯಾನ ಸಚಿವ ಹರ್ಷದೀಪ್​​ ಸಿಂಗ್ ಅವರು ಟ್ವೀಟ್ ಮಾಡಿ, ಚಂದ್ರೋ ತೋಮರ್​ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶದ ಬಾಗ್​​ಪಾಟ್​​ನಲ್ಲಿ 89 ವರ್ಷದ ಚಂದ್ರೋ ತೋಮರ್ ಅವರು ವಾಸಿಸುತ್ತಿದ್ದರು. ಚಂದ್ರೋ ತೋಮರ್​ ಅವರ ಜೀವನವನ್ನೇ ಪ್ರೇರಣೆಯಾಗಿ 2019ರಲ್ಲಿ ಬಾಲಿವುಡ್​​ನಲ್ಲಿ ‘ಸಾಂಡ್ ಕಿ ಆಂಖ್’ ಎಂಬ ಸಿನಿಮಾ ನಿರ್ಮಾಣ ಮಾಡಲಾಗಿತ್ತು.

ವಿಶ್ವದಲ್ಲೇ ಅತಿ ಹಿರಿಯ ವಯಸ್ಸಿನ ಶಾರ್ಪ್​​ ಶೂಟರ್​​​ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದ ಚಂದ್ರೋ ತೋಮರ್ ಅವರು, ತಮ್ಮ 60 ಪ್ಲಸ್​ ವಯಸ್ಸಿನಲ್ಲಿ ಗನ್​​ ಕೈಗೆತ್ತಿಕೊಂಡು ಈ ಸಾಧನೆ ಮಾಡಿದ್ದರು. ಚಂದ್ರೋ ತೋಮರ್ ಅವರ ಸಹೋದರಿ ಪ್ರಕಾಶಿ ತೋಮರ್ ಅವರು ಕೂಡ ಶಾರ್ಪ್​ ಶೂಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಕ್ರೀಡಾಕೂಟಗಳಲ್ಲಿ ಭಾಗಿಯಾಗಿದ್ದ ಚಂದ್ರೋ ತೋಮರ್​ ಅವರು ಸಾಕಷ್ಟು ಮೆಡಲ್​​​ಗಳನ್ನು ಪಡೆದುಕೊಂಡಿದ್ದರು. ಮನೆಯಲ್ಲಿ ಅವರ ನಡೆಗೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಚಂದ್ರೋ ತೋಮರ್​ ಮಕ್ಕಳು ಹಾಗೂ ಮೊಮ್ಮಕಳು ಅವರಿಗೆ ಪ್ರೋತ್ಸಾಹ ನೀಡಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದರು.

The post ‘ಶೂಟರ್​ ದಾದಿ’ಯನ್ನೂ ಬಲಿ ಪಡೆದ ಕೊರೊನಾ appeared first on News First Kannada.

Source: newsfirstlive.com

Source link