ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿರುವ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ಶಸ್ತ್ರ ಚಿಕಿತ್ಸೆಗೆ ಅಮೇರಿಕಾಗೆ ತೆರಳುತ್ತಿದ್ದಾರೆ.
ಸದ್ಯ ಮಹೇಶ್ ಬಾಬು ‘ಸರ್ಕಾರು ವಾರಿ ಪಾಟ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿ ಇದ್ದು, ಈ ಸಿನಿಮಾದ ಆ್ಯಕ್ಷನ್ ಸೀನ್ ವೇಳೆ ಮೊಣಕಾಲಿಗೆ ಪೆಟ್ಟು ಬಿದ್ದಿದ್ದು, ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಅಮೇರಿಕಾಗೆ ತೆರಳುತ್ತಿದ್ದಾರೆ.
ವೈದ್ಯರು ಹೇಳಿರುವಂತೆ, ಇದು ತೀರಾ ಅಪಾಯಕಾರಿ ಪೆಟ್ಟೇನು ಅಲ್ಲ. ಆದರೆ ಅದನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಆಗುತ್ತದೆ ಎಂದು ತಿಳಿಸಿದ್ದಾರೆ. ಮೊಣಕಾಲಿನ ಸಮಸ್ಯೆ ಮಹೇಶ್ ಬಾಬುಗೆ 2014 ರಿಂದಲೇ ಇದ್ದು, ಆಗಿನಿಂದಲೂ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಸದ್ಯ ಇದೀಗ ಅದರ ತೊಂದರೆ ಹೆಚ್ಚಾಗಿದ್ದು, ಶಸ್ತ್ರ ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಲಿದ್ದಾರೆ.