ಶೂ ಧರಿಸಿಯೇ ಚಾಮುಂಡಿ ದೇವಸ್ಥಾನ ಪ್ರವೇಶಿಸಿದ ಎಸ್​​ಪಿ; ಆಮೇಲೇನಾಯ್ತು?

ಮೈಸೂರು: ಚಾಮುಂಡೇಶ್ವರಿ ದೇಗುಲದಲ್ಲಿ ಪೊಲೀಸ್​​ ಎಸ್​ಪಿಯೊಬ್ಬರು ಶೂ ಧರಿಸಿ ದೇಗುಲ ಪ್ರವೇಶಿಸಿದ ಘಟನೆ ಇಂದು ನಡೆದಿದೆ.

ಇಂದು ಬೆಳಗ್ಗೆ ಮಾಜಿ ಸಿಎಂ ಎಸ್​​.ಎಂ ಕೃಷ್ಣ ಅವರು ಇಂದು ಅಧಿಕೃತವಾಗಿ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಎಸ್​​ಎಂಕೆ ಹಾಗೂ ಸಚಿವರು ಚಾಮುಂಡೇಶ್ವರಿ ದರ್ಶನ ಪಡೆದುಕೊಂಡರು. ಈ ವೇಳೆ ಮುಖ್ಯಮಂತ್ರಿ ಬಂದೂಬಸ್ತ್ ನಲ್ಲಿದ್ದ ಎಸ್​​ಪಿ ಆರ್.ಚೇತನ್ ಅವರು ಶೂ ಧರಿಸಿ ಚಾಮುಂಡೇಶ್ವರಿ ದೇಗುಲ ಪ್ರವೇಶ ಮಾಡಿದ್ದರು.

ಎಸ್​​ಪಿ ಚೇತನ್ ಶೂ ಧರಿಸಿ ದೇಗುಲ ಒಳ ಹೋಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಎಸ್​​ಪಿ ತಾವು ಶೂ ಧರಿಸಿ ದೇಗುಳ ಒಳ ಹೋಗುತ್ತಿದ್ದೇನೆ ಎಂಬುವುದನ್ನು ಮರೆತಿದ್ದ ಕಾರಣ, ಸಿಬ್ಬಂದಿ ಸಾರ್​​​… ಶೂ ಶೂ ಎಂದು ಕೂಗಿ ಕೊಂಡರು. ಅಲ್ಲದೇ ಮತ್ತೊಬ್ಬ ಸಿಬ್ಬಂದಿ ಓಡಿ ಬಂದು ಅವರನ್ನು ಹೊರ ಬರುವಂತೆ ಕರೆದರು. ಪೊಲೀಸ್ ಸಿಬ್ಬಂದಿ ಕೂಗಿಕೊಳ್ಳುತ್ತಿದ್ದಂತೆ ಹೊರಬಂದ ಚೇತನ್​​ ಶೂ ಬಿಚ್ಚಿ ಬಳಿಕ ದೇಗುಲ ದತ್ತ ನಡೆದರು. ಚಾಮುಂಡಿ ಬೆಟ್ಟದ ಮುಖ್ಯದ್ವಾರದಲ್ಲಿ ಘಟನೆ ನಡೆದಿದೆ.

News First Live Kannada

Leave a comment

Your email address will not be published. Required fields are marked *