ಶೃಂಗೇರಿ: ಕಾರಿನಿಂದ ಇಳಿದು ಶಾಲಾ ವಿದ್ಯಾರ್ಥಿಗಳಿಗೆ‌ ಆಲ್ ದಿ ಬೆಸ್ಟ್ ಹೇಳಿದ ರಾಷ್ಟ್ರಪತಿ; ವಿಡಿಯೋ ನೋಡಿ | President Ramnath Kovind wishes School Students in Shringeri Watch Video

ಶೃಂಗೇರಿ: ಕಾರಿನಿಂದ ಇಳಿದು ಶಾಲಾ ವಿದ್ಯಾರ್ಥಿಗಳಿಗೆ‌ ಆಲ್ ದಿ ಬೆಸ್ಟ್ ಹೇಳಿದ ರಾಷ್ಟ್ರಪತಿ; ವಿಡಿಯೋ ನೋಡಿ

ವಿದ್ಯಾರ್ಥಿಗಳಿಗೆ‌ ಆಲ್ ದಿ ಬೆಸ್ಟ್ ಹೇಳಿದ ರಾಷ್ಟ್ರಪತಿ

ಚಿಕ್ಕಮಗಳೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿಯಿಂದ ತೆರಳುವಾಗ ಶಾಲಾ ವಿದ್ಯಾರ್ಥಿಗಳಿಗೆ‌ ಆಲ್ ದಿ ಬೆಸ್ಟ್ ಹೇಳಿದ್ದಾರೆ. ದೇಗುಲದಿಂದ ತೆರಳುವಾಗ ಈ ವಿಶೇಷ ಮತ್ತು ಭಾವನಾತ್ಮಕ ದೃಶ್ಯ ಕಂಡುಬಂದಿದೆ. ಮಕ್ಕಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶುಭ ಹಾರೈಸಿದ್ದಾರೆ. ದೇಗುಲದಿಂದ ಹೆಲಿಪ್ಯಾಡ್​ಗೆ ತೆರಳುವಾಗ ಶುಭಾಶಯ ಕೋರಿದ್ದಾರೆ. ಕಾರಿನಿಂದ ಇಳಿದು ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಕೆಲವು ಕ್ಷಣ ರಸ್ತೆಯಲ್ಲೇ ನಿಂತು ಮಕ್ಕಳ ಕಡೆಗೆ ರಾಷ್ಟ್ರಪತಿಗಳು ಕೈಬೀಸಿದ್ದಾರೆ.

ಮೆಣಸೆ ಹೆಲಿಪ್ಯಾಡ್​ಗೆ ಹೆಲಿಕ್ಯಾಪ್ಟರ್ ಮೂಲಕ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಆಗಮಿಸಿದ್ದರು. ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಮಠದ ವತಿಯಿಂದ ರಾಷ್ಟ್ರಪತಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಗಿತ್ತು. ಆನೆ, ಅಶ್ವ, ಕುಂಭದೊಂದಿಗೆ ರಾಷ್ಟ್ರಪತಿ ಕೋವಿಂದ್​ ಅವರಿಗೆ ಸ್ವಾಗತ ಕೋರಲಾತ್ತು. ಶಾರದಾಂಬೆಯ ದರ್ಶನ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಆ ಬಳಿಕ ನವರಾತ್ರಿ ಉತ್ಸವದಲ್ಲಿ ಕುಟುಂಬ ಸಮೇತ ಭಾಗಿಯಾಗಿದ್ದರು. ಸಂಜೆ ನಾಲ್ಕು ಗಂಟೆವರೆಗೂ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿಯಾಗಿದ್ದರು.

ಮಂಗಳೂರು ಏರ್​​ಪೋರ್ಟ್​ನಿಂದ ಹೆಲಿಕಾಪ್ಟರ್​​ನಲ್ಲಿ ಶೃಂಗೇರಿಯತ್ತ ಪ್ರಯಾಣ ಬೆಳೆಸಿದ್ದರು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳೂರಿನಿಂದ ಶೃಂಗೇರಿಗೆ ತೆರಳಿದ್ದರು. ಮಂಗಳೂರಿನ ಸರ್ಕ್ಯೂಟ್ ಹೌಸ್​ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಕೋವಿಂದ್ ತೆರಳಿದ್ದರು. ಏರ್ಪೋರ್ಟ್​ನಿಂದ ಹೆಲಿಕಾಪ್ಟರ್​ನಲ್ಲಿ ಶೃಂಗೇರಿಯತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಯಾಣಿಸಿದ್ದರು. ನಿನ್ನೆ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್​ನಲ್ಲಿ ರಾಷ್ಟ್ರಪತಿ ವಾಸ್ತವ್ಯ ಹೂಡಿದ್ದರು. ಇಂದು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ 450 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಉದ್ಘಾಟಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್

ಇದನ್ನೂ ಓದಿ: ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ; ಚಾಮರಾಜನಗರದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ

TV9 Kannada

Leave a comment

Your email address will not be published. Required fields are marked *