ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿಗೆ ಸ್ಟೋರಿ ಸಿಕ್ಕಾಯ್ತಂತೆ. ಹೀಗೆ ಇನ್ನೇನು ಡೈರೆಕ್ಷನ್ ಶುರು ಮಾಡೋದೆ ಅಂತಿದ್ದಾರೆ ಅವರು. ಈಗಾಗಲೇ ರಿಕ್ಕಿ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಗಳನ್ನು ನಿರ್ದೇಶಿಸಿರೋ ಶೆಟ್ಟಿ, ರುದ್ರಪ್ರಯಾಗ ಅನ್ನೋ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಈ ನಡುವೆ ಮತ್ತೊಂದು ಬಾರಿ ಡೈರೆಕ್ಟರ್ ಕ್ಯಾಪ್ ತೊಡಲು ಮುಂದಾಗಿದ್ದಾರೆ.

ತಮ್ಮ ಹೊಸ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಿಷಬ್, ಹೇಳೋಕೊಂದು ಕಥೆ ಸಿಕ್ಕಾಯ್ತು… ಇನ್ನು ಮಾಡೋದೊಂದೆ ಬಾಕಿ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಇರಲಿ ಅಂತಾ ಬರೆದುಕೊಂಡಿದ್ದಾರೆ. ಅಲ್ಲದೇ #BacktoDirection ಅಂತ ಹ್ಯಾಷ್​ಟ್ಯಾಗ್ ಕೂಡ ಹಾಕಿದ್ದಾರೆ.

ಆದ್ರೆ ಈ ಚಿತ್ರದ ನಿರ್ಮಾಪಕರು ಯಾರು? ನಟಿ ಯಾರು? ಯಾವಾಗ ಶೂಟಿಂಗ್? ಅನ್ನೋದ್ರ ಬಗ್ಗೆ ಇನ್ನೂ ವಿವರವನ್ನ ರಿಷಬ್ ಹಂಚಿಕೊಂಡಿಲ್ಲ.

 

 

 

The post ಶೆಟ್ಟರಿಗೆ ಕತೆ ಸಿಕ್ತಂತೆ.. ಮತ್ತೆ ಶೂಟಿಂಗ್ ಯಾವಾಗ ಗುರು?! appeared first on News First Kannada.

Source: newsfirstlive.com

Source link