ಆಸ್ಟ್ರೇಲಿಯನ್​ ಲೆಗ್​ ಸ್ಪಿನ್ನರ್​ ಶೇನ್​ ವಾರ್ನ್​ಗೆ ಅಭಿಮಾನಿಯೊಬ್ಬ ಟ್ವಿಟರ್​ನಲ್ಲಿ ಸ್ಪಿನ್ನಿಂಗ್​ ಪಾಠ ಮಾಡಿದ್ದಾನೆ. 

ನಿವೃತ್ತ ಕ್ರಿಕೆಟ್​ ಆಟಗಾರ ಶೇನ್​ ವಾರ್ನ್​ ಎಂಥ ಪ್ಲೇಯರ್​ ಅನ್ನೋದು ಇಡೀ ವಿಶ್ವಕ್ಕೆ ಗೊತ್ತಿದೆ. ಆದ್ರೆ, ಅಂಥ ಲೆಗ್​ ಸ್ಪಿನ್ನರ್​ಗೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಅಭಿಮಾನಿ, ಸ್ಪಿನ್ ಅಂದ್ರೆ ಏನು? ಅದನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕು ಅನ್ನೋ ಪಾಠವನ್ನ ಮಾಡಿದ್ದಾನೆ. 

ನ್ಯೂಜಿಲ್ಯಾಂಡ್​ ತಂಡ ಯಾವುದೇ ಸ್ಪಿನ್ನರ್​ಗಳನ್ನ ಆಟವಾಡಿಸ್ತಾಯಿಲ್ಲ ಅಂತ ಶೇನ್​ ವಾರ್ನ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ರಿಪ್ಲೈ ಕೊಟ್ಟಿರೋ ಒಬ್ಬ ಅಭಿಮಾನಿ ‘‘ಶೇನ್ ಅಣ್ಣಾ , ನಿಂಗೆ ಸ್ಪಿನ್​ ಬಗ್ಗೆ ಗೊತ್ತಾ? ಅದು ಹೇಗ್​ ಆಗುತ್ತೆ ಅನ್ನೋದಾದ್ರೂ ಗೊತ್ತಾ? ಪಿಚ್​ ಡ್ರೈ ಆಗಿರ್ಬೇಕು, ಆದ್ರೆ,  ಪಿಚ್​ ಡ್ರೈ ಆಗಲ್ಲ, ಯಾಕಂದ್ರೆ, ಮುಂದೆ  ಮಳೆ ಬರೋದು ಪಕ್ಕಾ, ಹೀಗಾಗಿ, ಅದು ಡ್ರೈ ಆಗಿರಲ್ಲ’ ಅಂತ ಹೇಳಿದ್ದಾನೆ. ಸದ್ಯ, ಈ ಟ್ವೀಟ್​ ವೈರಲ್​ ಆಗ್ತಾಯಿದ್ದು, ಇದನ್ನ ಸೆಹ್ವಾಗ್​ ಕೂಡ ಶೇರ್​ ಮಾಡಿ, ‘ಶೇನ್, ಈ ಕಮ್ಮೆಂಟ್​ನ ಫ್ರೇಮ್​ ಹಾಕಿಸಿಕೊಳ್ಳಿ, ಹಾಗೆ, ಸ್ಪಿನ್​ ಬಗ್ಗೆ ಸ್ವಲ್ಪ ಕಲಿತುಕೊಳ್ಳಿ’ ಅಂತ ಕಾಲೆಳೆದಿದ್ದಾರೆ.

The post ಶೇನ್ ವಾರ್ನ್​ಗೆ ಸ್ಪಿನ್ನಿಂಗ್ ಪಾಠ ಕಲಿಸಿದ ​ಅಭಿಮಾನಿ.. ಕಾಲೆಳೆದ ಸೆಹ್ವಾಗ್ appeared first on News First Kannada.

Source: newsfirstlive.com

Source link