ಸಾವಿಗೂ ಮುಂಚೆ ಶೇನ್ ವಾರ್ನ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ಅವರಿಗೆ ಅಸ್ತಮಾ ಹಾಗೂ ಹೃದಯದ ಸಮಸ್ಯೆಗಳು ಇದ್ದವು ಎಂದು ಥಾಯ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅವರಿಗೆ ಎದೆನೋವು ಕಾಣಿಸಿಕೊಂಡ ಕೂಡಲೇ ವೈದ್ಯರಿಗೆ ತೋರಿಸುವ ಪ್ರಯತ್ನ ನಡೆಯಿತು. ತಪಾಸಣೆ ನಡೆಸಿದ ವೈದ್ಯರು ಅವರು ನಿಧನರಾಗಿದ್ದಾರೆ ಅಂತಾ ಮಾಹಿತಿ ನೀಡಿದರು ಅಂತಾ ಪೊಲೀಸರು ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಥಾಯ್ ಹಾಲಿಡೇ ಐಲ್ಯಾಂಡ್ ಬಂಗಲೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತರು ಹಾಗೂ ಕ್ರಿಕೆಟ್ ಪ್ರೇಮಿಗಳು ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನು ಆಡಿರುವ ವಾರ್ನ್ 708 ಗಳಿಸಿದ್ದಾರೆ. 194 ಏಕದಿನ ಪಂದ್ಯಗಳಲ್ಲಿ 293 ವಿಕೆಟ್ ಗಳಿಸಿದ್ದು, 55 ಟಿ-20 ಪಂದ್ಯಗಳಲ್ಲಿ 57 ವಿಕೆಟ್ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಎಲ್ಲಾ ಮಾದರಿಯಲ್ಲಿ ಒಂದು ಸಾವಿರಕ್ಕೂ ಅಧಿಕ ವಿಕೆಟ್ ಗಳಿಸಿದ ಸಾಧನೆಯನ್ನು ವಾರ್ನ್ ಮಾಡಿದ್ದರು. ಉಳಿದಂತೆ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ವಾರ್ನ್, ತಂಡವನ್ನು ಚಾಂಪಿಯನ್ ಸ್ಥಾನಕ್ಕೇರುವಂತೆ ಮಾಡಿದ್ದರು.