ನವದೆಹಲಿ: ಭಾರತದ ಸ್ವದೇಶಿ ಲಘು ಯುದ್ಧವಿಮಾನ ತೇಜಸ್​, ಮತ್ತೊಂದು ಅತ್ಯಾಧುನಿಕ ಅಸ್ತ್ರವನ್ನ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.

ಡಿಆರ್‌ಡಿಓ(ಡಿಫೆನ್ಸ್​ ರಿಸರ್ಚ್​ ಆ್ಯಂಡ್​ ಡೆವಲಪ್​​ಮೆಂಟ್​ ಆರ್ಗನೈಸೇಷನ್​​) 5ನೇ ಜನರೇಷನ್​​ನ ಪೈಥಾನ್ -5 ಏರ್ ಟು ಏರ್ ಕ್ಷಿಪಣಿಯ ಮೊದಲ ಪ್ರಯೋಗವನ್ನು ನಡೆಸಿ ಯಶಸ್ವಿಯಾಗಿದೆ. ತೇಜಸ್​ ಯುದ್ಧವಿಮಾನ ನಿನ್ನೆ ಪೈಥಾನ್ ಕ್ಷಿಪಣಿಯನ್ನ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯಕ್ಕೆ ಸೇರ್ಪಡೆ ಮಾಡಿಕೊಂಡಿದೆ ಅಂತ ಡಿಆರ್​ಡಿಓ ಇಂದು ಟ್ವೀಟ್​ ಮಾಡಿ ತಿಳಿಸಿದೆ.

ತೇಜಸ್‌ನಲ್ಲಿ ಈಗಾಗಲೇ ಇರುವ ಇಂಟಿಗ್ರೇಟೆಡ್ ಡರ್ಬಿ ಬಿಯಾಂಡ್ ವಿಷುಯಲ್ ರೇಂಜ್ ಏರ್​​ ಟು ಏರ್​ ಕ್ಷಿಪಣಿಯ ವರ್ಧಿತ ಸಾಮರ್ಥ್ಯವನ್ನು ಮೌಲ್ಯೀಕರಿಸುವುದು ಕೂಡ ಈ ಪ್ರಯೋಗದ ಉದ್ದೇಶವಾಗಿತ್ತು. ಅತ್ಯಂತ ಸವಾಲಿನ ಸನ್ನಿವೇಶಗಳಲ್ಲಿ ಕ್ಷಿಪಣಿಯ ಕಾರ್ಯಕ್ಷಮತೆ ಹೇಗಿರುತ್ತದೆ ಅನ್ನೋದನ್ನ ಸಾಬೀತುಪಡಿಸಲು ಗೋವಾದಲ್ಲಿ ಟೆಸ್ಟ್​ ಫೈರಿಂಗ್ ನಡೆಸಲಾಯ್ತು.

ಈ ವೇಳೆ ಡರ್ಬಿ ಕ್ಷಿಪಣಿ ಅತ್ಯಂತ ವೇಗವಾಗಿ ಆಗಸದಲ್ಲಿ  ಟಾರ್ಗೆರ್ಟ್​ಗೆ ಹೊಡೆದಿದೆ. ಹಾಗೇ ಪೈಥಾನ್ ಕ್ಷಿಪಣಿ ಕೂಡ ಶೇಕಡ 100ರಷ್ಟು ಗುರಿ ಮುಟ್ಟಿದ್ದು, ಈ ಮೂಲಕ ತಮ್ಮ ಸಾಮರ್ಥ್ಯವನ್ನ ಸಂಪೂರ್ಣವಾಗಿ ದೃಢೀಕರಿಸಿವೆ. ಪ್ಲಾನ್ ಮಾಡಲಾಗಿದ್ದ ಎಲ್ಲಾ ಉದ್ದೇಶಗಳನ್ನ ಈ ಪ್ರಯೋಗ ಪೂರೈಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

The post ಶೇ.100ರಷ್ಟು ಟಾರ್ಗೆಟ್​ ಹಿಟ್: ತೇಜಸ್​ ಯುದ್ಧವಿಮಾನದ ಬತ್ತಳಿಕೆ ಸೇರಿದ ಪೈಥಾನ್​​​-​5 ಕ್ಷಿಪಣಿ appeared first on News First Kannada.

Source: newsfirstlive.com

Source link