ಬೆಂಗಳೂರು: ಸಮಾಧಾನಕರ ಸುದ್ದಿ ಏನೆಂದರೆ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದೆ. ಇದೇ ಹೊಸ ಆಶಾಭಾವನೆಯನ್ನ ಹೊಂದಿರುವ ಬಿಬಿಎಂಪಿ, ಇದೀಗ ವ್ಯಾಕ್ಸಿನ್​ ಅನ್ನ ಪರಿಣಾಮಕಾರಿಯಾಗಿ ನೀಡುವ ಸಂಬಂಧ ಪ್ರೆಸಿಡಿಂಗ್ ಅಧಿಕಾರಿಯನ್ನ ನೇಮಕ ಮಾಡಿದೆ.

198 ವಾರ್ಡ್​​ಗಳಿಗೆ ಅಧ್ಯಕ್ಷಾಧಿಕಾರಿಗಳನ್ನು (Presiding Officer) ನೇಮಿಸಿ ಆಯುಕ್ತ ಗೌರವ್ ಗುಪ್ತಾ ಆದೇಶ ಹೊರಡಿಸಿದ್ದಾರೆ. ಕೊರೊನಾ ಮುಂಚೂಣಿ ಕಾರ್ಯಕರ್ತರು, ಆದ್ಯತಾ ಗುಂಪುಗಳು ಹಾಗೂ 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಲಸಿಕೆಯನ್ನ ನೀಡಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಲಸಿಕೆಯನ್ನು ಪರಿಣಾಮಕಾರಿಯಾಗಿ ನೀಡುವ ಸಂಬಂಧ ಹಾಗೂ ಫಲಾನುಭವಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಲು 198 ವಾರ್ಡ್‌ಗಳಿಗೆ ಅಧ್ಯಕ್ಷಾಧಿಕಾರಿ ನೇಮಕ ಮಾಡಲಾಗಿದೆ.

The post ಶೇ.100 ರಷ್ಟು ವ್ಯಾಕ್ಸಿನೇಷನ್​ಗೆ ಬಿಬಿಎಂಪಿ ಪ್ಲಾನ್.. ಇಂದು ಗೌರವ್ ಗುಪ್ತಾ ಮಾಡಿದ್ದೇನು ಗೊತ್ತಾ? appeared first on News First Kannada.

Source: newsfirstlive.com

Source link