‘ಬಿಗ್ ಬಾಸ್ ಒಟಿಟಿ’ಯಲ್ಲಿ ಹಲವು ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಅರ್ಜುನ್ ರಮೇಶ್ ಕೂಡ ಗಮನ ಸೆಳೆಯುತ್ತಿದ್ದಾರೆ. ನಟನಾಗಿ, ರಾಜಕಾರಣಿಯಾಗಿ ಅವರು ಹೆಸರು ಮಾಡಿದ್ದಾರೆ.

ಅರ್ಜುನ್ ರಮೇಶ್
ಅರ್ಜುನ್ ರಮೇಶ್ (Arjun Ramesh) ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ಎರಡು ಮದುವೆ ಆಗಿದ್ದಾರೆ. ಮೊದಲ ಪತ್ನಿಗೆ ಎರಡನೇ ಪತ್ನಿ ಪರವಾಗಿ ಅವರು ಬಿಗ್ ಬಾಸ್ (Bigg Boss OTT) ಮನೆಯಲ್ಲೇ ಕ್ಷಮೆ ಕೇಳಿದ್ದಾರೆ. ಈ ಮಧ್ಯೆ ಅವರ ವೈಯಕ್ತಿಕ ಜೀವನದ ಹಲವು ವಿಚಾರಗಳು ಸೋಶಿಯಲ್ ಚರ್ಚೆ ಆಗುತ್ತಿವೆ. ಈಗ ಅವರು ಹೇಳಿಕೊಂಡಿರುವ ಒಂದು ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಕಾಲೇಜ್ಗೆ ತೆರಳುವ ಸಂದರ್ಭದಲ್ಲೇ ಅವರು ಅಪ್ಪನ ಬಳಿ ಆಸ್ತಿಯಲ್ಲಿ ಪಾಲು ಕೇಳಿದ್ದರು! ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ.
‘ಬಿಗ್ ಬಾಸ್ ಒಟಿಟಿ’ಯಲ್ಲಿ ಹಲವು ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಅರ್ಜುನ್ ರಮೇಶ್ ಕೂಡ ಗಮನ ಸೆಳೆಯುತ್ತಿದ್ದಾರೆ. ನಟನಾಗಿ, ರಾಜಕಾರಣಿಯಾಗಿ ಅವರು ಹೆಸರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರ ವೈಯಕ್ತಿಕ ಜೀವನ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಅವರು ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡಲೇ ಇಲ್ಲ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.
‘ನಾನು ಓದೋದ್ರಲ್ಲಿ ತುಂಬಾನೇ ಮುಂದೆ ಇದ್ದೆ. ಆದರೂ ಯಾಕೆ ಓದಿಲ್ಲ ಅನ್ನೋದೆ ಗೊತ್ತಾಗುತ್ತಿಲ್ಲ. ನಿಜ ಹೇಳಬೇಕು ಎಂದರೆ ಓದೋ ಟೈಮ್ನಲ್ಲಿ ಶೋಕಿ ಮಾಡಿ ಹಾಳಾದೆ. ನನ್ನ ಅಮ್ಮನ ಹತ್ತಿರ ಸದಾ ದುಡ್ಡು ತೆಗೆದುಕೊಳ್ಳುತ್ತಿದ್ದೆ. ದುಡ್ಡು ಇಲ್ಲ ಎಂದಾಗ ಅಪ್ಪನ ಹತ್ತಿರ ಹೋಗಿ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದೆ. ನಿಜಕ್ಕೂ ಹಾಂಗದ್ರೆ ಏನು ಅಂತ ಗೊತ್ತಿರಲಿಲ್ಲ. ಆದರೂ, ಆಸ್ತಿಯಲ್ಲೂ ಪಾಲು ಕೇಳುತ್ತಿದ್ದೆ’ ಎಂದಿದ್ದಾರೆ ಅರ್ಜುನ್ ರಮೇಶ್.