ಶೌಚಾಲಯದ ಫ್ಲಶ್​ನಲ್ಲಿ ಎರಡು ಬಟನ್ ಇರುತ್ತೆ ಏಕೆ? ಉದ್ದೇಶವೇನು? ಇಲ್ಲಿದೆ ಮಾಹಿತಿ | Here is why toilet flush has one large and one small button


ನಿಮ್ಮ ಮನೆಯಾಗಲಿ ಅಥವಾ ಕಚೇರಿಯಾಗಲಿ ನಾವು ಪ್ರತಿದಿನ ಶೌಚಾಲಯವನ್ನು ಬಳಸಿಯೇ ಬಳಸುತ್ತೇವೆ. ನಮ್ಮ ದೈನಂದಿನ ಜೀವನದಲ್ಲಿ ಶೌಚಾಲಯ ಕೂಡ ಬಹುಮುಖ್ಯ ಪಾತ್ರವನ್ನು ಹೊಂದಿದೆ

ಶೌಚಾಲಯದ ಫ್ಲಶ್​ನಲ್ಲಿ ಎರಡು ಬಟನ್ ಇರುತ್ತೆ ಏಕೆ? ಉದ್ದೇಶವೇನು? ಇಲ್ಲಿದೆ ಮಾಹಿತಿ

Toilet Flush

Image Credit source: herzindagi.com

ನಿಮ್ಮ ಮನೆಯಾಗಲಿ ಅಥವಾ ಕಚೇರಿಯಾಗಲಿ ನಾವು ಪ್ರತಿದಿನ ಶೌಚಾಲಯವನ್ನು ಬಳಸಿಯೇ ಬಳಸುತ್ತೇವೆ. ನಮ್ಮ ದೈನಂದಿನ ಜೀವನದಲ್ಲಿ ಶೌಚಾಲಯ ಕೂಡ ಬಹುಮುಖ್ಯ ಪಾತ್ರವನ್ನು ಹೊಂದಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಕಮಾಡ್​ಗಳು ಮಾರುಕಟ್ಟೆಗೆ ಬಂದಿದ್ದು, ಇದರಲ್ಲಿ ಆಧುನಿಕ ಫಿನಿಶಿಂಗ್ ಜತೆಗೆ ಹಲವು ಪರಿಕರಗಳಿವೆ.

ಕಮಾಡ್​ನಲ್ಲಿ ಫ್ಲಶ್​ನಲ್ಲಿ ಎರಡು ಬಟನ್​ಗಳು ಇರುವುದನ್ನು ಎಂದಾದರೂ ಹಮನಿಸಿದ್ದೀರಾ, ಯಾಕೆ ಆ ಬಟನೆ ಇದೆ ಎಂದು ನಿಮಗೆ ಗೊತ್ತಿದೆಯೇ?
ಆದರೆ ಈ ಎರಡು ಗುಂಡಿಗಳ ಗಾತ್ರವು ವಿಭಿನ್ನವಾಗಿರುವುದರ ಹಿಂದೆ ವಿಶೇಷ ಕಾರಣವಿದೆ. ಇಂದು ನಾವು ಈ ಲೇಖನದಲ್ಲಿ ಈ ಕಾರಣವನ್ನು ನಿಮಗೆ ತಿಳಿಸುತ್ತೇವೆ.

ಈ ಪರಿಕಲ್ಪನೆ ಹುಟ್ಟಿಕೊಂಡಿದ್ದು ಹೇಗೆ?
ಈ ಡ್ಯುಯಲ್ ಫ್ಲಶ್ ಪರಿಕಲ್ಪನೆಯು ಅಮೆರಿಕಾದ ಕೈಗಾರಿಕೋದ್ಯಮಿ ಡಿಸೈನರ್ ವಿಕ್ಟರ್ ಪಾಪನೆಕ್ ಅವರಿಂದ ಹುಟ್ಟಿಕೊಂಡಿತ್ತು. ಇದನ್ನು ಅವರು 1976 ರಲ್ಲಿ ತಮ್ಮ ಡಿಸೈನ್ ಫಾರ್ ದಿ ರಿಯಲ್ ವರ್ಲ್ಡ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಟಾಯ್ಲೆಟ್ ಫ್ಲಶ್‌ಗಳು ಎರಡು ಗುಂಡಿಗಳನ್ನು ಏಕೆ ಹೊಂದಿವೆ?
ಇವುಗಳಲ್ಲಿ ಒಂದು ಸಣ್ಣ ಗುಂಡಿ ಮತ್ತು ಒಂದು ದೊಡ್ಡ ಗುಂಡಿ. ಈ ಎರಡೂ ಗುಂಡಿಗಳು ಪ್ರತ್ಯೇಕ ನಿರ್ಗಮನ ಕವಾಟಗಳನ್ನು ಹೊಂದಿವೆ ಮತ್ತು ನೀರಿನ ಮಟ್ಟವು ಎರಡಕ್ಕೂ ವಿಭಿನ್ನವಾಗಿದೆ.

ಟಾಯ್ಲೆಟ್ ಫ್ಲಶ್‌ನಲ್ಲಿ ಬಟನ್​ಗಳು ಏಕೆ ಇವೆ?

ಈ ಎರಡು ಗುಂಡಿಗಳ ದೊಡ್ಡ ಗುಂಡಿಯಿಂದ ಸುಮಾರು ಆರರಿಂದ ಒಂಬತ್ತು ಲೀಟರ್ ನೀರು ಬಿಡುಗಡೆಯಾಗುತ್ತದೆ, ಆದರೆ ಚಿಕ್ಕ ಗುಂಡಿಯು ಮೂರೂವರೆಯಿಂದ ನಾಲ್ಕು ಲೀಟರ್ ನೀರನ್ನು ಬಿಡುತ್ತದೆ.

ಫ್ಲಶ್‌ನಲ್ಲಿರುವ ದೊಡ್ಡ ಗುಂಡಿಯನ್ನು ಘನ ತ್ಯಾಜ್ಯವನ್ನು ಫ್ಲಶ್ ಮಾಡಲು ಬಳಸಲಾಗುತ್ತದೆ ಮತ್ತು ಸಣ್ಣ ಗುಂಡಿಯನ್ನು ದ್ರವ ತ್ಯಾಜ್ಯವನ್ನು ಫ್ಲಶ್ ಮಾಡಲು ಬಳಸಲಾಗುತ್ತದೆ. ಈ ವಿಷಯವನ್ನು ನೆನಪಿನಲ್ಲಿಡಿ, ನೀವು ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋದಾಗ, ನಂತರ ಕೇವಲ ಸಣ್ಣ ಗುಂಡಿಯನ್ನು ಮಾತ್ರ ಒತ್ತಬೇಕು.

ಇದರಿಂದ ಸಾಕಷ್ಟು ನೀರು ಉಳಿತಾಯವಾಗುತ್ತದೆ. ನೀವು ಈ ರೀತಿಯಲ್ಲಿ ಸುಮಾರು 20 ಸಾವಿರ ಲೀಟರ್ ನೀರನ್ನು ಉಳಿಸಲು ಸಾಧ್ಯವಾಗುತ್ತದೆ.
ಈ ಟಾಯ್ಲೆಟ್ ಫ್ಲಶ್ ಅನ್ನು ಅಳವಡಿಸಿದ ಮೊದಲ ದೇಶ ಆಸ್ಟ್ರೇಲಿಯಾ.

ಆಸ್ಟ್ರೇಲಿಯಾ ಈ ಪರಿಕಲ್ಪನೆಯ ಟಾಯ್ಲೆಟ್ ಫ್ಲಶ್ ಅನ್ನು 1980 ರಲ್ಲಿ ಬಳಸಲು ಪ್ರಾರಂಭಿಸಿತು. ಆಗ ಈ ದೇಶದಲ್ಲಿ ನೀರಿನ ಉಳಿತಾಯ ಹೆಚ್ಚು ಆದಾಗ, ಅಂದಿನಿಂದ ಈ ವಿಧಾನವನ್ನು ಇಡೀ ಜಗತ್ತು ಅಳವಡಿಸಿಕೊಂಡಿದೆ, ನೀರಿನ ಉಳಿತಾಯವನ್ನು ಹೆಚ್ಚು ಮಾಡಲು ಈ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನ ಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *