ಬಾಗಲಕೋಟೆ:

ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರ ನಡುವೆ ಮುಂದಿನ ಸಿಎಂ ಬಗ್ಗೆ ಪೈಪೋಟಿ ಶುರುವಾಗಿದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಹಿನ್ನೆಲ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಗೋವಿಂದ ಕಾರಜೋಳ.. ಕಾಂಗ್ರೆಸ್​ನಲ್ಲಿ ಎರಡು ಗುಂಪುಗಳಿಲ್ಲ, ಮೂರು ಗುಂಪುಗಳಿವೆ ಅಂತ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್​ನಲ್ಲಿ ಭಾವಿ ಸಿಎಂ ಬಗ್ಗೆ ಫೈಟ್ ವಿಚಾರವಾಗಿ ಮಾತನಾಡಿದ ಅವ್ರು.. ಕಾಂಗ್ರೆಸ್​ನಲ್ಲಿ ಎರಡು ಗುಂಪುಗಳಿಲ್ಲ, ಮೂರು ಗುಂಪುಗಳಿವೆ.. ನಾಲ್ಕನೆಯವರು ಇಣುಕಿ ನೋಡುತ್ತಿದ್ದಾರೆ. ಆ ನಾಲ್ಕನೆಯವರೇ, ಶ್ಯಾಮನೂರು ಶಿವಶಂಕರಪ್ಪ ಅಂತ ಹೇಳಿದ್ದಾರೆ.

ನನಗೆ 91 ವರ್ಷ.. ನೂರು ದಾಟಿಲ್ಲ.. ವಯಸ್ಸಾಗಿದೆ.. ನನಗೂ ಐದು ವರ್ಷ ಅವಕಾಶ ಬೇಕೆನ್ನುತ್ತಿದ್ದಾರೆ. ಕಾಂಗ್ರೆಸ್​ನಲ್ಲಿನ ಕುಸ್ತಿ ಇಂದು ನಿನ್ನೆಯದಲ್ಲ. ಹಿಂದೆಯೂ ಕುಸ್ತಿಯಾಗಿ ಪಾಪ ಪರಮೇಶ್ವರ್​ರನ್ನು ಮೂಲೆಗುಂಪು ಮಾಡಿದ್ರು. ಐದು ವರ್ಷ ಸಿಎಂ ಆಗ್ತೀನಿ ಎಂದು ರಾಜ್ಯದ ಉದ್ದಗಲಕ್ಕೂ ಓಡಾಡಿದ್ರು. ಪರಮೇಶ್ವರ್​ರನ್ನು ಅವರ ಪಾರ್ಟಿಯವರೇ ಸೋಲಿಸಿದ್ರು. ಇದೇನು ಹೊಸದಲ್ಲ ಎಂದು ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

The post ಶ್ಯಾಮನೂರು ಶಿವಶಂಕರಪ್ಪ ಇಣುಕಿ ನೋಡ್ತಿದ್ದಾರೆ.. ಅವರು ನಾಲ್ಕನೇಯವರು- ಕಾರಜೋಳ ಹೀಗಂದಿದ್ದೇಕೆ..? appeared first on News First Kannada.

Source: newsfirstlive.com

Source link