ಶ್ರೀಕರ್​ ಭರತ್​, ಮ್ಯಾಕ್ಸ್​ವೆಲ್ ಆರ್ಭಟಕ್ಕೆ ಮಂಕಾದ ಡೆಲ್ಲಿ: ಆರ್​ಸಿಬಿಗೆ 7 ವಿಕೆಟ್​ಗಳ ಜಯ

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಎದುರು  ರೋಚಕ ಗೆಲವು ಸಾಧಿಸಿದೆ

ರಾಯಲ್ ಚಾಲೆಂಜರ್ಸ್ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್​ ಗೆ ಬ್ಯಾಟಿಂಗ್​ಗೆ ಅವಕಾಶ ನೀಡಿದ್ದು ಕ್ಯಾಪಿಟಲ್ಸ್​ ಗೆ ಪೃಥ್ವಿ ಶಾ 48, ಶಿಖರ್​ ಧವನ್​ 43 ರನ್​ ಪೇರಿಸಿ ಅಬ್ಬರದ ಆರಂಭ ನೀಡಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಪಂತ್​, ಮತ್ತು ಶ್ರೇಯಸ್​ ಅಯ್ಯರ ಬಂದಷ್ಟೇ ವೇಗವಾಗಿ ಪೇವಿಲಿಯನ್​ ಸೇರಿದರು. ಹೆಟ್ಮರ್​ ಸಮಯೋಚಿತ ಆಟ ಆಡಿ 22 ಎಸೆತಗಳಲ್ಲಿ 29 ರನ್​ ಗಳಿಸಿ ತಂಡದ ಮೊತ್ತವನ್ನ 164 ಕ್ಕೆ ಸೇರಿಸಿದರು. ಇನ್ನು ಆರ್​ಸಿಬಿ ಪರ ಸಿರಾಜ್​ 2, ಚಹಲ್​, ಕ್ರಿಶ್ಚಿಯಾನ್​, ಹರ್ಷಲ್​ ಪಟೇಲ್​ ತಲಾ 1 ವಿಕೆಟ್​ ಕಬಳಿಸಿದರು.

ಇತ್ತ ಕ್ಯಾಪಿಟಲ್ಸ್​ ನೀಡಿದ ಸವಾಲನ್ನ ಬೆನ್ನತ್ತಿದ ರಾಯಲ್ಸ್ ಗೆ​ ಌನರಿಚ್​ ನೊರ್ಟ್ಜ ಆರಂಭಿಕ ಆಘಾತ ನೀಡಿದರು. ನೊರ್ಟ್ಜ ಬೌಲಿಂಗ್​ಗೆ ಮಂಕಾದ ಕೊಹ್ಲಿ 04 ಮತ್ತು ಪಡಿಕ್ಕಲ್ ಖಾತೆ ತೆರೆಯದೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಬಳಿಕ ಆಗಮಿಸಿದ ವಿಲಿಯರ್ಸ್​ 26 ಎಸೆತಗಳಲ್ಲಿ 26 ರನ್​ ಗಳಿಸಿ ಅಕ್ಷರ್​ ಪಟೇಲ್​ ಎಸೆತದಲ್ಲಿ ಅಯ್ಯರಗೆ ಕ್ಯಾಚಿತ್ತು ನಡೆದರು. ಶ್ರೀಕರ್​ ಭರತ್ 78  ಮತ್ತು ಗ್ಲೇನ್​ ಮ್ಯಾಕ್ಸ್​ವೆಲ್​ 52 ಮಿಂಚಿನ ಆಟ ಆಡಿ ಗೆಲವು ತಂದಿತ್ತರು

 

News First Live Kannada

Leave a comment

Your email address will not be published. Required fields are marked *