ಬೆಂಗಳೂರು: ಯೂಥ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಹ್ಯಾಕಿಂಗ್ ಮಾಡಲಾಗಿದೆ ಎಂದು ಕೆಲ ಕಾಂಗ್ರೆಸ್ ಪಕ್ಷದ ಆಪ್ತ ನಾಯಕರೇ ನನಗೆ ಹೇಳಿದ್ದಾರೆ. ಆದರೆ ಶ್ರೀಕಿಯೇ ಹ್ಯಾಕ್ ಮಾಡಿದ್ನೋ ಅಥವಾ ಬೇರೆ ಯಾರೋ ಹ್ಯಾಕ್ ಮಾಡಿದ್ರೋ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿದ್ದ ಶ್ರೀಕಿಗೆ ಕಂಪ್ಯೂಟರ್ ಕೊಟ್ಟಿದ್ದು ಯಾರು..? ಖರ್ಗೆ ಪ್ರಶ್ನೆ
ಯೂಥ್ ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಚುನಾವಣೆಯ ವೋಟಿಂಗ್ ವೇಳೆ ಹ್ಯಾಕಿಂಗ್ ಆಗಿರೋ ಬಗ್ಗೆ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದರು. ಆದರೆ ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ಯೂಥ್ ಕಾಂಗ್ರೆಸ್ ಚುನಾವಣೆಯ ವೇಳೆ ಶ್ರೀಕಿ ಪೊಲೀಸ್ ಹಾಗೂ ನ್ಯಾಯಾಂಗ ಕಸ್ಟಡಿಯಲ್ಲಿ ಇದ್ದ. ಆದರೆ ಆಗ ಸರ್ಕಾರವೇ ಶ್ರೀಕಿಗೆ ಕಂಪ್ಯೂಟರ್ ನೀಡಿತ್ತಾ ಎಂದು ಪ್ರಶ್ನೆ ಮಾಡಿದ್ದರು.
ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ಗೆ ಸ್ಪಷ್ಟನೆ ನೀಡಿರೋ ಗೃಹ ಸಚಿವರು, ಟ್ವಿಟರ್‌ನಲ್ಲಿ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿರುವ ವಿಚಾರ ಗೊತ್ತಾಯಿತು. ನಾವು ಪ್ರಿಯಾಂಕ ಖರ್ಗೆ ಅಥವಾ ಕಾಂಗ್ರೆಸ್‌ನವರ ವಿರುದ್ಧ ಮಾತನ್ನಾಡುತ್ತಿಲ್ಲ. ಅವರ ಪಕ್ಷದವರೇ ನೇರವಾಗಿ ನಮಗೆ ಕರೆ ಮಾಡಿದ್ದಾರೆ. ಐವೈಸಿ ಚುನಾವಣೆಯಲ್ಲಿ ಆಕ್ರಮ ಆಗಿರಬಹುದು ಎಂದಿದ್ದಾರೆ. ಈ ವಿಚಾರಕ್ಕಾಗಿ ನಾನು ಇಂದು ಮಾಧ್ಯಮದಲ್ಲಿ ವಿಚಾರ ಪ್ರಸ್ತಾಪಿಸಿದ್ದೇನೆ ಅಷ್ಟೇ.
ಇದನ್ನೂ ಓದಿ: ‘ಹ್ಯಾಕಿಂಗ್ ಆಗಿರೋದು ಪ್ರೂವ್ ಆದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ’ ನಲಪಾಡ್ ನೇರ ಸವಾಲು
ಆದರೆ ಇದನ್ನು ಪ್ರಿಯಾಂಕ ಖರ್ಗೆ ನನ್ನನ್ನು ಪ್ರಶ್ನಿಸಿದ್ದಾರೆ. ಚುನಾವಣೆ ನಡೆದಾಗ ಶ್ರೀಕಿ ಜೈಲಿನಲ್ಲಿದ್ರೋ ಅಥವಾ ಹೊರಗಿದ್ರೋ ನನಗೆ ಗೊತ್ತಿಲ್ಲ. ಶ್ರೀಕಿಯೇ ಹ್ಯಾಕ್ ಮಾಡಿದ್ನೋ ಅಥವಾ ಬೇರೆ ಯಾರೋ ಹ್ಯಾಕ್ ಮಾಡಿದ್ರೋ ನನಗೆ ಗೊತ್ತಿಲ್ಲ. ನನಗೆ ಕೆಲವೊಬ್ಬ ನಾಯಕರು ಕರೆ ಮಾಡಿ ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ಆಕ್ರಮ ನಡೆದಿರಬಹುದು ಎಂದಿದ್ದಾರೆ. ಆ ಚುನಾವಣೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅದು ಅವರ ಪಕ್ಷದ ವೈಯಕ್ತಿಕ ವಿಚಾರ. ಆಕ್ರಮ ನಡೆದಿರುವ ಬಗ್ಗೆ ಶಂಕೆ ಎಂದರು. ದೂರು ಕೊಟ್ಟರೇ ಬಗೆಹರಿಸುತ್ತೇನೆ ಎಂದಿದ್ದೇನೆ. ದೂರು ಕೊಟ್ಟರೇ ನೋಡೋಣ. ಇಲ್ಲವಾದ್ರೆ, ನಮಗಲ್ಲಾದ ವಿಚಾರ ಎಂದುಕೊಳ್ಳೋಣ. ಇನ್ನು ಸರ್ಕಾರ ಶ್ರೀಕಿ ವಿಚಾರದಲ್ಲಿ ತನಿಖೆಯನ್ನು ನಡೆಸುತ್ತಿದೆ. ಅವನು ಮಾಡಿರುವ ಅಕ್ರಮ ಬಯಲಿಗೆ ಎಳೆಯಲು ನಾವು ಬದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.