ಶ್ರೀಕಿ ಬಳಸಿ ಯೂಥ್​ ಕಾಂಗ್ರೆಸ್​ ಚುನಾವಣೆ ಹ್ಯಾಕ್; ನಲಪಾಡ್​​ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ


ಬೆಂಗಳೂರು: ಯೂಥ್​ ಕಾಂಗ್ರೆಸ್​ ಚುನಾವಣೆಯಲ್ಲಿ ಬಿಟ್​​ ಕಾಯಿನ್​ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿಯನ್ನು ಬಳಿಸಿಕೊಂಡು ಹ್ಯಾಕ್​ ಮಾಡಲಾಗಿದೆ. ಯೂಥ್​ ಕಾಂಗ್ರೆಸ್​ ಅಧ್ಯಕ್ಷರ ಆಯ್ಕೆಗೆ ಆನ್​ಲೈನ್​​ನಲ್ಲಿ ನಡೆದ ಚುನಾವಣೆ ಸಂಪೂರ್ಣ ಅಕ್ರಮವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪ ಮಾಡಿದ್ದಾರೆ.

ನ್ಯೂಸ್​ಫಸ್ಟ್​ ಸಂದರ್ಶನದಲ್ಲಿ ಈ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಆರಗ ಜ್ಞಾನೇಂದ್ರ ಅವರು, ಇತ್ತೀಚೆಗೆ ಕೆಲವು ಕಾಂಗ್ರೆಸ್​ ಪಕ್ಷದ ಮಿತ್ರರು ನನಗೆ ಫೋನ್​ ಮಾಡುತ್ತಿದ್ದಾರೆ. ಅವರ ಯೂಥ್​ ಕಾಂಗ್ರೆಸ್​​​ ಚುನಾವಣೆಯ ಆನ್​ಲೈನ್​​ ವೋಟಿಂಗ್​​ನಲ್ಲಿ ಹ್ಯಾಕ್​ ಮಾಡಿಸಿದ್ದಾರೆ ಎಂಬ ಸಂದೇಹ ಇದೆ. ಅದನ್ನು ವಿಚಾರಣೆ ಮಾಡಿ ಅಂತಾ ಕೇಳುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *