ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ವಿಷ್ಣು ಭಟ್ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಗ ಭೀಮಾ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣುನನ್ನು ಕೂಡ ಅರೆಸ್ಟ್ ಮಾಡಲಾಗಿದೆ. ಐಪಿಸಿ ಸೆಕ್ಷನ್ 504, 348, 323ರಡಿ ಪ್ರಕರಣ ದಾಖಲಾಗಿದೆ.
ಸದ್ಯ ತಡರಾತ್ರಿವರೆಗೆ ಜೀವನ್ ಭೀಮಾನಗರ ಪೊಲೀಸರು ಶ್ರೀಕಿ, ವಿಷ್ಣು ಭಟ್ನನ್ನು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವಿಷ್ಣು ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರೋದು ಸಾಬೀತಾಗಿದೆ. ವಿಷ್ಣು ಜತೆಗಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಲ್ಲೆ ಮಾಡಿಲ್ಲ. ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿನ ರಾಯಲ್ ಆರ್ಚಿಡ್ 5 ಸ್ಟಾರ್ ಹೋಟೆಲ್‌ನಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿತ್ತು. ಹೋಟೆಲ್‌ನ ರೂಮ್‌ನಲ್ಲಿ ಸಿಗರೇಟ್, ಮೊಬೈಲ್ ಸಿಕ್ಕಿದೆ. ಲ್ಯಾಪ್‌ಟಾಪ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವಿಷ್ಣು ಭಟ್, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮೆಡಿಕಲ್ ಟೆಸ್ಟ್‌ನಲ್ಲಿ ಮಾದಕ ವಸ್ತು ಸೇವನೆ ದೃಢವಾದರೆ ಮಾದಕ ವಸ್ತುಗಳು ನಿಯಂತ್ರಣ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗುತ್ತೆ. ಎನ್‌ಡಿಪಿಎಸ್ ಆ್ಯಕ್ಟ್‌ನಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
ಹೋಟೆಲ್‌ನ ಕೊಠಡಿಯಲ್ಲಿ ತಪಾಸಣೆ
ಶನಿವಾರ ಮಧ್ಯಾಹ್ನವೂ ಹೋಟೆಲ್ ಸಿಬ್ಬಂದಿ ಜೊತೆ ವಿಷ್ಣುಭಟ್, ಶ್ರೀಕಿ ಗಲಾಟೆ ಮಾಡಿಕೊಂಡಿದ್ರು. ಸೆಕ್ಯೂರಿಟಿ ಆಫೀಸರ್ ಜತೆಯೂ ಗಲಾಟೆ ಮಾಡಿದ್ದರು ಎಂದು ತಿಳಿದುಬಂದಿದೆ. ತಕ್ಷಣ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಜೀವನ್ ಭೀಮಾನಗರ ಠಾಣೆಯಲ್ಲಿ ಆರೋಪಿ ಶ್ರೀಕಿ ವಿಚಾರಣೆ ನಡೆಸಲಾಗುತ್ತಿದೆ. ಶ್ರೀಕೃಷ್ಣ ತಂಗಿದ್ದ ಹೋಟೆಲ್‌ನ ಕೊಠಡಿಯಲ್ಲಿ ತಪಾಸಣೆ ನಡೆಸಲಾಗಿದೆ. ಎಸಿಪಿ ಕುಮಾರ್, ಇನ್ಸ್‌ಪೆಕ್ಟರ್ ರಾಜಣ್ಣ ತಪಾಸಣೆ ಮಾಡಿದ್ದಾರೆ. ಕುಡಿದ ಅಮಲಿನಲ್ಲಿದ್ದ ವಿಷ್ಣುವನ್ನ ಹೋಟೆಲ್ ಒಳಕ್ಕೆ ಬಿಡಲು ಸೆಕ್ಯುರಿಟಿ ಒಪ್ಪಿಲ್ಲ. ಈ ಕಾರಣಕ್ಕೆ ಗಲಾಟೆ ಆಗಿದೆ ಎಂದು ತಿಳಿದುಬಂದಿದೆ. ಗಲಾಟೆ ಅತಿರೇಕಕ್ಕೆ ಹೋಗ್ತಿದ್ದಂತೆ ಹೋಟೆಲ್ ಸಿಬ್ಬಂದಿಯಿಂದ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.
ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಆಗಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸಿಸಿಬಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದ. ಮತ್ತಷ್ಟು ವೆಬ್ಸೈಟ್ಗಳ ಹ್ಯಾಕ್ಗೆ ಪ್ಲ್ಯಾನ್ ಮಾಡಿರುವುದಾಗಿ ಕೃತ್ಯದ ವಿವರಣೆ ನೀಡಿದ್ದ. ಸಿಸಿಬಿ ಪೊಲೀಸರು ಶ್ರೀಕಿಯನ್ನು ಡ್ರಗ್ಸ್ಕೇಸ್ನಲ್ಲಿ ಬಂಧಿಸಿದ್ದರು. ತನಿಖೆ ವೇಳೆ ಆತ ಹಲವು ವೆಬ್ ಸೈಟ್ ಹ್ಯಾಕಿಂಗ್ ಮಾಡುತ್ತಿದ್ದ ವಿಚಾರ ಬಯಲಾಗಿತ್ತು.
ಇದನ್ನೂ ಓದಿ: Bitcoin Case: ಬಿಟ್ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬೆಂಗಳೂರಿನ 5 ಸ್ಟಾರ್ ಹೊಟೇಲಿನಲ್ಲಿ ಬಂಧನ