ಶ್ರೀಕಿ ವೈದ್ಯಕೀಯ ವರದಿ ನೆಗೆಟಿವ್; ಜನವರಿ 12ರ ಪರೀಕ್ಷೆಯಲ್ಲಿ ಡ್ರಗ್ ಸೇವಿಸಿಲ್ಲ ಎಂಬ ಬಗ್ಗೆ ಉಲ್ಲೇಖ | Hacker Shreekrishna Shreeki Medical Test Report Drugs Case Bitcoin Crime News


ಶ್ರೀಕಿ ವೈದ್ಯಕೀಯ ವರದಿ ನೆಗೆಟಿವ್; ಜನವರಿ 12ರ ಪರೀಕ್ಷೆಯಲ್ಲಿ ಡ್ರಗ್ ಸೇವಿಸಿಲ್ಲ ಎಂಬ ಬಗ್ಗೆ ಉಲ್ಲೇಖ

ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ

ಬೆಂಗಳೂರು: ಪ್ರಸ್ತುತ ಸುದ್ದಿಯಲ್ಲಿ ಇರುವ ಬಿಟ್ ಕಾಯಿನ್ ಹಾಗೂ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವೈದ್ಯಕೀಯ ವರದಿ ನೆಗೆಟಿವ್​​ ಎಂದು​​ ಕಂಡುಬಂದಿದೆ. ಸಿಸಿಬಿ ಕೋರ್ಟ್ ಆದೇಶದಂತೆ ಮೆಡಿಕಲ್ ಟೆಸ್ಟ್​​ ಮಾಡಿಸಿತ್ತು. ತನಿಖೆ ವೇಳೆ ಕೋರ್ಟ್​ಗೆ ಹಾಜರು ಪಡಿಸಿದ್ದ ಸಿಸಿಬಿ ತಂಡ, ಜನವರಿ 11 ರಂದು 1ನೇ ಎಸಿಎಂಎಂ ಕೋರ್ಟ್​ಗೆ ಹಾಜರು ಪಡಿಸಿತ್ತು. ಈ ವೇಳೆ ಅಲ್ಪ್ರಜೋಲಮ್ ಮಾತ್ರೆ ನೀಡ್ತಿರುವುದಾಗಿ ಉಲ್ಲೇಖ ಮಾಡಲಾಗಿತ್ತು. ಹೀಗಾಗಿ ಶ್ರೀಕಿಯನ್ನು ಪೊಲೀಸರು ಪರೀಕ್ಷೆಗೆ ಒಳಪಡಿಸಿದ್ದರು.

ಆ ವೇಳೆ ವಿಕ್ಟೋರಿಯಾ ಕೊವಿಡ್ ಸೆಂಟರ್ ಆಗಿದ್ದ ಹಿನ್ನೆಲೆ ಮಡಿವಾಳದ ಎಫ್ಎಸ್​ಎಲ್​​ನಲ್ಲಿ ಟೆಸ್ಟಿಂಗ್ ನಡೆಸಲಾಗಿತ್ತು. ಯೂರಿನ್, ಬ್ಲಡ್ ಸ್ಯಾಂಪಲ್​ಗಳ ಮುಖಾಂತರ ಟೆಸ್ಟಿಂಗ್ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಶ್ರೀಕೃಷ್ಣನ ವೈದ್ಯಕೀಯ ವರದಿ ನೆಗೆಟಿವ್​ ಎಂದು ಬಂದಿದೆ. ಶ್ರೀಕಿ ಡ್ರಗ್ ಸೇವಿಸಿಲ್ಲ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ನವೆಂಬರ್ 7ರ ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವಿಸಿರುವುದು ದೃಢ
ಬೆಂಗಳೂರಿನ ಹೋಟೆಲ್ ಒಂದರಲ್ಲಿ ವಿಷ್ಣು ಭಟ್ ಹಾಗೂ ಡ್ರಗ್ ಮತ್ತು ಬಿಟ್​ಕಾಯಿನ್ ಪ್ರಕರಣದ ಆರೋಪಿಯಾಗಿದ್ದ ಶ್ರೀಕೃಷ್ಣ ಎಂಬಾತನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವಿಸಿರುವುದು ನವೆಂಬರ್ 7 ರ ಪರೀಕ್ಷೆಯಲ್ಲಿ ದೃಢವಾಗಿತ್ತು. ಮಾದಕ ವಸ್ತು ಸೇವನೆ ದೃಢ ಹಿನ್ನೆಲೆಯಲ್ಲಿ ವಿಷ್ಣು ಭಟ್ ಮನೆ ಪರಿಶೀಲನೆ ನಡೆಸಲಾಗಿತ್ತು. ಇಂದಿರಾನಗರದ ವಿಷ್ಣು ಭಟ್​ ಮನೆಯಲ್ಲಿ ಪೊಲೀಸರ ಶೋಧಕಾರ್ಯ ನಡೆದಿತ್ತು. ಭೀಮಾ ಜ್ಯುವೆಲರ್ಸ್​ ಮಾಲೀಕನ ಪುತ್ರನಾಗಿರುವ ವಿಷ್ಣು ಭಟ್ ಮನೆಯಲ್ಲಿ ಪರಿಶೀಲನೆ ಮಾಡಲಾಗಿತ್ತು.

ಈ ವೇಳೆ, ವಿಷ್ಣು ಭಟ್ ಮನೆಯಲ್ಲಿ ಗಾಂಜಾ ಬೆರೆಸಿದ ಸಿಗರೇಟ್​ ಪತ್ತೆ ಆಗಿತ್ತು. ಮನೆಯಲ್ಲಿ ಗಾಂಜಾ ಬೆರೆಸಿದ ಸಿಗರೇಟ್​ ಸೇವಿಸಿರುವುದು ಪತ್ತೆಯಾಗಿತ್ತು. ವಿಷ್ಣು ಭಟ್ ಮನೆಯಲ್ಲಿ ಪೌಡರ್​ ಮಾದರಿಯ ಡ್ರಗ್ಸ್​ ಪತ್ತೆಯಾಗಿತ್ತು. ಹ್ಯಾಕರ್ ಶ್ರೀಕೃಷ್ಣ, ವಿಷ್ಣು ಭಟ್​ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಎನ್​ಡಿಪಿಎಸ್​ ಕಾಯ್ದೆಯಡಿ ಪೊಲೀಸರು ಕೇಸ್​ ದಾಖಲಿಸಿದ್ದರು. ಶ್ರೀಕೃಷ್ಣ, ವಿಷ್ಣು ಭಟ್ ವಿಚಾರಣೆ ಮುಂದುವರಿಸಿದ್ದರು.

ಹೋಟೆಲ್​ನಲ್ಲಿ ವಿಷ್ಣು ಭಟ್, ಶ್ರೀಕೃಷ್ಣನ ಪುಂಡಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಷ್ಣು ಭಟ್, ಶ್ರೀಕೃಷ್ಣ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಹೇಳಿಕೆ ನೀಡಿದ್ದರು. ವೈದ್ಯಕೀಯ ತಪಾಸಣೆ ವೇಳೆ ಮಾದಕ ವಸ್ತು ಸೇವನೆ ದೃಢವಾಗಿದೆ. ಇದರ ಬೆನ್ನಲ್ಲೇ ವಿಷ್ಣು ಭಟ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದೆವು. ವಿಷ್ಣು ಭಟ್​ ಮನೆಯಲ್ಲಿ ಗಾಂಜಾ, ಮಾದಕ ವಸ್ತು ಸಿಕ್ಕಿದೆ. ಪತ್ತೆಯಾದ ವಸ್ತುವನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಿಟ್​​ಕಾಯಿನ್​ ಕಿಂಗ್​ಪಿನ್​ ಜಾಗತಿಕ ಹ್ಯಾಕರ್​ ಶ್ರೀಕಿ ಪೊಲೀಸರಿಗೆ ಲಾಕ್​ ಆಗ್ತಿದ್ದಂತೆ ತನ್ನ ಬಗ್ಗೆ ಹೇಳಿದ್ದೇನು? ಇನ್​ಸೈಡ್​​ ಡಿಟೆಲ್ಸ್​​

ಇದನ್ನೂ ಓದಿ: ಶ್ರೀಕಿ, ವಿಷ್ಣು ಭಟ್ ಪುಂಡಾಟ ಪ್ರಕರಣ; ಭೀಮಾ‌ ಜ್ಯುವೆಲರ್ಸ್‌ ಮಾಲೀಕನ ಮಗ ವಿಷ್ಣು ಬಂಧನ

TV9 Kannada


Leave a Reply

Your email address will not be published. Required fields are marked *