ಉಡುಪಿ: ಜಿಲ್ಲೆಯಲ್ಲಿ ಇಂದು ವಾರ್ಷಿಕವಾಗಿ ನಡೆಯುವ ವಿಶಿಷ್ಟ ಸ್ವಚ್ಛತಾ ಕಾರ್ಯಕ್ರಮ ಶ್ರೀಕೃಷ್ಣಮಠದಲ್ಲಿ ನಡೆದಿದೆ.

ಉದ್ವಾರ್ಚನೆ ಎಂಬುದು ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮ ಇದು, ಯತಿಗಳಿಂದಲೇ ಈ ಕಾರ್ಯಕ್ರಮ ನಡೆದಿದೆ. ಪರ್ಯಾಯ ಶ್ರೀಪಾದರೂ ಸೇರಿದಂತೆ ಅಷ್ಟಮಠಗಳ ಯತಿಗಳೂ ಒಟ್ಟಾಗಿ ನಡೆಸುವ ಕಾರ್ಯಕ್ರಮಕ್ಕೆ ಉದ್ವಾರ್ಚನೆ ಎಂದು ಹೆಸರು. ಪ್ರತೀ ವರ್ಷ ಆಷಾಢ ಏಕಾದಶಿ (ಪ್ರಥಮೈಕಾದಶಿ) ಸಂದರ್ಭ ಈ ವೈಶಿಷ್ಟ್ಯಪೂರ್ಣ ಸ್ವಚ್ಛತಾ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಪರ್ಯಾಯ ಶ್ರೀ ಈಶಪ್ರಿಯ ತೀರ್ಥಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದಯ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

The post ಶ್ರೀಕೃಷ್ಣಮಠದಲ್ಲಿ ಇಂದು ಉದ್ವಾರ್ಚನಾ ಕಾರ್ಯಕ್ರಮ, ಅಷ್ಟಮಠಗಳ ಯತಿಗಳೂ ಭಾಗಿ appeared first on News First Kannada.

Source: newsfirstlive.com

Source link