ಶ್ರೀನಗರ ಶಾಲೆ ಮೇಲೆ ಉಗ್ರರ ದಾಳಿ.. ಟೀಚರ್​​ ಮತ್ತೆ ಪ್ರಿನ್ಸಿಪಾಲ್ ಹತ್ಯೆ, ಮತ್ತಿಬ್ಬರಿಗೆ ಗಾಯ

ಶ್ರೀನಗರ: ಕಾಶ್ಮೀರ ಕಾಣಿವೆಯಲ್ಲಿ ಅಲ್ಪ ಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸುತ್ತಿರುವ ದಾಳಿ ಮುಂದುವರೆದಿದ್ದು, ಇಂದು ಶಾಲಾ ಪ್ರಾಂಶುಪಾಲ ಹಾಗೂ ಶಿಕ್ಷಕ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ಶ್ರೀನಗರದ ಸಂಗಮ್​​​ ಸ್ಕೂಲ್​​ ಪ್ರಾಂಶುಪಾಲೆ ಸತೀಂದರ್ ಕೌರ್​, ಶಿಕ್ಷಕ ದೀಪಕ್​ ಚಾಂದ್​ ಮೃತ ದುರ್ದೈವಿಗಳಾಗಿದ್ದಾರೆ. ಉಗ್ರರ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸಾಗಿರುವ ವೇಳೆಗೆ ಸಾವನ್ನಪ್ಪಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಘಟನೆಯಲ್ಲಿ ಮತ್ತಿಬ್ಬರು ನಾಗರೀಕರು ಗಾಯಗೊಂಡಿದ್ದಾರೆ.

ಇನ್ನು ಇದೇ ರೀತಿ ಜಮ್ಮು ಕಾಶ್ಮೀರದಲ್ಲಿ ಅಲ್ಪ ಸಂಖ್ಯಾತರ ಗುರಿಯಾಗಿಸಿ ಮಂಗಳವಾರ ನಡೆದಿದ್ದ ದಾಳಿಯಲ್ಲಿ ಮೂವರು ನಾಗರಿಕರು ಉಗ್ರರ ಗುಂಡಿಗೆ ಬಲಿಯಾಗಿದ್ದರು.

News First Live Kannada

Leave a comment

Your email address will not be published. Required fields are marked *