ಅಭಿಮಾನಿಗಳಿದ್ದರೇ ಸ್ಟಾರು ಸ್ಟಾರ್ವಾರು ಜೊತೆಗೆ ಎಲ್ಲರ ದರ್ಬಾರು ಕಾರುಬಾರು. ಜನರ ತೀರ್ಮಾನವೇ ಜಡ್ಜ್ಮೆಂಟ್ ಇದ್ದಂಗೆ. ಮದಗಜ ಸಿನಿಮಾವನ್ನ ನೋಡಿದ ಪ್ರೇಕ್ಷಕ ಮಹಾ ಪ್ರಭು ಏನಂದ..? ಪ್ರೇಕ್ಷಕರ ಸಂಭ್ರಮವನ್ನ ಕಣ್ಣಾರೆ ಕಂಡ ಮದಗಜ ಸಿನಿಮಾ ತಂಡ ಹೇಳಿದ್ದೇನು?
ಭರಾಟೆ ನಂತ್ರ ಹೆಚ್ಚೂ ಕಡಿಮೆ ಎರಡು ವರ್ಷಗಳೇ ಕಳೆಯಿತು ಶ್ರೀಮುರಳಿಯ ಬೇರಾವ ಸಿನಿಮಾ ರಿಲೀಸ್ ಆಗಲಿಲ್ಲ. ಆದ್ರೆ ಕಾಯಿಸೋದ್ರಲ್ಲೂ ಮಜಾ ಇದೆ ಅನ್ನೋದನ್ನ ಪ್ರೂವ್ ಮಾಡಿದ್ದಾರೆ ರೋರಿಂಗ್ ಸ್ಟಾರ್. ಯೆಸ್ ಇಂದು ಸುಮಾರು 850ಕ್ಕೂ ಅಧಿಕ ಸ್ಕ್ರೀನ್ಸ್ಗಳಲ್ಲಿ ಮುರಳಿಯ ಮದಗಜ ಅದ್ಧೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಮದಗಜ ಮೇನ್ ಥಿಯೇಟರ್ನಲ್ಲಿ ಅನುಪಮ ಚಿತ್ರಮಂದಿರದಲ್ಲಿ ರೋರಿಂಗ್ ಉತ್ಸವವೇ ನಡೆಯಿತು. ಅಭಿಮಾನಿಗಳ ಜೊತೆ ಚಿತ್ರತಂಡವು ಸಂಭ್ರಮದಿಂದ ಕಾಲ ಕಳೆಯಿತು.. ಶಿಳ್ಳೆ- ಚಪ್ಪಾಳೆಯ ಜೊತೆಗೆ ಪ್ರೇಕ್ಷಕ ಮದಗಜ ಚಿತ್ರವನ್ನ ಮನಸಾರೆ ಕೊಂಡಾಡಿದ.
ಮದಗಜ ಸಿನಿಮಾವನ್ನ ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮದಗಜ ಚಿತ್ರಕ್ಕೆ ಓಪನಿಂಗ್ ಸಿಕ್ಕಿರೋದಕ್ಕೆ ಸಂತೋಷವನ್ನ ವ್ಯಕ್ತಪಡಿಸಿದ್ರು.ಮದಗಜ ಚಿತ್ರವನ್ನ ಮಾಡಿದವರು ಹಾಗೂ ಸಿನಿಮಾ ನೋಡಿದವರು ಇಬ್ಬರು ಮೊದಲ ದಿನ ಸಂತೋಷ ಪಟ್ಟಿದ್ದಾರೆ.. ಒಂದು ಸಿನಿಮಾವನ್ನ ಸಿನಿಮಾ ಮಂದಿ ಮಾಡಿದ್ದಕ್ಕೂ ಪ್ರೇಕ್ಷಕ ನೋಡಿದಕ್ಕೂ ಸಾರ್ಥಕವಾದಂತೆ. ಮದಗಜ ಚಿತ್ರ ಮುಂದಿನ ದಿನಗಳಲ್ಲಿ ಯಾವ ರೀತಿ ಸದ್ದು ಮಾಡುತ್ತಾ ಪ್ರೇಕ್ಷಕ ಮನಸು ಗೆಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕು.