ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ, ಈ ವಿವಾದಕ್ಕೆ ಅರ್ಥವಿಲ್ಲ, ಇಲ್ಲಿ ದೇವಾಲಯವಿತ್ತು ಅನ್ನೊದಕ್ಕೆ ದಾಖಲೆಗಳಿದ್ರೆ ನೀಡಲಿ: ಜಾಮಿಯ ಮಸೀದಿಯ ಮೌಲ್ವಿ ಸೈಯದ್ ಗುಲ್ಜಾರ್ ಪಾಷ | From our Ancestors we are making namaz in Jamiya Mosque: Maulvi Syed Gulzar Pasha


ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ, ಈ ವಿವಾದಕ್ಕೆ ಅರ್ಥವಿಲ್ಲ, ಇಲ್ಲಿ ದೇವಾಲಯವಿತ್ತು ಅನ್ನೊದಕ್ಕೆ ದಾಖಲೆಗಳಿದ್ರೆ ನೀಡಲಿ: ಜಾಮಿಯ ಮಸೀದಿಯ ಮೌಲ್ವಿ ಸೈಯದ್ ಗುಲ್ಜಾರ್ ಪಾಷ

ಜಾಮಿಯಾ ಮಸೀದಿ ಶ್ರೀಲಂಗ ಪಟ್ಟಣ

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರವಾಗಿ, ನಾನು ನನ್ನ ಪೂರ್ವಜರು ಇಲ್ಲಿ ನಮಾಜ್ ಮಾಡುತ್ತಲೇ ಬಂದಿದ್ದೇವೆ.

ಮಂಡ್ಯ: ಶ್ರೀರಂಗಪಟ್ಟಣದ (Shriranga Pattana) ಜಾಮಿಯಾ ಮಸೀದಿ (Jamiya Mosque) ವಿಚಾರವಾಗಿ, ನಾನು ನನ್ನ ಪೂರ್ವಜರು ಇಲ್ಲಿ ನಮಾಜ್ ಮಾಡುತ್ತಲೇ ಬಂದಿದ್ದೇವೆ. ಈ ವಿವಾದಕ್ಕೆ ಅರ್ಥವಿಲ್ಲ ನಾವೆಲ್ಲ ಭಾರತೀಯರು ಎಲ್ಲರು ಒಟ್ಟಾಗಿ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು. ಇಲ್ಲಿ ದೇವಾಲಯವಿತ್ತು ಅನ್ನೊದಕ್ಕೆ ದಾಖಲೆಗಳಿದ್ರೆ ನೀಡಲಿ. ಆದಾರ ರಹಿತ ಮಾತುಗಳನ್ನ ಚರ್ಚೆಗೆ ತರುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಎಲ್ಲರು ಒಟ್ಟಾಗಿದ್ದೇವೆ. ನಾನು ಸಂಸ್ಕೃತ ಅಧ್ಯಯನ ಮಾಡಿದ್ದೇನೆ. ಈಗಲು ಅನೇಕ ಹಿಂದು ಸ್ನೇಹಿತರು ನನ್ನ ಜೊತೆ ಚೆನ್ನಾಗಿಯೇ ಇದ್ದಾರೆ. ಈ ವಿವಾವದದ ಕುರಿತು ನಾನು ಹೆಚ್ಚಿನ ಚರ್ಚೆ ನಡೆಸೊಲ್ಲ ಎಂದು ಜಾಮಿಯ ಮಸೀದಿಯ ಮೌಲ್ವಿ ಸೈಯದ್ ಗುಲ್ಜಾರ್ ಪಾಷ ಟಿವಿ9ಗೆ ಮೌಖಿಕ ಹೇಳಿಕೆ ನೀಡಿದ್ದಾರೆ.

ಈಗಾಗಲೇ ಹಿಂದೂ ಕಾರ್ಯಕರ್ತರು ಜಾಮಿಯಾ ಮಸೀದಿಯಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಮೂಡಲ ಬಾಗಿಲು ಆಂಜನೇಯ ದೇವಸ್ಥಾನದ ಮೇಲೆ ಮಸೀದಿ ಮಾಡಲಾಗಿದೆ. ಈ ಬಗ್ಗೆ ಅನೇಕ ಇತಿಹಾಸಕಾರರು ದಾಖಲೆ ಉಲ್ಲೇಖ ಮಾಡಿದ್ದಾರೆ. ಈ ಬಾರಿ ಹನುಮ ಜಯಂತಿಗೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ಹೋಗಿ ಪೂಜೆ ಸಲ್ಲಿಸುತ್ತೇವೆ ಎಂದು ಹಿಂದೂ ಮುಖಂಡ ಮಂಜುನಾಥ್ ಹೇಳಿದ್ದಾರೆ. ಎಲ್ಲಾ ಹನುಮಾನ ಮಾಲದಾರಿಗಳು ಶ್ರೀರಂಗಪಟ್ಟಣಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇವೆ. ಪೂಜೆಗೆ ಅನುಮತಿ ನೀಡುವಂತೆ ಈಗಾಗಲೇ ಡಿಸಿಗೆ ಮನವಿ ಮಾಡಿದ್ದೇವೆ. ಈ ಬಾರಿ ಮಸೀದಿಯಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು. ಪೂಜೆಗೆ ಅವಕಾಶ ನೀಡದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ವತಃ ಟಿಪ್ಪು ಪರ್ಶಿಯಾದ ಖಲೀಫ್ ಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಮಸೀದಿ ಆಂಜನೇಯನ ದೇವಾಲಯವಾಗಿತ್ತು ಎಂಬುದಕ್ಕೆ ಇಂದಿಗೂ ಕುರುಹುಗಳಿದ್ದು, ಕಲ್ಯಾಣಿ ಸೇರಿದಂತೆ ಹಿಂದು ದೇವರುಗಳ ಕೆತ್ತನೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಕಾನೂನು ಬದ್ದವಾಗಿ ಆಂಜನೇಯನ ಪೂಜೆಗೆ ಅವಕಾಶ ನೀಡಬೇಕು. ಆಂಜನೇಯನ ಪೂಜೆಗೆ ಅವಕಾಶ ನೀಡದಿದ್ರೆ ಕಾನೂನು ಹೋರಾಟ ಮಾಡುವುದಾಗಿ ಕರ್ನಾಟಕ ನರೇಂದ್ರ ಮೋದಿ ವಿಚಾರ ಮಂಚ್ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಇನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published. Required fields are marked *