ಶ್ರೀಲಂಕಾ ಪ್ರವಾಸಕ್ಕೆ ಪ್ರಕಟಗೊಂಡಿರುವ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಆಟಗಾರರಿಗೆ ಮುಂಬೈಗೆ ಆಗಮಿಸುವಂತೆ ಬಿಸಿಸಿಐ ಸೂಚಿಸಿದೆ.

ಜೂನ್ 14ರೊಳಗೆ ಮುಂಬೈ ಸೇರಲು ಸೂಚಿಸಿರುವ ಬಿಸಿಸಿಐ, ಎರಡು ವಾರಗಳ ಕಾಲ ಆಟಗಾರರಿಗೆ ಕಠಿಣ ಕ್ವಾರಂಟೀನ್​​​ಗೆ ಒಳಪಡಿಸಲಿದೆ. ​​ಈ ಪೈಕಿ ಆರು ದಿನ ಪ್ರತ್ಯೇಕ ರೂಮ್​​​ಗಳಲ್ಲಿ ಕ್ವಾರಂಟೀನ್​​ನಲ್ಲಿ ಇರಲಿರುವ ಆಟಗಾರರು, ಕೋವಿಡ್​ ಟೆಸ್ಟ್​ ಬಳಿಕ ಜೊತೆಯಾಗಿ ಅಭ್ಯಾಸ ನಡೆಸಲು ಅನುಮತಿ ನೀಡಿದೆ.

ನಂತರ ಜೂನ್ 28 ರಂದು ಶ್ರೀಲಂಕಾಕ್ಕೆ ಪ್ರವಾಸ ಬೆಳಸಲಿರುವ ಟೀಮ್ ಇಂಡಿಯಾ ಆಟಗಾರರು, ಲಂಕಾ ರಾಜಧಾನಿ ಕೊಲಂಬೊದಲ್ಲಿ ಮತ್ತೆ ಏಳು ದಿನಗಳ ಕಟ್ಟುನಿಟ್ಟಿನ ಕ್ವಾರಂಟೀನ್​​ಗೆ ಒಳಗಾಗಲಿದ್ದಾರೆ. ಜುಲೈ 1ರ ನಂತರ ಆಟಗಾರರ ಅಭ್ಯಾಸಕ್ಕೆ ಅನುವು ಮಾಡಿಕೊಡಲಾಗಿದೆ.

The post ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಮುಂಬೈನಲ್ಲಿ ಟೀಮ್ ಇಂಡಿಯಾ 2 ವಾರ ಕ್ವಾರಂಟೀನ್ appeared first on News First Kannada.

Source: newsfirstlive.com

Source link