ಜುಲೈ 13ರಿಂದ ಆರಂಭವಾಗೋ ಲಂಕಾ ಪ್ರವಾಸಕ್ಕಾಗಿ, ಯಂಗ್​​ ಹಾಗೂ ಟ್ಯಾಲೆಂಟೆಡ್ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಆದರೆ ತಂಡದಲ್ಲಿ ಒಂದೊಂದು ಸ್ಲಾಟ್​​ಗೂ, ಇಬ್ಬರಿಗಿಂತ ಹೆಚ್ಚು ಆಟಗಾರರು ಕಾಂಪಿಟೇಷನ್​ಗೆ ಇಳಿದಿದ್ದಾರೆ. ಇದು ಟೀಮ್​ ಮ್ಯಾನೇಜ್​ಮೆಂಟ್​​ಗೆ​ ತಲೆನೋವು ತರಿಸಿದೆ.

ಶ್ರೀಲಂಕಾ ವಿರುದ್ಧದ ಸೀಮಿತ ಓವರ್​​ಗಳ ಸರಣಿಗೆ, ಯಂಗ್​ ಇಂಡಿಯಾ ತೊಡೆ ತಟ್ಟಿ ನಿಂತಿದೆ. ವಿರಾಟ್​ ಕೊಹ್ಲಿ ನೇತೃತ್ವದ ಪ್ರಮುಖ ತಂಡ, ಇಂಗ್ಲೆಂಡ್​ನಲ್ಲಿ ಬೀಡು ಬಿಟ್ಟಿರೋ ಕಾರಣ, ಲಂಕಾ ಸರಣಿಗಾಗಿ ಮತ್ತೊಂದು ತಂಡವನ್ನ ಬಿಸಿಸಿಐ ಪ್ರಕಟಿಸಿದೆ. ಹೀಗಾಗಿ ಸಿಂಹಳಿಯರ ಘರ್ಜನೆಯನ್ನ ಹುಟ್ಟಡಗಿಸೋಕೆ ಕಟ್ಟಿರುವ ರಣಕಲಿಗಳ ತಂಡವನ್ನ ಮುನ್ನಡೆಸೋ ಜವಾಬ್ದಾರಿ ಶಿಖರ್​ ಧವನ್​ಗೆ ಒಲಿದು ಬಂದಿದೆ. ಯಂಗ್​ ಟೀಮ್​ಗೆ ರಾಹುಲ್​ ದ್ರಾವಿಡ್​ ಹೆಡ್​ ಕೋಚ್​​ ಸ್ಥಾನ ಅಲಂಕರಿಸಿದ್ದಾರೆ.

ಮತ್ತೊಂದೆಡೆ ಟೂರ್ನಿ ಆರಂಭಕ್ಕೆ ಇನ್ನು ಒಂದು ತಿಂಗಳು ಬಾಕಿಯಿರುವಾಗಲೇ ಕ್ಯಾಪ್ಟನ್ – ಕೋಚ್​​ಗೆ ಟೆನ್ಶನ್​​ ಶುರುವಾಗಿದೆ. ತಂಡದಲ್ಲಿ ಒಂದೊಂದು ಸ್ಲಾಟ್​​ಗೂ ಭಾರಿ ಪೈಪೋಟಿ ಏರ್ಪಟ್ಟಿರೋದು ಟೀಮ್​ ಮ್ಯಾನೇಜ್​ಮೆಂಟ್​​ ತಲೆಬಿಸಿಗೆ ಕಾರಣವಾಗಿದೆ.

ಶಿಖರ್​ ಧವನ್​ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯೋದ್ಯಾರು..?
ತಂಡದಲ್ಲಿ ಒಟ್ಟು ನಾಲ್ಕು ಆರಂಭಿಕ ಆಟಗಾರರಿಗೆ, ಬಿಸಿಸಿಐ ಮಣೆ ಹಾಕಿದೆ. ಅದ್ರಲ್ಲಿ ಶಿಖರ್ ಧವನ್, ಪೃಥ್ವಿ ಶಾ, ಋತುರಾಜ್ ಗಾಯಕ್ವಾಡ್​ ಮತ್ತು ದೇವದತ್ ಪಡಿಕ್ಕಲ್ ಸೇರಿದ್ದಾರೆ. ಅರ್ಧಕ್ಕೆ ನಿಂತ IPLನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಧವನ್-ಪೃಥ್ವಿ, ಓಪನರ್ಸ್​​​ ಆಗಿ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಜೊತೆಗೆ ಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ ಟಾಪ್​​​​​ ಸ್ಕೋರರ್​ ಕೂಡ ಆಗಿದ್ರು.

ಇನ್ನು CSK ಪರ ರುತುರಾಜ್ ಗಾಯಕ್ವಾಡ್​, RCB ಪರ ಪಡಿಕ್ಕಲ್​​ ಕೂಡ ಭರ್ಜರಿ ಓಪನಿಂಗ್​​ ನೀಡ್ತಿದ್ರು. ಸದ್ಯ ನಾಲ್ವರಲ್ಲಿ ಬಿಗ್​ ಕಾಂಪಿಟೇಷನ್​​ ನಡೀತಿದ್ದು, ಅದರಲ್ಲಿ ಕ್ಯಾಪ್ಟನ್​ ಆಗಿರುವ ಧವನ್​ ಹೆಸರು ಅಂತಿಮಗೊಂಡಿದೆ. ಇನ್ನು ಉಳಿದ ಮೂವರಲ್ಲಿ ಯಾರು ಧವನ್​ ಜೊತೆ ಕಣಕ್ಕಿಳಿತಾರೆ ಅನ್ನೋದು ಸದ್ಯದ ಪ್ರಶ್ನೆ. ಆದರೆ ಪೃಥ್ವಿ ಶಾ ಅಂತರಾಷ್ಟ್ರೀಯ ಕ್ರಿಕೆಟ್​​ ಆಡಿದ ಅನುಭವ ಇರುವ ಕಾರಣ, ಪೃಥ್ವಿಗೆ ಚಾನ್ಸ್​ ನೀಡೋದೇ ಜಾಸ್ತಿ ಎನ್ನಲಾಗ್ತಿದೆ.

ಮಿಡರ್​​ ಆರ್ಡರ್​​​​ ಸ್ಲಾಟ್​​ಗೆ ಯುವ ಆಟಗಾರರ ಪೈಫೋಟಿ
ಇನ್ನು ಓಪನಿಂಗ್​​ ಸ್ಲಾಟ್​​ಗೆ ನಾಲ್ವರಲ್ಲಿ ಸ್ಫರ್ಧೆ ಏರ್ಪಟ್ಟಿದ್ರೆ, ಮಿಡಲ್​​ ಆರ್ಡರ್​​ನಲ್ಲಿ 6 ಮಂದಿ ಸ್ಲಾಟ್​ಗಾಗಿ ಕಾಂಪೀಟ್ ಮಾಡಲಿದ್ದಾರೆ. ಸೂರ್ಯಕುಮಾರ್​ ಯಾದವ್​​, ಮನೀಷ್​ ಪಾಂಡೆ, ಹಾರ್ದಿಕ್​ ಪಾಂಡ್ಯ, ನಿತಿಶ್​ ರಾಣಾ, ಇಶಾನ್​ ಕಿಶಾನ್​ ಮತ್ತು ಸಂಜು ಸ್ಯಾಮ್ಸನ್​​ ನಡುವಿನ ಪೈಪೋಟಿಯಲ್ಲಿ ಯಾರು ಬೆಂಚ್​ ಕಾಯ್ತಾರೆ ಅನ್ನೋದು, ಸದ್ಯದ ಕುತೂಹಲ. ವಿಕೆಟ್​ ಕೀಪರ್​​ನಲ್ಲಿ ಸ್ಯಾಮ್ಸನ್​- ಇಶಾನ್​​ರಲ್ಲಿ ಪೈಪೋಟಿ ಇದ್ರೆ, ಒನ್​​ಡೌನ್ ಸ್ಲಾಟ್​​​ಗೆ ಸೂರ್ಯಕುಮಾರ್​ – ಮನಿಷ್​​ ರಾಣಾ ಪೈಪೋಟಿ ನಡೆಸಬೇಕಿದೆ.

ಆದರೆ ಗೇಮ್​​ ಚೇಂಜರ್​ ಹಾರ್ದಿಕ್ ಪಾಂಡ್ಯ,​ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಆಡೋದು ಕನ್ಫರ್ಮ್​. ಸದ್ಯ ಇಶಾನ್​ ಮತ್ತು ಸೂರ್ಯ ಇಂಗ್ಲೆಂಡ್​​ ವಿರುದ್ಧ ಉತ್ತಮ​ ಪರ್ಫಾಮೆನ್ಸ್​ ನೀಡಿದ್ದಾರೆ. ಹೀಗಾಗಿ ಲಂಕಾದಲ್ಲೂ ಇವರೇ ಕಣಕ್ಕಿಯೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಆದರೆ ಇವರು ಐಪಿಎಲ್​ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡದಿರೋದು, ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರೋದಂತೂ ಸುಳ್ಳಲ್ಲ.

ಸ್ಪಿನ್​ ವಿಭಾಗದಲ್ಲೂ ನಡೀತಿದೆ ಬಿಗ್​ ಕಾಂಪಿಟೇಷನ್​
ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯ ಎಲ್ಲಾ ಪಂದ್ಯಗಳು, ಕೊಲೊಂಬೊದಲ್ಲೇ ನಡೆಯಲಿವೆ. ಇದು ಬ್ಯಾಟ್ಸ್​​ಮ್ಯಾನ್​​ಗಳ​ ಫ್ರೆಂಡ್ಲಿಯಾಗಿದ್ರೂ, ಸ್ಪಿನ್​ಗೂ ಅಷ್ಟೇ ನೆರವಾಗುತ್ತೆ. ಹಾಗಾಗಿಯೇ 6 ಸ್ಪಿನ್ನರ್​​​ಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ದೇಶ-ವಿದೇಶಗಳಲ್ಲಿ ಉತ್ತಮ ಸ್ಪಿನ್​ ರೆಕಾರ್ಡ್​ ಹೊಂದಿರುವ ಯಜುವೇಂದ್ರ ಚಹಲ್​ ಮತ್ತು ಕುಲ್ದೀಪ್​ ಯಾದವ್,​ ತಂಡದ ಆಧಾರ ಸ್ಥಂಭಗಳು. ಆದರೆ ಇತ್ತೀಚಿಗೆ ಇವರಿಬ್ಬರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಇನ್ನು ಐಪಿಎಲ್​​ನಲ್ಲಿ ಮಿಂಚಿದ ರಾಹುಲ್​ ಚಹರ್​ ಹಾಗೂ ವರುಣ್​ ಚಕ್ರವರ್ತಿ ಕೂಡ ಸ್ಥಾನ ಪಡೆದಿದ್ದಾರೆ. ಜೊತೆಗೆ ಸ್ಪಿನ್​ ಆಲ್​​ರೌಂಡರ್ಸ್​​ ಕೆ. ಗೌತಮ್​ ಮತ್ತು ಕೃನಾಲ್​ ಪಾಂಡ್ಯ ಕೂಡ ಅವಕಾಶ ಪಡೆದುಕೊಂಡಿದ್ದಾರೆ. ಈ ಐಪಿಎಲ್​​​ನಲ್ಲಿ ಗೌತಮ್​ ಒಂದು ಪಂದ್ಯವೂ ಆಡಿಲಿಲ್ಲ. ಇತ್ತ ಕೃನಾಲ್​ ಬ್ಯಾಟಿಂಗ್​-ಬೌಲಿಂಗ್​ನಲ್ಲಿ ಫ್ಲಾಪ್​ ಶೋ ತೋರಿಸಿದ್ರು. ಹಾಗಾಗಿ ಆಡುವ 11ರ ಬಳಗದಲ್ಲಿ ಯಾರು​ ಚಾನ್ಸ್​ ಪಡ್ಕೊಳ್ತಾರೆ ಅನ್ನೋದು ಉತ್ತರ ಸಿಗದ ಪ್ರಶ್ನೆಯಾಗಿದೆ.

ಭುವನೇಶ್ವರ್ ಜೊತೆಗೆ ಚೆಂಡು ಹಂಚಿಕೊಳ್ಳೋ ವೇಗಿ ಯಾರು?
ಫಾಸ್ಟ್​ ಬೌಲಿಂಗ್​​ ವಿಭಾಗದಲ್ಲೂ, ನಾಲ್ವರ ಮಧ್ಯೆ ಪೈಪೋಟಿ ನಡೀತಿದೆ. ಆದರೆ ಭುವನೇಶ್ವರ್​ ಕುಮಾರ್​ ಉಪನಾಯಕನಾಗಿರುವ ಕಾರಣ ತಂಡದಲ್ಲಿರೋದು ಕನ್ಫರ್ಮ್​ ಆಗಿದೆ. ಹಾಗಾಗಿ ಭುವಿ ಜೊತೆ ಹೊಸ ಚೆಂಡು ಹಂಚಿಕೊಳ್ಳೋಕೆ ದೀಪಕ್​ ಚಹರ್, ನವದೀಪ್​ ಸೈನಿ ಮತ್ತು ಚೇತನ್​ ಸಕಾರಿಯಾ ಕೂಡ ಸಜ್ಜಾಗಿದ್ದಾರೆ.

ದೀಪಕ್​ ಮತ್ತು ಸೈನಿ ರಾಷ್ಟ್ರೀಯ ತಂಡದಲ್ಲಿ ಆಡಿರೋ ಅನುಭವ ಹೊಂದಿರುವ ಹಿನ್ನೆಲೆ ಸಕಾರಿಯಾ ಪ್ಲೇಯಿಂಗ್ ಇಲವೆನ್​ನಲ್ಲಿ ಚಾನ್ಸ್ ಪಡೆಯೋದು ಡೌಟ್. ಆದರೆ ಟೀಮ್​ ಮ್ಯಾನೇಜ್​ಮೆಂಟ್​​, ಯಾವ ಆಧಾರದಲ್ಲಿ ಪ್ಲೆಯಿಂಗ್​ ಇಲೆವೆನ್​ ಸೆಲೆಕ್ಟ್ ಮಾಡುತ್ತೆ ಅನ್ನೋದು ಕುತೂಹಲ ಹೆಚ್ಚಿಸಿದೆ.

ಪಕ್ಕಾ ಪ್ಲಾನ್​ನೊಂದಿಗೆ ಟೀಮ್​ ಕಟ್ಟೋಕೆ ದ್ರಾವಿಡ್​ ಸಜ್ಜು
ತಂಡದಲ್ಲಿ ಒಂದೊಂದು ಸ್ಲಾಟ್​ಗೂ ಕಾಂಪಿಟೇಷನ್​ ಹೆಚ್ಚಾಗ್ತಿದ್ರೆ, ಅತ್ತ ​​​​​ ಕೋಚ್​ ರಾಹುಲ್​ ದ್ರಾವಿಡ್​ ತಂಡದಲ್ಲಿ ಎಲ್ಲರನ್ನೂ ಹೇಗೆ ಆಡಿಸೋದು ಅಂತ ಚಿಂತೆಗೀಡಾಗಿದ್ದಾರೆ. ಹೀಗಾಗಿ ಪ್ರತಿ ಸ್ಲಾಟ್​ಗೂ ನಡೀತಿರೋ ಪೈಪೋಟಿಯಲ್ಲಿ ಯಾರನ್ನ ಎಲ್ಲಿ, ಯಾವಾಗ ಆಡಿಸ್ತಾರೆ ಅನ್ನೋದೇ, ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಸೆಕೆಂಡ್ ಸ್ಟ್ರಿಂಗ್​ ಟೀಮ್ ನಿರ್ಮಿಸಿ ಮತ್ತೊಂದು ಸರಣಿಗೆ ಕಳುಹಿಸಿರುವ ಬಿಸಿಸಿಐ, ಲಂಕಾ ಸರಣಿಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಹಾಗಾಗಿ ಆಟಗಾರರಲ್ಲಿ ಏರ್ಪಟ್ಟಿರುವ ಪೈಪೋಟಿಯನ್ನ ಟೀಮ್​ ಮ್ಯಾನೇಜ್​ಮೆಂಟ್​​ ಹೇಗೆ ನಿಭಾಯಿಸುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.

The post ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕೋಚ್ ದ್ರಾವಿಡ್​ಗೆ ಟೆನ್ಶನ್ ಟೆನ್ಶನ್! appeared first on News First Kannada.

Source: newsfirstlive.com

Source link