ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳಿಂದ ಜಯ ಸಾಧಿಸಿದೆ. ಕೊಲಂಬೋದ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ 50 ಓವರ್​ ಗಳ ಏಕ ದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾವನ್ನು ಮಣಿಸುವ ಮೂಲಕ ಶಿಖರ್ ಧವನ್ ನಾಯಕತ್ವದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಶ್ರೀಲಂಕಾ ನೀಡಿದ ನೀಡಿದ ಗುರಿ ಬೆನ್ನಟ್ಟಿದ ಭಾರತ ತಂಡ 36.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸುವ ಮೂಲಕ ಗುರಿ ತಲುಪಿ ಜಯ ಸಾಧಿಸಿದೆ. ಆ ಮೂಲದ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಧವನ್ ಗೆಲುವು ತಂದು ಕೊಟ್ಟರೆ, ಟೀಂ ಇಂಡಿಯಾ ಹೆಡ್​​ ಕೋಚ್​ ಆದ ಮೊದಲ ಪಂದ್ಯದಲ್ಲಿ ರಾಹುಲ್​ ದ್ರಾವಿಡ್ ಶುಭಾರಂಭ ಮಾಡಿದ್ದಾರೆ.

ಉಳಿದಂತೆ ಹುಟ್ಟುಹಬ್ಬದ ದಿನದಂದೇ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಇಶಾನ್​ ಕಿಶಾನ್​ ಕೂಡ ಅರ್ಧ ಶತಕ ದಾಖಲಿಸಿ ಮಿಂಚಿದರು. ಇನ್ನು ಪಂದ್ಯದಲ್ಲಿ 17 ರನ್​ ಗಳಿಸಿದ್ದ ವೇಳೆ ಧವನ್​ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ 1 ಸಾವಿರ ರನ್​​ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು. ಅಲ್ಲದೇ 23 ರನ್​ ಗಳಿಸಿದ್ದ ಸಂದರ್ಭದಲ್ಲಿ ಏಕದಿನ ಮಾದರಿಯಲ್ಲಿ 6 ರನ್​ ಪೂರ್ಣಗಿಳಿಸಿದರು. ಟೀಂ ಇಂಡಿಯಾ ಪರ ತಮ್ಮ 35ನೇ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಧವನ್​​, ಕ್ಯಾಪ್ಟನ್​ ಶಿಫ್​ ಪಡೆದ ಹಿರಿಯ ಆಟಗಾರ ಎನಿಸಿಕೊಂಡರು.

The post ಶ್ರೀಲಂಕಾ ವಿರುದ್ಧ ಜಯದ ಶಿಕಾರಿಯಾಡಿದ ಶಿಖರ್​ ಬಳಗ appeared first on News First Kannada.

Source: newsfirstlive.com

Source link