ಶ್ರೀಲಂಕಾ ವಿರುದ್ಧ ಸರಣಿ​​​.. ಟೀಂ ಇಂಡಿಯಾ ಬಲಿಷ್ಠ ತಂಡ ಪ್ರಕಟ.. ಟೆಸ್ಟ್​ಗೂ ರೋಹಿತ್​​ ಕ್ಯಾಪ್ಟನ್​​​


ಭಾರತ-ಶ್ರೀಲಂಕಾ ಸರಣಿಗಾಗಿ ಟೀಮ್ ಇಂಡಿಯಾ ಪ್ರಕಟವಾಗಿದೆ. ಸೀಮಿತ ಓವರ್​​ಗಳ ನಾಯಕ ರೋಹಿತ್​ ಶರ್ಮಾಗೇ ಟೆಸ್ಟ್ ತಂಡದ ಜವಾಬ್ದಾರಿಯನ್ನೂ ವಹಿಸಲಾಗಿದೆ. ಆದರೆ KL ರಾಹುಲ್​ ಅಲಭ್ಯತೆಯಲ್ಲಿ ಜಸ್​ಪ್ರಿತ್​ ಬೂಮ್ರಾಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.

ಸದ್ಯ ರಾಹುಲ್​ ಗಾಯಗೊಂಡಿದ್ದು ಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ. ಆದ್ದರಿಂದ ಲಂಕಾ ವಿರುದ್ಧದ ಟಿ20 ಸರಣಿ ಹಾಗೂ ಟೆಸ್ಟ್ ಸರಣಿಗೆ ಬೂಮ್ರಾರನ್ನ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಹೊಸ ಮುಖಗಳಿಗೂ ಮಣೆ ಹಾಕಲಾಗಿದೆ. ಇನ್ನು ಸಂಜು ಸ್ಯಾಮ್ಸನ್​ ಟಿ20 ತಂಡಕ್ಕೆ ಕಂಬ್ಯಾಕ್​ ಮಾಡಿದ್ದಾರೆ.

ಇನ್ನು ಗಾಯದಿಂದ ತಂಡದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದಾರೆ. ಹಾಗೆಯೇ ವಿರಾಟ್​ ಕೊಹ್ಲಿ ಮತ್ತು ರಿಷಭ್​ ಪಂತ್​ಗೆ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಆದ್ರೆ ಅಜಿಂಕ್ಯ ರಹಾನೆ, ಚೇತೇಶ್ವರ್​ ಪೂಜಾರ, ವೃದ್ಧಿಮಾನ್​ ಸಾಹ ಮತ್ತು ಇಶಾಂತ್​ರನ್ನ ಡ್ರಾಪ್​ ಮಾಡಲಾಗಿದೆ.

ಶ್ರೀಲಂಕಾ ವಿರುದ್ದದ ಸರಣಿ ವೇಳಾಪಟ್ಟಿ

  • ಮೊದಲ ಟಿ20: ಫೆ.24 (ಲಕ್ನೋ)
  • ಎರಡನೇ ಟಿ20: ಫೆ.26 (ಧರ್ಮಶಾಲಾ)
  • ಮೂರನೇ ಟಿ20: ಫೆ.27 (ಧರ್ಮಶಾಲಾ)
  • 1ನೇ ಟೆಸ್ಟ್: 4 ರಿಂದ 8 ಮಾರ್ಚ್ (ಮೊಹಾಲಿ)
  • 2ನೇ ಟೆಸ್ಟ್ (ಡೇ ಆ್ಯಂಡ್​ ನೈಟ್​​): ಮಾರ್ಚ್ 12-16 (ಬೆಂಗಳೂರು)

ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್​ ಕೀಪರ್​​), ಸಂಜು ಸ್ಯಾಮ್ಸನ್​ (ವಿಕೆಟ್ ಕೀಪರ್​​) ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಜಸ್​​ಪ್ರೀತ್ ಬುಮ್ರಾ (ಉಪನಾಯಕ), ಯಜುವೇಂದ್ರ ಚಹಲ್​, ಕುಲ್ದೀಪ್​ ಯಾದವ್​, ಹರ್ಷಲ್ ಪಟೇಲ್, ಭುವನೇಶ್ವರ್​​ ಕುಮಾರ್​​​, ಮೊಹಮ್ಮದ್ ಸಿರಾಜ್, ರವಿ ಬಿಷ್ಣೋಯ್, ಅವೇಶ್ ಖಾನ್

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್​ ಪಾಂಚಲ್​, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್​ ಕೀಪರ್​​), ಕೆಎಸ್ ಭರತ್ (ವಿಕೆಟ್​ ಕೀಪರ್​​), ಶುಭ್​ಮನ್ ಗಿಲ್, ಆರ್​ ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲ್ದೀಪ್​ ಯಾದವ್, ಸೌರಭ್ ಕುಮಾರ್, ಜಸ್​ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್.

News First Live Kannada


Leave a Reply

Your email address will not be published. Required fields are marked *