ರಾಮನನ್ನ ಕರೆಯೋದಕ್ಕೆ ‘ಶ್ರೀ ರಾಮ ಸ್ತುತಿ’ಯೇ ಮೇಲು ಅಂತ ಹೇಳಿ, ಅಂತರಾಷ್ಟ್ರೀಯ ಮಾಜಿ ಕ್ರಿಕೆಟಿಗ​ ವೆಂಕಟೇಶ್​ ಪ್ರಸಾದ್​ ಹೇಳಿದ್ದಾರೆ.

ಶ್ರೀ ರಾಮ ಚಂದ್ರ ಕೃಪಾಲು ಭಜ ಮನ ಹರಣ ಭವ ಭಯ ದಾರುಣಂ|| ಎನ್ನುತ, ವೆಂಕಟೇಶ್​ ಪ್ರಸಾದ್​ ಈ ಸ್ತೋತ್ರವನ್ನ ಅದ್ಭುತವಾಗಿ ಹಾಡಿದ್ದಾರೆ. ಹಾಡೋದರ ಜೊತೆಗೆ ಈ ಸ್ತುತಿಯ ಅರ್ಥವನ್ನೂ ಕೂಡ ವಿವಿರಿಸಿರೋ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈಗಿನ ಸಮಯದಲ್ಲಿ, ದೇವರ ಮೊರೆ ಹೋಗೋ ಮೂಲಕ, ಮಾಜಿ ಕ್ರಿಕೆಟಿಗ ಎಲ್ಲರಲ್ಲೂ ಭಕ್ತಿ ಭಾವನೆಯನ್ನ ತುಂಬಿದ್ದಾರೆ.

ಇನ್ನೂ,‘‘ ಲತಾ ಮಂಗೇಶ್ಕರ್​ರವರು ಈ ಹಾಡನ್ನ ಅದ್ಭುತವಾಗಿ ಹಾಡಿದ್ದಾರೆ. ಈ ಸ್ತುತಿಯನ್ನ ಗೋಸ್ವಾಮಿ ತುಳಸಿದಾಸರು ಬರೆದಿದ್ದಾರೆ, ರಾಮನನ್ನ ಕರೆಯಲೂ ಇದೇ ಸರಿಯಾದ ದಾರಿ ಎನ್ನುತ್ತ, ಹಾಡುತ್ತ ಅದರ ಅರ್ಥವನ್ನ ನಿಮಗೆ ಹೇಳುವ ಸಣ್ಣ ಪ್ರಯತ್ನ’’ ಅಂತಲೂ ಅವರು ಬರೆದುಕೊಂಡಿದ್ದಾರೆ.

The post ‘ಶ್ರೀ ರಾಮ ಸ್ತುತಿಯ’ನ್ನ ಅದ್ಭುತವಾಗಿ ಹಾಡಿ ಅರ್ಥ ತಿಳಿಸಿಕೊಟ್ಟರು ಮಾಜಿ ಕ್ರಿಕೆಟಿಗ ವೆಂಕಟೇಶ್​ ಪ್ರಸಾದ್ appeared first on News First Kannada.

Source: newsfirstlive.com

Source link