ಶ್ರುತಿ ಹರಿಹರನ್ ಮೀ ಟೂ ಆರೋಪ ಕೇಸ್; ನಟ ಅರ್ಜುನ್ ಸರ್ಜಾಗೆ ಶೀಘ್ರ ಖುಲಾಸೆ


ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪ ‌ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ಕುರಿತಂತೆ ಸಲ್ಲಿಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಕೋರ್ಟ್​​ಗೆ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್ ಅನ್ನು ನಗರದ 8ನೇ ಎಸಿಎಂಎಂ ಕೋರ್ಟ್ ಮಾನ್ಯ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 20 ದಿನಗಳ ಹಿಂದೆ ದೂರದಾರರಾದ ಶೃತಿ ಹರಿಹರನ್​ ಅವರು ಮಾಡಿದ್ದ ಆರೋಪಗಳಿಗೆ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಿ ರಿಪೋರ್ಡ್ ಹಾಕಿದ್ದರು. ಬಿ ರಿಪೋರ್ಟ್​​​ಗೆ ಅಕ್ಷೇಪಣೆ ಸಲ್ಲಿಸಲು ಕೋರ್ಟ್​​ ಸೂಚಿನೇ ನೀಡಿತ್ತು. ಆದರೆ ಇಂದು ಆಕ್ಷೇಪಣೆ ಸಲ್ಲುಸಲು ಶೃತಿ ಹರಿಹರನ್ ಬಾರದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ಅನ್ನು ಕೋರ್ಟ್​ ಮಾನ್ಯ ಮಾಡಿ ದಾಖಲಿಸಿದೆ. ಇದರೊಂದಿಗೆ ಪ್ರಕರಣದಿಂದ ಅರ್ಜುನ್ ಸರ್ಜಾ ಖುಲಾಸೆಯಾಗುವ ನಿರೀಕ್ಷೆ ಇದೆ.

News First Live Kannada


Leave a Reply

Your email address will not be published. Required fields are marked *