‘ಶ್ರೇಯಸ್​​ ಅಯ್ಯರ್​​​ ಮತ್ತು ನನ್ನನ್ನು ಡೆಲ್ಲಿ ರಿಟೈನ್​​ ಮಾಡಿಕೊಳ್ಳೋದು ಡೌಟ್​​’- R ಅಶ್ವಿನ್


ಶ್ರೇಯಸ್​ ಅಯ್ಯರ್ ಮತ್ತು ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ರಿಟೈನ್ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಸ್ವತಃ ಆರ್​​.ಅಶ್ವಿನ್​ ತಿಳಿಸಿದ್ದಾರೆ. ಈ ಸಂಬಂಧ ಮಾತಾಡಿದ ಅಶ್ವಿನ್, ನಾನು ಮತ್ತು ಶ್ರೇಯಸ್​ ಡೆಲ್ಲಿ ಪರ ದೀರ್ಘಕಾಲ ಉಳಿಯುವುದಿಲ್ಲ ಎಂದಿದ್ದಾರೆ.

ರಿಷಭ್ ಪಂತ್​, ಕಗಿಸೋ ರಬಾಡ, ಎನ್ರಿಚ್ ನೋಕಿಯಾರನ್ನ ರಿಟೈನ್ ಮಾಡಿಕೊಳ್ಳುವುದು ಖಚಿತ. ಇನ್ನು ನಾಯಕತ್ವವನ್ನ ಕಳೆದುಕೊಂಡಿರುವ ಶ್ರೇಯಸ್​ ಅಯ್ಯರ್ ತಾವಾಗಿಯೇ ಫ್ರಾಂಚೈಸಿಯಿಂದ ಹೊರಬರಲು ಮುಂದಾಗಿದ್ದಾರೆ ಎಂದರು.

2022ರ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲಿದೆ. ಇದಕ್ಕೂ ಮುನ್ನ ಎಲ್ಲಾ ಫ್ರಾಂಚೈಸಿಗಳು 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ತಿಳಿಸಿದೆ.

The post ‘ಶ್ರೇಯಸ್​​ ಅಯ್ಯರ್​​​ ಮತ್ತು ನನ್ನನ್ನು ಡೆಲ್ಲಿ ರಿಟೈನ್​​ ಮಾಡಿಕೊಳ್ಳೋದು ಡೌಟ್​​’- R ಅಶ್ವಿನ್ appeared first on News First Kannada.

News First Live Kannada


Leave a Reply

Your email address will not be published. Required fields are marked *