ಶ್ರೇಯಸ್ ಅಯ್ಯರ್​ಗೆ ಜಾಕ್​ಪಾಟ್​; ಎಷ್ಟು ಕೋಟಿಗೆ ಯಾವ ತಂಡದ ಪಾಲಾದ್ರು..?


ಐಪಿಎಲ್​ ಹರಾಜಿನಲ್ಲಿ ಶ್ರೇಯಸ್ ಐಯ್ಯರ್ ಫ್ರಾಂಚೈಸಿಗಳನ್ನ ಸಖತ್ ಇಂಪ್ರೆಸ್ ಮಾಡಿದ್ದಾರೆ. ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲೇ ಅಯ್ಯರ್, ಕೋಲ್ಕತ್ತಾ ನೈಟ್​ ರೈಡರ್ಸ್​ ಪಾಲಾಗಿದ್ದಾರೆ.

ಬರೋಬ್ಬರಿ 12.25 ಕೋಟಿ ರೂಪಾಯಿಗೆ ಅಯ್ಯರ್ ಸೇಲ್ ಆಗಿದ್ದಾರೆ. ಅಯ್ಯರ್​ ಬೇಸ್​ ಪ್ರೈಸ್​ 2 ಕೋಟಿ ರೂಪಾಯಿ ಇತ್ತು. 2021ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ತಂಡದ ಪರ ಆಡಿದ್ದರು. ದೆಹಲಿ ತಂಡದ ಪರವಾಗಿ, ಕ್ಯಾಪ್ಟನ್​ ಆಗಿಯೂ ತಂಡವನ್ನ ಮುನ್ನೆಡಿಸಿರುವ ಹೆಗ್ಗಳಿಕೆ ಅಯ್ಯರ್​ಗೆ ಇದೆ. ಇನ್ನು ಶಿಖರ್ ಧವನ್​ರನ್ನ ಕಿಂಗ್ಸ್​ ಇಲೆವನ್ ಪಂಜಾಬ್ ಅವರನ್ನ 8.25 ಕೋಟಿ ನೀಡಿ ಖರೀದಿಸಿದೆ.

News First Live Kannada


Leave a Reply

Your email address will not be published.